CM Medal - ಮಂಗಳೂರು: ಮಹಿಳಾ ಅಧಿಕಾರಿ ಸಹಿತ ಆರು ಮಂದಿ ಪೊಲೀಸರಿಗೆ ಮುಖ್ಯಮಂತ್ರಿ ಪದಕ

ಮಂಗಳೂರು: ಮಹಿಳಾ ಅಧಿಕಾರಿ ಸಹಿತ ಆರು ಮಂದಿ ಪೊಲೀಸರಿಗೆ ಮುಖ್ಯಮಂತ್ರಿ ಪದಕ





ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಇಬ್ಬರು ಮಹಿಳಾ ಅಧಿಕಾರಿಗಳು ಸೇರಿದಂತೆ ಒಟ್ಟು ಆರು ಮಂದಿ ಪೊಲೀಸ್‌ ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕದ ಗೌರವ ಪ್ರಾಪ್ತಿಯಾಗಿದೆ.



ಮಂಗಳೂರು ನಗರ ಪೊಲೀಸ್‌ ಸಂಚಾರಿ ಎಸಿಪಿ ನಟರಾಜ್, ಸಿಸಿಆರ್‌ಬಿ ವಿಭಾಗದ ಪೊಲೀಸ್‌ ಸಬ್‌ ಇನ್ಸ್ ಪೆಕ್ಟರ್ ವನಜಾಕ್ಷಿ. ಕೆ, ಸಿಸಿಬಿ ವಿಭಾಗದ ಪೊಲೀಸ್‌ ಸಬ್‌ ಇನ್ಸ್ ಪೆಕ್ಟರ್ ಪ್ರದೀಪ್‌ ಟಿ.ಆರ್‌. ಮುಖ್ಯಮಂತ್ರಿ ಪದಕದ ಗೌರವಕ್ಕೆ ಭಾಜನರಾಗಿದ್ದಾರೆ.



ಅದೇ ರೀತಿ, ಬರ್ಕೆ ಠಾಣೆಯ PSI ಶೋಭಾ, ಬಜ್ಪೆ ಪೊಲೀಸ್‌ ಠಾಣೆಯ ASI ಕುಶಾಲ್‌ ಮಣಿಯಾಣಿ, ಪಣಂಬೂರು ಠಾಣೆಯ ಹಿರಿಯ ಹೆಡ್‌ಕಾನ್ಸ್‌ಸ್ಟೇಬಲ್‌ ಇಸಾಕ್ ಕೆ ಆಯ್ಕೆಯಾಗಿದ್ದಾರೆ.



ಪೊಲೀಸ್ ಸಿಬ್ಬಂದಿಯ ನಾಗರಿಕ ಸೇವೆಯನ್ನು ಪ್ರಶಂಸಿಸಿರುವ ಮಂಗಳೂರು ನಗರ ಪೊಲೀಸ್‌ ಆಯುಕ್ತ ಎನ್. ಶಶಿಕುಮಾರ್‌, ಸಿಎಂ ಪದಕ ಪಡೆದ ಅಧಿಕಾರಿಗಳನ್ನು ಟ್ವೀಟ್‌ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.


ಇದನ್ನೂ ಓದಿ:

ಪೊಲೀಸ್ ಇಲಾಖೆಗೆ ನಡೆಯುತ್ತಿದೆ ನೇಮಕಾತಿ