-->

ಚಾಯ್ ವಾಲಿಯಾದ ಅರ್ಥಶಾಸ್ತ್ರ ಪದವೀಧರೆ: ಈಕೆಯ ಕಥೆಯೇನು ಗೊತ್ತೇ?

ಚಾಯ್ ವಾಲಿಯಾದ ಅರ್ಥಶಾಸ್ತ್ರ ಪದವೀಧರೆ: ಈಕೆಯ ಕಥೆಯೇನು ಗೊತ್ತೇ?

ಪಟನಾ: ಚಹಾ ಎಲ್ಲರ ಅತ್ಯಂತ ಇಷ್ಟದ ಪೇಯ. ಸ್ವತಃ ಭಾರತದ ಪ್ರಧಾನಿಯವರೇ ಚಹಾ ಮಾರಾಟ ಮಾಡಿದ್ದೇನೆಂದು ಹೇಳಿದ್ದಾರೆ‌. ಪ್ರತಿಯೊಬ್ಬ ಚಹಾ ಪ್ರೇಮಿಗೂ ಓರ್ವ ಫೇವರಿಟ್​ ಚಾಯ್​ವಾಲಾ ಇದ್ದೇ ಇರುತ್ತಾರೆ. ಇದೀಗ ಈ ಸಾಲಿಗೆ ಮತ್ತೊಬ್ಬರು ಸೇರ್ಪಡೆಗೊಂಡಿದ್ದಾರೆ. ಆದರೆ, ಇವರು ಚಾಯ್​ವಾಲಾ ಅಲ್ಲ ಚಾಯ್​ವಾಲಿ. 

ಈ ಖ್ಯಾತ ಚಾಯ್​ವಾಲಿಯ ಹೆಸರು ಪ್ರಿಯಾಂಕಾ ಗುಪ್ತಾ ಬಿಹಾರ ಮೂಲದವರಾಗಿದ್ದು, ಅರ್ಥಶಾಸ್ತ್ರದಲ್ಲಿ ಪದವೀಧರೆಯಾಗಿದ್ದಾರೆ. ಎರಡು ವರ್ಷಗಳ ಕಾಲ ನೌಕರಿಗಾಗಿ ಅಲೆದಾಡಿ ಕಡೆಗೆ ಯಾವುದೇ ಕೆಲಸ ದೊರಕದಿದ್ದಾಗ ಬಿಹಾರ ರಾಜಧಾನಿ ಪಟನಾದಲ್ಲಿರುವ ಮಹಿಳಾ ಕಾಲೇಜಿನ ಬಳಿ ಟೀ ಸ್ಟಾಲ್​ ಹಾಕಿಕೊಂಡಿದ್ದಾರೆ. 

2019ರಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಪದವಿ ಮುಗಿಸಿರುವ ಪ್ರಿಯಾಂಕಾ ಗುಪ್ತಾ ಮಧ್ಯಪ್ರದೇಶದ ಖ್ಯಾತ ಚಾಯ್​ವಾಲಾ ಹಾಗೂ ಎಂಬಿಎ ಪದವೀಧರ ಪ್ರಫುಲ್​ ಬಿಲ್ಲೋರ್ ಅವರಿಂದ ಸ್ಪೂರ್ತಿಗೊಂಡಿದ್ದಾರಂತೆ. ಈ ಬಗ್ಗೆ ತಮ್ಮ ಜೀವನ ಕತೆಯನ್ನು ಹಂಚಿಕೊಂಡರುವ ಪ್ರಿಯಾಂಕಾ, "ಅನೇಕ ಚಾಯ್​ವಾಲಾಗಳು ಇರುವಾಗ ತಾನು, ಚಾಯ್​ವಾಲಿ ಯಾಕಾಗಬಾರದು? ನಾನು ನನ್ನ ಪದವಿ ಶಿಕ್ಷಣವನ್ನು 2019ರಲ್ಲಿ ಮುಗಿಸಿದೆ. ಆದರೆ, ಕಳೆದ ಎರಡು ವರ್ಷಗಳಿಂದ ಯಾವುದೇ ಉದ್ಯೋಗ ದೊರಕಲಿಲ್ಲ. ಆದ್ದರಿಂದ ಪ್ರಫುಲ್ಲ್​ ಬಿಲ್ಲೋರ್​ ಅವರನ್ನು ಸ್ಫೂರ್ತಿಯಾಗಿರಿಸಿಕೊಂಡು ಚಾಯ್ ವಾಲಿ ಆದೆ ಎಂದು ಹೇಳಿದ್ದಾರೆ. 

24ರ ಹರೆಯದ ಪ್ರಿಯಾಂಕಾ ಕುಲ್ಹದ್​ ಚಾಯ್​ನಿಂದ ಪಾನ್​ ಚಾಯ್​ದವರೆಗೂ ವಿವಿಧ ರೀತಿಯ ಚಹಾವನ್ನು ಮಾರಾಟ ಮಾಡುತ್ತಾರೆ. ಅವರ ಒಂದು ಕಪ್​ ಚಹಾಕ್ಕೆ 15 ರಿಂದ 20 ರೂ. ದರವಿರುತ್ತದೆ. 

ಇನ್ನೂ ಪ್ರಫುಲ್​ ಬಿಲ್ಲೋರ್ ಬಗ್ಗೆ ಹೇಳುವುದಾದರೆ, ಮಧ್ಯಪ್ರದೇಶದ ಪ್ರಫುಲ್​ ಸದ್ಯ ಗುಜರಾತ್​ನ ಅಹಮದಾಬಾದ್​ನಲ್ಲಿ ಇದ್ದಾರೆ. ಇವರು ದೇಶಾದ್ಯಂತ ಎಂಬಿಎ ಚಾಯ್​ವಾಲಾ ಎಂದೇ ಪ್ರಖ್ಯಾತಿ ಆಗಿದ್ದಾರೆ. ಬರೋಬ್ಬರಿ 3 ಕೋಟಿ ರೂ. ವಹಿವಾಟು ಮಾಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಸಿಎಟಿ ಅಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯವಾಗದಿದ್ದಾಗ ಅಧ್ಯಯನವನ್ನು ಅರ್ಧಕ್ಕೆ ಬಿಡಲು ನಿರ್ಧರಿಸುತ್ತಾರೆ. 

ಬಳಿಕ ಪ್ರಫುಲ್ ಬೀದಿ ಬದಿಯಲ್ಲಿ ಟೀ ಮಾರಾಟ ಮಾಡಲು ಆರಂಭಿಸುತ್ತಾರೆ. ಇದಕ್ಕೂ ಮುನ್ನ ಅಹಮದಾಬಾದ್​ನ ರೆಸ್ಟೋರೆಂಟ್​ ಒಂದರಲ್ಲಿ ಪಾರ್ಟ್​ ಟೈಮ್​ ಕೆಲಸ ಮಾಡುತ್ತಿರುತ್ತಾರೆ. ಇದೇ ವೇಳೆ ಟೀ ಮಾಡುವುದನ್ನು ಚೆನ್ನಾಗಿ ಕಲಿಯುವ ಪ್ರಫುಲ್​ ಕೊನೆಗೆ ತನ್ನದೇ ಸ್ವಂತ ಟೀ ಶಾಪ್​ ಆರಂಭಿಸುತ್ತಾರೆ. ಆರಂಭದಲ್ಲಿ ವ್ಯಾಪಾರವಿಲ್ಲದೇ ಸಮಸ್ಯೆ ಎದುರಾದರೂ ನಂತರದ ದಿನಗಳಲ್ಲಿ ವ್ಯವಹಾರ ಚೆನ್ನಾಗಿಯೇ ನಡೆಯಲು ಆರಂಭಿಸುತ್ತದೆ. 

Ads on article

Advertise in articles 1

advertising articles 2

Advertise under the article