
ಬೆಳ್ಳಂಬೆಳಗ್ಗೆ ಒಂಟಿ ಸಲಗದ ದಾಳಿಗೆ ತುತ್ತಾಗಿ ಕಾರ್ಮಿಕರಿಬ್ಬರು ಸಾವು
Friday, March 11, 2022
ಹಾಸನ: ಬೆಳ್ಳಂಬೆಳಗ್ಗೆ ಕಾಡಾನೆ ದಾಳಿಗೆ ತುತ್ತಾಗಿ ಕಾರ್ಮಿಕರಿಬ್ಬರು ಬಲಿಯಾಗಿರುವ ಘಟನೆ ಬೇಲೂರು ತಾಲೂಕಿನ ಕಡೇಗರ್ಜೆ ಗ್ರಾಮದಲ್ಲಿ ನಡೆದಿದೆ.
ಕಡೆಗರ್ಜೆ ಗ್ರಾಮದ ಚಿಕ್ಕಯ್ಯ(50) ಹಾಗೂ ಹೀರಯ್ಯ(52) ಕಾಡಾನೆ ದಾಳಿಗೆ ತುತ್ತಾಗಿ ಮೃತಪಟ್ಟ ದುರ್ದೈವಿಗಳು.
ಇವರಿಬ್ಬರೂ ಕಡೆಗರ್ಜೆ ಮನೆಯ ಸಮೀಪದ ತೋಟದ ಕೆಲಸಕ್ಕೆಂದು ಇಂದು ಬೆಳಗ್ಗೆ ಹೋಗುದ್ದರು. ಈ ವೇಳೆ ದಾಳಿ ಮಾಡಿದ ಒಂಟಿ ಸಲಗವೊಂದು ಕೂಲಿ ಕಾರ್ಮಿಕರನ್ನು ತುಳಿದು ಸಾಯಿಸಿದೆ. ಗುಂಪಿನಿಂದ ತಪ್ಪಿಸಿಕೊಂಡು ಬಂದು ಊರಿನ ಸಮೀಪ ಬೀಡುಬಿಟ್ಟಿರುವ ಒಂಟಿ ಸಲಗ ಬಗ್ಗೆ ಇದೀಗ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ಅರಣ್ಯ ಅಧಿಕಾರಿಗಳು ಸೂಕ್ತ ಕೈಗೊಂಡಿದ್ದರೆ ಕಾರ್ಮಿಕರಿಬ್ಬರ ಪ್ರಾಣ ಉಳಿಯುತ್ತಿತ್ತು ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಮೇಲಧಿಕಾರಿಗಳು ಬರಬೇಕೆಂದು ಆಗ್ರಹಿಸಿ ಸ್ಥಳೀಯರು ರಸ್ತೆಯಲ್ಲಿ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ.