-->
ಕುಡಿತಕ್ಕೆ 100ರೂ. ನೀಡಿಲ್ಲವೆಂದು ಹೆತ್ತತಾಯಿಯನ್ನೇ ಹೊಡೆದು ಕೊಂದ ಪಾಪಿ ಪುತ್ರ

ಕುಡಿತಕ್ಕೆ 100ರೂ. ನೀಡಿಲ್ಲವೆಂದು ಹೆತ್ತತಾಯಿಯನ್ನೇ ಹೊಡೆದು ಕೊಂದ ಪಾಪಿ ಪುತ್ರ

ಭುವನೇಶ್ವರ: ಕುಡಿತದ ಚಟವುಳ್ಳ ಪುತ್ರನೋರ್ವನು ಮದ್ಯಪಾನಕ್ಕೆ ನೂರು ರೂ ಕೊಡಲಿಲ್ಲವೆಂದು ಹೆತ್ತತಾಯಿಯನ್ನೇ ಬಡಿದು ಕೊಂದ ಪ್ರಕರಣವೊಂದು ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಘಟನೆಯ ಬಳಿಕ ಪುತ್ರ ಪರಾರಿಯಾಗಿ, ತಲೆಮರೆಸಿಕೊಂಡಿದ್ದಾನೆ. ಈ ಬಗ್ಗೆ ಆತನ ಅಣ್ಣ ಪೊಲೀಸರಿಗೆ ದೂರು ನೀಡಿದ್ದಾನೆ.  

ಭುವನೇಶ್ವರದ ಮಯೂರ್​ಭಂಜ್​ ಜಿಲ್ಲೆಯ ಜಶಿಪುರ್​ನಲ್ಲಿ ಸರೋಜ್ ನಾಯಕ್(21) ಎಂಬಾತ ಮದ್ಯ ಖರೀದಿಸಲು ತಾಯಿ ಸಲಂದಿ ನಾಯಕ್​ ಬಳಿ ನೂರು ರೂ. ಕೇಳಿದ್ದಾನೆ. ಆದರೆ ಹಣ ಕೊಡದಿದ್ದರಿಂದ ಸಿಟ್ಟಿಗೆದ್ದು ಗಲಾಟೆ ಮಾಡಿದ ಪುತ್ರ, ತಾಯಿಯನ್ನು ಥಳಿಸಿದ್ದಾನೆ. 

ಗಂಭೀರವಾಗಿ ಗಾಯಗೊಂಡಿದ್ದ ಸಲಂದಿ ನಾಯಕ್ ರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಮಾರ್ಗಮಧ್ಯೆಯೇ ಆಕೆ ಮೃತಪಟ್ಟಿದ್ದಾರೆ. ಈ ವಿಚಾರ ತಿಳಿದು ಪುತ್ರ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಸಲಂದಿ ನಾಯಕ್ ಹಿರಿಯ ಪುತ್ರ ಪೊಲೀಸರಿಗೆ ದೂರು ನೀಡಿದ್ದಾನೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

  

  

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100