ಮಂಗಳೂರು: ಅಪಘಾತದಲ್ಲಿ ಪತಿ ಮೃತಪಟ್ಟ ಶಾಕ್; ರಾಯಚೂರಿನಲ್ಲಿ ಆರು ತಿಂಗಳ ಮಗುವನ್ನು ಕೊಲೆಗೈದು ಪತ್ನಿ ಆತ್ಮಹತ್ಯೆಗೆ ಶರಣು

ಮಂಗಳೂರು: ನಗರದ ಕುಂಟಿಕಾನ ಬಳಿ ರಸ್ತೆ ಅಪಘಾತದಿಂದ ಪತಿ ಮೃತಪಟ್ಟ ವಿಚಾರ ತಿಳಿದ ಬೆನ್ನಲ್ಲೇ ರಾಯಚೂರಿನಲ್ಲಿದ್ದ ಪತ್ನಿ ಆರು ತಿಂಗಳ ಶಿಶುವನ್ನು ಕೊಂದು ತಾನೂ ಆತ್ಮಹತ್ಯೆಗೆ ಮಾಡಿಕೊಂಡ ಹೃದಯವಿದ್ರಾವಕ ಘಟನೆಯೊಂದು ನಿನ್ನೆ ನಡೆದಿದೆ.

ಮಂಗಳೂರಿನಲ್ಲಿ ಅಗ್ನಿಶಾಮಕ ದಳದಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಂಗಾಧರ ಬಿ. ಕಮ್ಮಾರ(36), ರಾಯಚೂರಿನಲ್ಲಿದ್ದ ಪತ್ನಿ ಶೃತಿ(30), ಆರು ತಿಂಗಳ ಶಿಶು ಅಭಿರಾಮ ಮೃತ ದುರ್ದೈವಿಗಳು.


ಮಂಗಳೂರಿನ ಅಗ್ನಿಶಾಮಕ ದಳದಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಂಗಾಧರ ಬಿ. ಕಮ್ಮಾರ ಎಂಬವರು ನಗರದ ಕುಂಟಿಕಾನ ಬಳಿ ನಿನ್ನೆ ರಾತ್ರಿ 8.50ರ ಸುಮಾರಿಗೆ ರಸ್ತೆ ದಾಟುತ್ತಿದ್ದರು. ಈ ಸಂದರ್ಭ ಅವದಿಗೆ ಕಾರು ಢಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆ ಬಳಿಕ ಈ ವಿಚಾರ ರಾಯಚೂರಿನಲ್ಲಿದ್ದ ಅವರ ಪತ್ನಿ ಶೃತಿಗೆ ತಿಳಿದಿದೆ. ಪರಿಣಾಮ ಆಘಾತಗೊಂಡ ಶೃತಿ ರಾತ್ರಿ 10 ಗಂಟೆ ಸುಮಾರಿಗೆ ತಮ್ಮ ಆರು ತಿಂಗಳ ಮಗು ಅಭಿರಾಮನನ್ನು ಹತ್ಯೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪರಿಣಾಮ ಒಂದಿಡೀ ಕುಟುಂಬವೇ ದುರಂತವಾಗಿ ಅಂತ್ಯಗೊಂಡಿದೆ. 

ಅಪಘಾತದ ಬಗ್ಗೆ ಮಂಗಳೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.