-->
ಹಿಂದೂ ಯುವತಿಯ ಬಾಳಿನಲ್ಲಿ ಘೋರ ದುರಂತ ತಂದ ಪತಿ: ನಡುರಸ್ತೆಯಲ್ಲಿ ಆಕೆಯ ಮನಸೋ ಇಚ್ಛೆ ಕೊಚ್ಚಿದ!

ಹಿಂದೂ ಯುವತಿಯ ಬಾಳಿನಲ್ಲಿ ಘೋರ ದುರಂತ ತಂದ ಪತಿ: ನಡುರಸ್ತೆಯಲ್ಲಿ ಆಕೆಯ ಮನಸೋ ಇಚ್ಛೆ ಕೊಚ್ಚಿದ!

ಗದಗ: 4 ವರ್ಷಗಳ ಹಿಂದೆ ಮುಸ್ಲಿಂ ಸಮುದಾಯಕ್ಕೆ ಮತಾಂತರ ಮಾಡಿ ಹಿಂದೂ ಯುವತಿಯನ್ನು ಮದುವೆಯಾಗಿದ್ದ ವ್ಯಕ್ತಿಯೋರ್ವನು ಇದೀಗ ಆಕೆಯನ್ನು ನಡುರಸ್ತೆಯಲ್ಲೇ 20ಕ್ಕೂ ಅಧಿಕ ಬಾರಿ ಅಮಾನುಷವಾಗಿ ಮಚ್ಚಿನಿಂದ ಕೊಚ್ವಿ ಕೊಲ್ಲಲು ಯ್ನತ್ನಿಸಿರುವ ಘಟನೆ ಗದಗ ನಗರದ ಮುಂಡರಗಿ ರಸ್ತೆಯ ಲಯನ್ ಸ್ಕೂಲ್ ಗ್ರೌಂಡ್ ಬಳಿ ಗುರುವಾರ ಬೆಳಗ್ಗೆ ಸಂಭವಿಸಿದೆ. ಕಟುಕ ಪತಿಯ ಭೀಕರ ಹಲ್ಲೆಯನ್ನು ಕಂಡು ಸ್ಥಳದಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ. ಪತಿಯಿಂದ ಮಾರಣಾಂತಿಕ ಹಲ್ಲೆಗೊಳಗಾದ ಪತ್ನಿಯೀಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. 

ಅಪೂರ್ವಾ ಶಿರೂರ(26) ಅಲಿಯಾಸ್​ ಅರ್ಫಾನ್ ಬಾನು ಹಲ್ಲೆಗೊಳಗಾದ ಯುವತಿ. ಹುಬ್ಬಳ್ಳಿ ಕೋಲಪೆಟೆಯ ನಿವಾಸಿ ಇಜಾಜ್ (38) ಕೊಲೆಗೆ ಯತ್ನಿಸಿರುವ ಆರೋಪಿ. 

ಇಜಾಜ್ ಹಿಂದೂ ಯುವತಿ ಅಪೂರ್ವಾ ಶಿರೂರಳನ್ನು ಪ್ರೀತಿಸಿ  ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿ ಮದುವೆಯಾಗಿದ್ದ. ಈತನಿಗೆ ಈಗಾಗಲೇ ಬೇರೊಬ್ಬಳೊಂದಿಗೆ  ಮದುವೆಯಾಗಿತ್ತು. ಆದರೂ ಈ ಸತ್ಯ ಮುಚ್ಚಿಟ್ಟು ಅಪೂರ್ವಳನ್ನು ಮದುವೆ ಆಗಿದ್ದ.

ಮದುವೆಯ ಬಳಿಕ ಅಪೂರ್ವಾ ಶಿರೂರಳಿಗೆ ಅರ್ಫಾನ್ ಬಾನು ಎಂಬ ಹೆಸರನ್ನೂ ಇಟ್ಟಿದ್ದ. ಆರಂಭದಲ್ಲಿ ಚೆನ್ನಾಗಿಯೇ ಇದ್ದ ದಾಂಪತ್ಯ ಆ ಬಳಿಕ ಕೌಟುಂಬಿಕ ಕಲಹ ಆರಂಭವಾಗಿತ್ತು. ಕೆಲ ಸಮಯಗಳ ಬಳಿಕ ತಾನು ಇಜಾಜ್​ನಿಂದ ಮೋಸ ಹೋಗಿರುವ ವಿಚಾರ ಹಾಗೂ ತಾನು 2ನೇ ಪತ್ನಿ ಎಂಬ ಸತ್ಯ ಅಪೂರ್ವಾಳಿಗೆ ತಿಳಿದುಬಿಟ್ಟಿದೆ. ಆದ್ದರಿಂದ ಆಕೆ ಪತಿಯಿಂದ ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸಿದ್ದಳು. 

ನಾಲ್ಕೈದು ತಿಂಗಳಿಂದ ಪತಿಯಿಂದ ದೂರವಾಗಿದ್ದ ಅಪೂರ್ವಾ, ಗುರುವಾರ ಬೆಳಗ್ಗೆ ಗದಗ ನಗರದ ಮುಂಡರಗಿ ರಸ್ತೆಯ ಲಯನ್ ಸ್ಕೂಲ್ ಗ್ರೌಂಡ್​ನಲ್ಲಿ ದ್ವಿಚಕ್ರ ವಾಹನ  ಚಾಲನೆ ಕಲಿಯುತ್ತಿದ್ದಳು. ಅಲ್ಲಿಗೆ ಮಚ್ಚು ಹಿಡಿದುಕೊಂಡು ಬಂದ ಇಜಾಜ್​, ಪತ್ನಿ ಅಪೂರ್ವಾ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾನೆ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಆಕೆಯನ್ನು ತಕ್ಷಣ ಸ್ಥಳೀಯರು ಗದಗದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ಎಸ್ಪಿ ಶಿವಪ್ರಕಾಶ್ ದೇವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Ads on article

Advertise in articles 1

advertising articles 2

Advertise under the article