-->
ಗಾಂಜಾ ವ್ಯಸನಿ ಪುತ್ರನ ಕಣ್ಣಿಗೆ ಖಾರದ ಪುಡಿ ಹಾಕಿ ಥಳಿಸಿದ ತಾಯಿ!

ಗಾಂಜಾ ವ್ಯಸನಿ ಪುತ್ರನ ಕಣ್ಣಿಗೆ ಖಾರದ ಪುಡಿ ಹಾಕಿ ಥಳಿಸಿದ ತಾಯಿ!

ಸೂರ್ಯಪೇಟೆ(ತೆಲಂಗಾಣ): ಗಾಂಜಾ ವ್ಯಸನಿ ಪುತ್ರನಿಗೆ ತಾಯಿಯೇ ಕಣ್ಣಿಗೆ ಖಾರದ ಪುಡಿ ಹಾಕಿ ಥಳಿಸಿ ಭಾರಿ ಶಿಕ್ಷೆ ನೀಡಿರುವ ಘಟನೆ ಸೂರ್ಯಪೇಟೆ ಜಿಲ್ಲೆಯ ಕೊಡಾದ ನಗರದ ಗಾಂಧಿ ನಗರದಲ್ಲಿ ನಡೆದಿದೆ. 

ಮಹಿಳೆಯ 16 ವರ್ಷದ ಪುತ್ರ ಕಳೆದ ಎರಡು ವರ್ಷಗಳಿಂದ ಗಾಂಜಾ ಚಟವನ್ನು ಅಂಟಿಸಿಕೊಂಡಿದ್ದ.  ಗಾಂಜಾ ಸೇವನೆ ನಿಲ್ಲಿಸುವಂತೆ ತಾಯಿ ಎಷ್ಟು ಬುದ್ಧಿವಾದ ಹೇಳಿದರೂ ಆತ ಅವಳ ಮಾತನ್ನು ಕೇಳಿರಲಿಲ್ಲ. ಪರಿಣಾಮ ತಾಯಿ ಈ ನಿರ್ಧಾರಕ್ಕೆ ಬಂದಿದ್ದಾಳೆ.

ಅವನ ವರ್ತನೆಯಿಂದ ಬೇಸತ್ತ ಈ ತಾಯಿ ಇದೀಗ, ಆತನನ್ನು ಹಗ್ಗದಿಂದ ಕಟ್ಟಿ ಹಾಕಿ ಕಣ್ಣಿಗೆ ಮೆಣಸಿನ ಪುಡಿ ಎರಚಿ ಅಮಾನುಷವಾಗಿ ಥಳಿಸಿದ್ದಾಳೆ. ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.‌ ಈ ಬಗ್ಗೆ ಕೆಲವು ನೆಟಿಜನ್‌ಗಳು ತಾಯಿಯ ಕ್ರಮವನ್ನು ಬೆಂಬಲಿಸಿದ್ದಾರೆ. ಕೆಲವರು ಪುತ್ರನೊಂದಿಗೆ ಈ ರೀತಿ ಕ್ರೂರವಾಗಿ ವರ್ತಿಸಬಾರದು ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಆಕೆಯನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವಂತೆ ಸಲಹೆ ನೀಡುತ್ತಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

  

  

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100