-->
ಪೆಟ್ರೋಲ್ ಟ್ಯಾಂಕ್ ‌ಮೇಲೆ ಪ್ರೇಯಸಿಯ ಕೂರಿಸಿ ಸಂಚರಿಸುತ್ತಿದ್ದ ರೊಮ್ಯಾನ್ಸ್: ಪ್ರಿಯಕರನ ಮೇಲೆ ಮೂರು ಪ್ರಕರಣ

ಪೆಟ್ರೋಲ್ ಟ್ಯಾಂಕ್ ‌ಮೇಲೆ ಪ್ರೇಯಸಿಯ ಕೂರಿಸಿ ಸಂಚರಿಸುತ್ತಿದ್ದ ರೊಮ್ಯಾನ್ಸ್: ಪ್ರಿಯಕರನ ಮೇಲೆ ಮೂರು ಪ್ರಕರಣ

ಚಾಮರಾಜನಗರ: ಪೆಟ್ರೋಲ್ ಟ್ಯಾಂಕ್ ಮೇಲೆ ಪ್ರೇಯಸಿಯನ್ನು ಕೂರಿಸಿಕೊಂಡು ಸಂಚರಿಸುತ್ತಿದ್ದ ಬೈಕ್ ನಲ್ಲಿಯೇ ರೊಮ್ಯಾನ್ಸ್ ಮಾಡಿದ್ದ ಪ್ರಿಯಕರನ ಮೇಲೆ ಮೂರು ಪ್ರಕರಣಗಳು ದಾಖಲಾಗಿವೆ. ಚಾಮರಾಜನಗರ ಸಂಚಾರ ಠಾಣೆಯ ಪೊಲೀಸರು ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಯುವಕನೊಬ್ಬ ಬೈಕ್​ ಟ್ಯಾಂಕ್​ ಮೇಲೆಯೇ ತನ್ನ ಪ್ರೇಯಸಿಯನ್ನು ಕೂರಿಸಿಕೊಂಡು ಬೈಕ್ ಸವಾರಿ ಮಾಡುವಾಗಲೇ ರೊಮ್ಯಾನ್ಸ್ ಮಾಡಿದ್ದ ವೀಡಿಯೋ ವೈರಲ್​ ಆಗಿತ್ತು. ಹಾಡಹಗಲೇ ವಾಹನಗಳು ಸಂಚರಿಸುತ್ತಿದ್ದ ರೋಡ್ ನಲ್ಲಿ ಅಪಾಯಕಾರಿ ಹಾಗೂ ಅಸಭ್ಯವಾಗಿ ವರ್ತಿಸಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. 

ಈ ಹಿನ್ನೆಲೆಯಲ್ಲಿ ಚಾಮರಾಜನಗರ ಸಂಚಾರ ಠಾಣೆ ಪೊಲೀಸರು ಮೋಟಾರು ನಿಯಮ ಕಾಯ್ದೆಯಡಿ ಹೆಚ್.ಡಿ.ಕೋಟೆಯ ಶಿವಪುರ ಗ್ರಾಮ ನಿವಾಸಿ ಸ್ವಾಮಿ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈತ ಯುವತಿಯೊಂದಿಗೆ ಜಾಲಿ ರೈಡ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅದೇ ರೀತಿ ಅಜಾಗರೂಕತೆಯ ಚಾಲನೆ, ಹೆಲ್ಮೆಟ್​ ರಹಿತ ಚಾಲನೆ ಹಾಗೂ ಅಪಾಯಕಾರಿ ಚಾಲನೆ ಎಂಬುದಾಗಿ ಮೂರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. 

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

  

  

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100