
ಮಂಗಳೂರು: ಪುತ್ರಿಯ ಬರ್ತ್ ಡೇಯನ್ನು ಅದ್ದೂರಿಯಾಗಿ ಆಚರಿಸಬೇಕೆಂದು ಪ್ಲ್ಯಾನ್ ಮಾಡಿದ್ದ ತಂದೆ ಅದಕ್ಕಿಂತ ಮೊದಲೇ ಆತ್ಮಹತ್ಯೆಗೆ ಶರಣು!
3/08/2022 08:19:00 AM
ಮಂಗಳೂರು: ಐದನೇ ವರ್ಷದ ಪುತ್ರಿಯ ಬರ್ತ್ ಡೇಯನ್ನು ಅದ್ದೂರಿಯಾಗಿ ಆಚರಿಸಬೇಕೆಂದು ಯೋಜನೆ ಹಾಕಿದ್ದ ತಂದೆ ಹುಟ್ಟುಹಬ್ಬಕ್ಕೆ ವಾರವಿರುವಾಗಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಲ್ಯ ಕನೀರು ತೋಟದ ಕನೀರು ಬೀಡುವಿನಲ್ಲಿ ನಡೆದಿದೆ.
ಕನೀರು ತೋಟದ ಕನೀರು ಬೀಡು ನಿವಾಸಿ ಪ್ರವೀಣ್ ಪೂಜಾರಿ(34) ಆತ್ಮಹತ್ಯೆಗೆ ಶರಣಾದ ದುರ್ದೈವಿ.
ಪ್ರವೀಣ್ ಪೂಜಾರಿ ಖಾಸಗಿ ಬಸ್ ಒಂದರಲ್ಲಿ ಚೆಕ್ಕರ್ ಆಗಿ ವೃತ್ತಿ ನಿರ್ವಹಿಸುತ್ತಿದ್ದರು. ನಿನ್ನೆ ಸಂಜೆ 6ಗಂಟೆ ಸುಮಾರಿಗೆ ಮನೆಗೆ ಬಂದ ಅವರು ತಮ್ಮ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ಸಂಜೆ 7.20ರ ಹೊತ್ತಿಗೆ ಪತ್ನಿ ಮನೆಗೆ ಬಂದ ವೇಳೆ ಪ್ರವೀಣ್ ಪೂಜಾರಿ ಕೋಣೆಯ ಮೇಲ್ಛಾವಣಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಅವರು ಅದಾಗಲೇ ಮೃತಪಟ್ಟಿದ್ದರು. ಪತ್ನಿಯೊಂದಿಗಿನ ವೈಮನಸ್ಸೇ ಈ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ.