ಮೂರು ವರ್ಷದ ಮಗುವಿನ ಮೇಲೆ ಪೈಶಾಚಿಕ ಕೃತ್ಯ ಎಸಗಿದ ದೊಡ್ಡಪ್ಪ: ಕಾಮುಕ ಅರೆಸ್ಟ್

ಆನೇಕಲ್: ಮೂರು ವರ್ಷದ ಮಗುವಿನ ಮೇಲೆ ಆಕೆಯ ದೊಡ್ಡಪ್ಪನೇ ಪೈಶಾಚಿಕವಾಗಿ ವರ್ತಿಸಿ ಅತ್ಯಾಚಾರ ಎಸಗಿರುವ ಕೃತ್ಯವೊಂದು ಆನೇಕಲ್ ತಾಲೂಕಿನ ಅತ್ತಿಬೆಲೆಯ ನೆರಳೂರಿನಲ್ಲಿ ಬೆಳಕಿಗೆ ಬಂದಿದೆ. ಘಟನೆಯಿಂದ ತೀವ್ರ ರಕ್ತಸ್ರಾವವಾಗಿ ಬಾಲಕಿ ಮೃತಪಟ್ಟಿದ್ದಾಳೆ.  

ಈ ಹೇಯ ಕೃತ್ಯವನ್ನು ಎಸಗಿರುವ ಕಾಮುಕ ದೀಪವನ್ನು ಪೊಲೀಸರು ಬಂಧಿಸಿದ್ದಾರೆ.

ಸಂಬಂಧದಲ್ಲಿ ಮಗಳಾಗಿದ್ದ ಬಾಲಕಿಯ ಮೇಲೆ ಕಾಮುಕ ದೀಪು ಪೈಶಾಚಿಕವಾಗಿ ಎರಗಿದ್ದಾನೆ. ಆ ಬಳಿಕ ಆರೋಪಿ ಬಾಲಕಿಗೆ ಫುಡ್ ಪಾಯಿಸನ್ ಆಗಿದೆ ಹಾಗೂ ಅಪಘಾತವಾಗಿದೆ ಎಂಬಂತೆ ಬಿಂಬಿಸುವ ನಾಟಕ‌ವಾಡಿದ್ದಾನೆ. ಇಷ್ಟೂ ಸಾಲದೆಂಬಂತೆ, ಮೃತಪಟ್ಟ  ಮಗುವನ್ನು ವಾಹನದಿಂದ ಡಿಕ್ಕಿ ಹೊಡೆಸಿದ್ದ ಎನ್ನಲಾಗಿದೆ. 

ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ಮೇಲೆ ಅತ್ಯಾಚಾರ ಎಸಗಿರುವುದು ಬಯಲಾಗಿದೆ. ಆದ್ದರಿಂದ ಆರೋಪಿ ದೊಡ್ಡಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಪೊಕ್ಸೊ ಪ್ರಕರಣ ದಾಖಲಾಗಿದೆ.