
ಮಂಗಳೂರು: ಬೈಕ್ ವೀಲಿಂಗ್ ಸ್ಟಂಟ್ ಮಾಡಿದ ಅಪ್ರಾಪ್ತ ಸೇರಿದಂತೆ 8ಮಂದಿ ವಶಕ್ಕೆ
Saturday, March 12, 2022
ಮಂಗಳೂರು: ರಸ್ತೆಯಲ್ಲಿ ಚಲಾಯಿಸುತ್ತಲೇ ಬೈಕ್ ವೀಲಿಂಗ್ ಸ್ಟಂಟ್ ಮಾಡಿರುವ ಹಿನ್ನೆಲೆಯಲ್ಲಿ ಅಪ್ರಾಪ್ತ ಸೇರಿದಂತೆ 8ಮಂದಿಯನ್ನು ಮಂಗಳೂರು ಸಂಚಾರ ದಕ್ಷಿಣ ಠಾಣೆಯ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಇಲ್ಯಾಸ್, ಮಹಮ್ಮದ್ ಸ್ವಾಲಿಹ್, ತೌಸೀಫ್ ಮಹಮ್ಮದ್, ಕಿಶನ್ ಕುಮಾರ್, ಅಬೂಬಕ್ಕರ್ ಸಿದ್ದೀಕ್, ಮಹಮ್ಮದ್ ಅನೀಝ್, ಮಹಮ್ಮದ್ ಸಫ್ವಾನ್ ಪೊಲೀಸ್ ವಶಕ್ಕೊಳಗಾದ ಆರೋಪಿಗಳು
ಬೈಕ್ ವೀಲಿಂಗ್ ವೀಡಿಯೋವನ್ನು ಆರೋಪಿತನೋರ್ವನು ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದ. ಕೆಲವೊಂದು ಮಂದಿಯ ಅಪಾಯಕಾರಿ ವೀಲಿಂಗ್ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಅಪ್ರಾಪ್ತ ಸೇರಿದಂತೆ 8ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದರು. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಬೈಕ್ ಗಳನ್ನು ಸೀಸ್ ಮಾಡಲಾಗಿದೆ.
ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮಾತನಾಡಿ, ಐಪಿಸಿ 279, ಐಪಿಸಿ 184, ಐಪಿಸಿ 189 ಐಎಂವಿ ಕಾಯ್ದೆಯಡಿ ಸಂಚಾರಿ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇದರಲ್ಲಿ ಓರ್ವ ಅಪ್ರಾಪ್ತನೂ ಇದ್ದು, ಮುಂದೆ ಆತನಿಗೆ ಯಾವತ್ತೂ ಡಿಎಲ್ ದೊರಕುವುದಿಲ್ಲ. ರಸ್ತೆಯಲ್ಲಿ ವಾಹನ ಸಂಚಾರಿಸುವ ಇತರರಿಗೆ ತೊಂದರೆಯಾಗಬಾರದೆಂಬ ಹಿನ್ನೆಲೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಹೇಳಿದರು.