-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಲಗೇಜ್ ತೊರೆದು ನಾಯಿಮರಿಯೊಂದಿಗೆ ಉಕ್ರೇನ್ ನಿಂದ ತಾಯ್ನಾಡಿಗೆ ಬಂದ ವೈದ್ಯಕೀಯ ವಿದ್ಯಾರ್ಥಿನಿ!

ಲಗೇಜ್ ತೊರೆದು ನಾಯಿಮರಿಯೊಂದಿಗೆ ಉಕ್ರೇನ್ ನಿಂದ ತಾಯ್ನಾಡಿಗೆ ಬಂದ ವೈದ್ಯಕೀಯ ವಿದ್ಯಾರ್ಥಿನಿ!

ಚೆನ್ನೈ (ತಮಿಳುನಾಡು): ಆಪರೇಷನ್ ಗಂಗಾ ಯೋಜನೆ ಮುಖೇನ ಉಕ್ರೇನ್‌ನಲ್ಲಿ ಸಿಲುಕಿರುವ ಬಹುತೇಕ ಭಾರತೀಯ ಮೂಲದ ವಿದ್ಯಾರ್ಥಿಗಳನ್ನು ಈಗಾಗಲೇ ಕೇಂದ್ರ ಸರಕಾರ  ಕರೆತಂದಿದೆ. ಈ ಮಧ್ಯೆ ವಿದ್ಯಾರ್ಥಿನಿಯೋರ್ವಳು ತನ್ನೊಂದಿಗೆ ತನ್ನ ನಾಯಿಯನ್ನು ಏರ್ ಲಿಫ್ಟ್ ಮಾಡಬೇಕೆಂದು ಪಟ್ಟು ಹಿಡಿದಿದ್ದಳು. ಅದಕ್ಕಾಗಿ ತನಯ ಲಗೇಜ್ ಅನ್ನೇ ತೊರೆದು ನಾಯಿಯೊಂದಿಗೆ ತಾಯ್ನಾಡಿಗೆ ವಾಪಸ್ ಆಗಿದ್ದಾಳೆ.

ಈ ಮೂಲಕ ಐದನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಕೀರ್ತನಾ ಕೊನೆಗೂ ತನ್ನ ಮುದ್ದಿನ ನಾಯಿ ‘ಕ್ಯಾಂಡಿ’ಯೊಂದಿಗೆ ಚೆನ್ನೈ ತಲುಪಿದ್ದಾರೆ. ಈ ಕ್ಯಾಂಡಿಯನ್ನು ಬಿಟ್ಟು ಬರಲೊಪ್ಪದ ಕೀರ್ತನಾ ಕೊನೆಗೂ ತನ್ನ ಮುದ್ದಿನ ನಾಯಿಮರಿಯೊಂದಿಗೆ ತಾಯ್ನಾಡಿಗೆ ಮರಳಿದ್ದಾರೆ. ಭಾರತೀಯ ರಾಯಭಾರ ಕಚೇರಿಯು ಪೆಕಿಂಗೀಸ್ ತಳಿಯ ನಾಯಿಯೊಂದಿಗೆ ತಾಯ್ನಾಡಿಗೆ ಬರಲು ಅವಕಾಶ ನೀಡುವವರೆಗೆ ತನ್ನ ಸಾಕುಪ್ರಾಣಿಯನ್ನು ಬಿಟ್ಟು ಬರುವುದಿಲ್ಲ ಎಂದು ಕೀರ್ತನಾ ಪಟ್ಟು ಹಿಡಿದಿದ್ದರು. ಭಾರತೀಯ ಪ್ರಜೆಗಳನ್ನು ತಾಯ್ನಾಡಿಗೆ ಕರೆತರಲು 'ಆಪರೇಷನ್ ಗಂಗಾ' ಭಾಗವಾಗಿ ಸರ್ಕಾರವು ಹಲವಾರು ವಿಶೇಷ ವಿಮಾನಯಾನ ಸಂಸ್ಥೆಗಳನ್ನು ಸೇವೆಗೆ ನಿಯೋಜಿಸಿವೆ. ಶನಿವಾರ ಕೀರ್ತನಾ 'ಕ್ಯಾಂಡಿ' ಜೊತೆಗೆ ಚೆನ್ನೈ ವಿಮಾನ ನಿಲ್ದಾಣವನ್ನು ತಲುಪಿದ್ದಾರೆ. ಆ ವೇಳೆ ತಮ್ಮ ಕುಟುಂಬ ಸದಸ್ಯರಿಂದ ಭಾವನಾತ್ಮಕ ಸ್ವಾಗತ ಪಡೆದರು.

ಈ ಹಿಂದೆ ಸಾಕುಪ್ರಾಣಿಯನ್ನು ಮರಳಿ ತರಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಅವರಯ ನಾಲ್ಕು ಬಾರಿ ವಿಮಾನ ರದ್ದುಗೊಳಿಸಬೇಕಾಯಿತು. ನಾನು ಹೆಚ್ಚುವರಿ ಎರಡು-ಮೂರು ದಿನಗಳವರೆಗೆ ಕಾದಿದ್ದೆ. ಕೊನೆಗೂ ರಾಯಭಾರ ಕಚೇರಿಯಿಂದ ನನಗೆ ಕರೆ ಬಂದಿದೆ. ಅವರು ನನ್ನೊಂದಿಗೆ ಸಾಕುಪ್ರಾಣಿಯನ್ನು ಕರೆತರಲು ಅವಕಾಶ ನೀಡಿದರು. ಆದರೆ, ಎರಡು ವರ್ಷದ ಪೆಕಿಂಗೀಸ್ ತಳಿಯ ನಾಯಿಮರಿಯನ್ನು ಮರಳಿ ಕರೆತಂದಿರುವ ಅವರು ತನ್ನ ಲಗೇಜ್​ಗಳನ್ನು ಅಲ್ಲೇ ಬರಬೇಕಾಯಿತು. ಉಕ್ರೇನ್ ನಿಂದ ಏರ್ ಲಿಫ್ಟ್ ಆಗುವ ಸಂದರ್ಭ ನಾಯಿಮರಿಯನ್ನು ತರಬಹುದು. ಆದರೆ, ತಮ್ಮ ಲಗೇಜ್​ ಅನ್ನು ತರುವ ಹಾಗಿಲ್ಲ ಎಂದು ಹೇಳಲಾಗಿತ್ತು. ಈ ಷರತ್ತಿಗೆ ಒಪ್ಪಿದ ಅವರು, ತನಗೆ ಲಗೇಜ್​ಗಿಂತ ನಾಯಿ ಮುಖ್ಯ ಎಂದು ಅದನ್ನೇ ವೈದ್ಯಕೀಯ ತಂದಿದ್ದೇನೆ ಎನ್ನುತ್ತಾರೆ ಕೀರ್ತನಾ.

ಕೀರ್ತನಾ ತಮಿಳುನಾಡಿನ ಮೈಲಾಡುತುರೈ ನಿವಾಸಿ. ಇವರು ಉಕ್ರೇನ್‌ನ ಉಜ್ಹೋರೋಡ್ ನ್ಯಾಷನಲ್ ಯೂನಿವರ್ಸಿಟಿಯಲ್ಲಿ ಕೊನೆಯ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದರು.

Ads on article

Advertise in articles 1

advertising articles 2

Advertise under the article