ಮೀನುಗಾರರ ಬಲೆಗೆ ಬಿತ್ತು ಮನುಷ್ಯರ ಮುಖವನ್ನು ಹೋಲುವ ಮೀನು: ಬೈಸನ್ ಫಿಶ್ ಮನುಷ್ಯನನ್ನೇ ಕೊಲ್ಲುವಷ್ಟು ವಿಷಕಾರಿ!

ಪೂರ್ವ ಗೋದಾವರಿ(ಆಂಧ್ರಪ್ರದೇಶ): ಮೀನುಗಾರರಿಗೆ ವಿಚಿತ್ರ ವಿಚಿತ್ರವಾದ, ಬೃಹತ್ ಗಾತ್ರದ ಮೀನುಗಳು ಬಲೆಗೆ ಬೀಳುವುದು ಸಾಕಷ್ಟು ಬಾರಿ ಸುದ್ದಿಯಾಗುತ್ತಲೇ ಇರುತ್ತದೆ. ಆದರೆ, ಇದೀಗ ಮತ್ತಷ್ಟು ವಿಚಿತ್ರ ಎನ್ನಲಾದ ಅಷ್ಟಯಯ ವಿಷಕಾರಿಯಾದ ಮೀನೊಂದು ಮೀನುಗಾರರ ಬಲೆಗೆ ಬಿದ್ದಿರುವ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿಯಲ್ಲಿ ನಡೆದಿದೆ.

ಅಷ್ಟಕ್ಕೂ ಈ ಮೀನೇಕೆ ವಿಚಿತ್ರ ಹಾಗೂ ವಿಷಕಾರಿಯೆಂದರೆ, ಈ ಮೀನು ಮನುಷ್ಯರ ಮುಖವನ್ನು ಹೋಲುತ್ತಿದೆ. ಈ ಅಪರೂಪದ ಮೀನಿಗೆ ಬೈಸನ್ ಫಿಶ್ ಎಂದು ಹೆಸರಿಸಲಾಗಿದೆ. ಆದರೆ  ಸಾಮಾನ್ಯವಾಗಿ ಈ ಮೀನನ್ನು ಪಫರ್​ ಫಿಶ್, ಬಲೂನ್ ಫಿಶ್​ ಅಥವಾ ಗ್ಲೋಬ್ ಫಿಶ್ ಎಂದು ಕರೆಯಲಾಗುತ್ತದೆ. ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಉಪ್ಪಲಗುಪ್ತ ವಲಯದ ವಸಲತಿಪ್ಪದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಮೀನುಗಾರರ ಬಲೆಗೆ ಈ ವಿಚಿತ್ರ ಬಿದ್ದಿದೆ.

ಬೈಸನ್ ಫಿಶ್ ಅನ್ನು ವಿಶ್ವದ ಎರಡನೇ ಅತ್ಯಂತ ವಿಷಕಾರಿ ಮೀನು ಎಂದು ಹೇಳಲಾಗುತ್ತದೆ‌. ವಿಚಿತ್ರವೆಂದರೆ ಮನುಷ್ಯನನ್ನೇ ಕೊಲ್ಲುವಷ್ಟು ವಿಷ ಇದರಲ್ಲಿದೆ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿ ಗೋಪಾಲಕೃಷ್ಣ ವಿವರಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu