-->
MLA Salary hiked- ಶಾಸಕರ ವೇತನ 1.40 ಲಕ್ಷದಿಂದ 2.50 ಲಕ್ಷ ರೂ.ಗೆ ಏರಿಕೆ: ವೇತನ ಹೆಚ್ಚಳಕ್ಕೆ ಸರ್ಕಾರ ಸಮರ್ಥನೆ ಏನು ಗೊತ್ತೇ..?

MLA Salary hiked- ಶಾಸಕರ ವೇತನ 1.40 ಲಕ್ಷದಿಂದ 2.50 ಲಕ್ಷ ರೂ.ಗೆ ಏರಿಕೆ: ವೇತನ ಹೆಚ್ಚಳಕ್ಕೆ ಸರ್ಕಾರ ಸಮರ್ಥನೆ ಏನು ಗೊತ್ತೇ..?

ಶಾಸಕರ ವೇತನ 1.40 ಲಕ್ಷದಿಂದ 2.50 ಲಕ್ಷ ರೂ.ಗೆ ಏರಿಕೆ: ವೇತನ ಹೆಚ್ಚಳಕ್ಕೆ ಸರ್ಕಾರ ಸಮರ್ಥನೆ ಏನು ಗೊತ್ತೇ..?

ಮುಖ್ಯಮಂತ್ರಿ, ವಿಪಕ್ಷ ನಾಯಕರು, ಸಚಿವರು ಮತ್ತು ಶಾಸಕರ ವೇತನ, ಮನೆ ಬಾಡಿಗೆ ಹಾಗೂ ಇತರ ಭತ್ಯೆ ಸೇರಿದಂತೆ ಸಿಗುವ ಮಾಸಿಕ ವೇತನದಲ್ಲಿ ಭಾರೀ ಹೆಚ್ಚಳ ಮಾಡಲಾಗಿದೆ.

ಭಾಷೆಗಳಲ್ಲಿ ಶೇಕಡ 50ರಷ್ಟು ಹೆಚ್ಚಳ ಮಾಡಲಾಗಿದೆ.ವಾರದ ಹಿಂದೆ, ಈ ಕುರಿತ ಮಸೂದೆಯನ್ನು ಉಭಯ ಸದನಗಳಲ್ಲಿ ಸದ್ದಿಲ್ಲದೆ ಮಂಡನೆ ಮಾಡಲಾಗಿದ್ದು ಈ ಮಸೂದೆ ಯಾವುದೇ ಚರ್ಚೆಯಿಲ್ಲದೆ ಅಂಗೀಕಾರವಾಗಿದೆ.ರಾಜ್ಯದ ಹೀನಾಯ ಆರ್ಥಿಕ ಪರಿಸ್ಥಿತಿಯಲ್ಲೂ ತಮಗೆ ಮಾತ್ರ ವೇತನ ಹೆಚ್ಚಳವಾಗಬೇಕು ಎಂಬುದಕ್ಕೆ ಎಲ್ಲ ಶಾಸಕರೂ ಪಕ್ಷಭೇದ ಮರೆತು ಒಂದಾದ್ದಾರೆ.ಜನಸಾಮಾನ್ಯರ ಹೊರೆ ಬಗ್ಗೆ ಮಾತನಾಡದ ಶಾಸಕರು, ತಮ್ಮ ವೇತನ-ಭತ್ಯೆ ವಿಷಯ ಬಂದಾಗ ಸದ್ದಿಲ್ಲದೆ ಕೈಎತ್ತಿ ಮಸೂದೆ ಅಂಗೀಕರಿಸಿದ್ದಾರೆ.ಜನಪರ ಕಾಳಜಿ ಇಲ್ಲದ, ಈಗಿನ ಕಠಿಣ ಆರ್ಥಿಕ ಪರಿಸ್ಥಿತಿಯಲ್ಲೂ ಶಾಸಕರು ಸಚಿವರ ವೇತನ ಭತ್ಯೆ ಪರಿಷ್ಕರಣೆ ಮಾಡಿರುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಸಾರ್ವಜನಿಕರಿಂದ ಭಾರಿ ಟೀಕೆಗೆ ಒಳಗಾಗಿದೆಭತ್ಯೆ, ವೇತನ ಎಷ್ಟು ಹೆಚ್ಚಳ?

ಶಾಸಕರಿಗೆ ಸಂಬಳ ಭತ್ಯೆ ಮತ್ತು ಇತರ ವೆಚ್ಚ ಸೇರಿ ಈ ಹಿಂದೆ ಪ್ರತಿ ತಿಂಗಳು ರೂ. 1,40,000/- ಸಿಗುತ್ತಿತ್ತು ಅದನ್ನು ಈಗ ರೂ. 2,50,000/-ಕ್ಕೆ ಏರಿಸಲಾಗಿದೆ.ಮಾಜಿ ಶಾಸಕರಿಗೆ ಪ್ರತಿ ತಿಂಗಳು ತಲಾ ರೂ. 40,000/- ಪಿಂಚಣಿ ನೀಡಲಾಗುತ್ತದೆ. ಒಬ್ಬ ವ್ಯಕ್ತಿ ಐದು ವರ್ಷಗಳಿಗಿಂತ ಹೆಚ್ಚಿನ ಅವಧಿ ಶಾಸಕರಾಗಿದ್ದರೆ ಅವರಿಗೆ ಐದು ವರ್ಷಗಳ ಬಳಿಕ ಪ್ರತಿ ವರ್ಷಕ್ಕೆ 1,000ರೂ ಹೆಚ್ಚಳ ಮಾಡಿ ಪಿಂಚಣಿ ನೀಡಲಾಗುತ್ತದೆ.ಆದರೆ ಅವರಿಗೆ ನೀಡುವ ಪಿಂಚಣಿಯೂ 1,00,000/- ರೂ. ಬಾರದು ಎಂಬ ನಿರ್ಬಂಧ ವಿಧಿಸಲಾಗಿದೆ.ಇನ್ನು ಮುಂದೆ ಮಸೂದೆ ಇಲ್ಲ, ನೇರ ಪರಿಷ್ಕರಣೆ?

ಇನ್ನು ಮುಂದೆ ಪ್ರತಿ ಐದು ವರ್ಷಗಳಿಗೊಮ್ಮೆ ಶಾಸಕರು ಸಚಿವರಾಗಿ ವೇತನ ಮತ್ತು ಮತ್ತೆ ಪರಿಷ್ಕರಣೆ ಯಾಗಬೇಕು ಎಂಬ ಅಂಶವನ್ನು ಮಸೂದೆಯಲ್ಲಿ ಸೇರಿಸಲಾಗಿದೆಇದಕ್ಕಾಗಿ ಇನ್ನು ಮುಂದೆ ಯಾವುದೇ ಮಸೂದೆಯ ಅಗತ್ಯ ಇರುವುದಿಲ್ಲ 2023 ರಿಂದಲೇ ಇದು ಜಾರಿಯಾಗಲಿದೆಶಾಸಕರು ದಿನನಿತ್ಯ ಓಡಾಟ ಮಾಡಬೇಕು ಈಗಿನ ಹಣದುಬ್ಬರದಲ್ಲಿ ಎಲ್ಲವನ್ನೂ ಪರಿಗಣಿಸಿ ಶಾಸಕರ ಅಭಿಪ್ರಾಯದೊಂದಿಗೆ ವೇತನ ಭತ್ಯೆಯನ್ನು ಹೆಚ್ಚಳ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡಿದ್ದಾರೆ


ಈ ಹಿಂದೆ ನೀಡುತ್ತಿರುವ ವೇತನ ಬಗ್ಗೆ ಸಾಕಾಗುತ್ತಿರಲಿಲ್ಲ ಹಾಗಾಗಿ ಸಚಿವರಿಗೆ ಅಷ್ಟೇ ಅಲ್ಲ ಶಾಸಕರಿಗೂ ವೇತನ ಪರಿಷ್ಕರಣೆ ಅಗತ್ಯ ಮತ್ತು ಅನಿವಾರ್ಯವಾಗಿತ್ತು ಎಂದು ಜೆಡಿಎಸ್ ನ ಹಿರಿಯ ಶಾಸಕ ಬಂಡೆಪ್ಪ ಕಾಶೆಂಪುರ ಹೇಳಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

  

  

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100