ಕ್ಯಾನ್ಸರ್ ಪೀಡಿತ ಯುವಕ ಆಸ್ಪತ್ರೆಯಿಂದಲೇ ಇಂಟರ್‌ವ್ಯೂಗೆ ಹಾಜರಿ: ಇಂಟರ್ವ್ಯೂ ಇಲ್ಲದೆ ಕೆಲಸದ ಆಫರ್ ಮಾಡಿದ ಸಿಇಒ

ಮುಂಬೈ: ಕ್ಯಾನ್ಸರ್‌ನಿಂದ ಬಳಲುತ್ತಿರುವ ಯುವಕನೋರ್ವನು ಕಿಮೋಥೆರಪಿ ಮೂಲಕ ಚೇತರಿಸಿಕೊಳ್ಳುತ್ತಿದ್ದಾನೆ. ಆದರೆ ಇದೀಗ ಆತ ಉದ್ಯೋಗಕ್ಕಾಗಿ ಆಸ್ಪತ್ರೆಯಿಂದಲೇ ಕಂಪೆನಿಗಳ ಸಂದರ್ಶನದಲ್ಲಿ ಭಾಗವಹಿಸುತ್ತಿದ್ದ ಫೋಟೋವೊಂದು ಇತ್ತೀಚೆಗೆ ವೈರಲ್‌ ಆಗಿತ್ತು. 

ಜಾರ್ಖಂಡ್‌ನ‌ ಅರ್ಷ್‌ ನಂದನ್‌ ಪ್ರಸಾದ್‌ ಎಂಬ ಈ ಯುವಕ ಲಿಂಕ್ಡ್ ಇನ್‌ನಲ್ಲಿ ತಮ್ಮ ಈ ನೋವಿನ ಕಥೆಯನ್ನು ನಿವೇದಿಸಿಕೊಂಡಿದ್ದಾರೆ. “ಎಲ್ಲ ರೀತಿಯಲ್ಲೂ ತಾನು ಸಮರ್ಥನಾಗಿದ್ದರೂ, ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ ಎಂಬ ಒಂದೇ ಕಾರಣಕ್ಕೆ ಎಲ್ಲ ಕಂಪನಿಗಳು ನನ್ನನ್ನು ಕೆಲಸಕ್ಕೆ ತೆಗೆದುಕೊಳ್ಳಲು ನಿರಾಕರಿಸುತ್ತಿವೆ. ನನಗೆ ನಿಮ್ಮ ಕರುಣೆಯ ಅವಶ್ಯಕತೆಯಿಲ್ಲ’ ಎಂದು ಬರೆದುಕೊಂಡಿದ್ದರು. ಅದನ್ನು ಓದಿದ ಮುಂಬೈ ಮೂಲಕ ಐಟಿ ಕಂಪನಿಯೊಂದರ ಮುಖ್ಯಸ್ಥ ನೀಲೇಶ್ ಸತ್ಪುಟೆಯವರು ನಂದನ್‌ ಪ್ರಸಾದ್‌ಗೆ ಉದ್ಯೋಗದ ಆಫರ್ ನೀಡಿದ್ದಾರೆ.

ನಿಮ್ಮ ಪ್ರೊಫೈಲ್‌ ನೋಡಿದ್ದೇನೆ. ನಿಮಗೆ ಯಾವಾಗ ಆಗುತ್ತದೆಯೋ ಆಗ ನೀವು ಬಂದು ನಮ್ಮ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರ್ಪಡೆಗೊಳ್ಳಬಹುದು. ನಿಮಗೆ ಸಂದರ್ಶನದ ಅವಶ್ಯಕತೆಯಿಲ್ಲ’ ಎಂದು ಹೇಳಿದ್ದಾರೆ. ಈ ವಿಚಾರ ಲಿಂಕ್ಡ್ಇನ್‌ನಲ್ಲಿ ಅನೇಕರ ಮನ ಗೆದ್ದಿದೆ.