-->
OP - Pixel Banner ad
800 ಕೆಜಿ ತೂಕದ ಅಪರೂಪದ ದೈತ್ಯ ಮೀನು ಬಲೆಗೆ: ಈ ಮೀನು ಮಾರಾಟವಾದದ್ದು ಎಷ್ಟಕ್ಕೆ ಅಂದರೆ ಎಲ್ಲರೂ ದಂಗಾಗ್ತಾರೆ!

800 ಕೆಜಿ ತೂಕದ ಅಪರೂಪದ ದೈತ್ಯ ಮೀನು ಬಲೆಗೆ: ಈ ಮೀನು ಮಾರಾಟವಾದದ್ದು ಎಷ್ಟಕ್ಕೆ ಅಂದರೆ ಎಲ್ಲರೂ ದಂಗಾಗ್ತಾರೆ!

ಬಾಲಾಸೋರ್​: 800 ಕೆಜಿ ತೂಕದ ಅಪರೂಪದ ದೈತ್ಯ ಮೀನೊಂದು ಕಳೆದ ಶುಕ್ರವಾರ ಪಶ್ಚಿಮ ಬಂಗಾಳದ ದಿಘಾ ಕರಾವಳಿ ಪ್ರದೇಶದಲ್ಲಿ ಮೀನುಗಾರರ ಬಲೆಗೆ ಬಿದ್ದಿದೆ. ಈ ಭಾರೀ ಗಾತ್ರದ ಮೀನು 50 ಲಕ್ಷ ರೂ.ಗೆ ಮಾರಾಟವಾಗಿದೆ ಎಂದರೆ ನೀವು ನಂಬಲೇಬೇಕು.
 
ಸಮುದ್ರ ದಡದಿಂದ ಸುಮಾರು 175 ಕಿ.ಮೀ. ದೂರದ ಆಳಸಮುದ್ರದಲ್ಲಿ ಮೀನುಗಾರಿಕೆ ನಡೆಸಿರುವ ಬೋಟ್ (ಟ್ರಾಲರ್) ಈ ಮೀನನ್ನು ಹಿಡಿದಿದೆ. ವರದಿಗಳ ಪ್ರಕಾರ 11 ಅಡಿ ಉದ್ದ, 9 ಅಡಿ ಅಗಲ ಇರುವ ಈ ಮೀನು 800 ಕೆಜಿ ತೂಕವಿತ್ತು. ಅಪರೂಪದ ಮೀನು ಬಲೆಗೆ ಬಿದ್ದಿರುವ ಸುದ್ದಿ ಕೇಳಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಣ್ತುಂಬಿಕೊಂಡಿದ್ದಾರೆ. 

ಈ ದೈತ್ಯ ಮೀನನ್ನು ಮೇದಿನಿಪುರದ ದಿಘಾದ ಮೊಹ್ನಾ ಪ್ರದೇಶದಲ್ಲಿ ಹರಾಜಿನಲ್ಲಿ ಮಾರಾಟ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಬರೋಬ್ಬರಿ 50 ಲಕ್ಷ ರೂ.ಗೆ ಈ ಮೀನು ಮಾರಾಟವಾಗಿದೆ ಎಂದು ಹೇಳಲಾಗಿದೆ. 

Ads on article

Advertise in articles 1

advertising articles 2

Advertise under the article

IMG-20220907-WA0033 IMG_20220827_133242