-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಆಪ್ ಸಿಎಂ ಪ್ರಮಾಣ ವಚನ ಸ್ವೀಕಾರ ದಿನ ನಡೆಯಿತೊಂದು ಭಾವನಾತ್ಮಕ ಕ್ಷಣ: 7ವರ್ಷಗಳಿಂದ ನಾಪತ್ತೆಯಾದ ಪುತ್ರ ಮತ್ತೆ ಹೆತ್ತವರನ್ನು ಸೇರಿಕೊಂಡ

ಆಪ್ ಸಿಎಂ ಪ್ರಮಾಣ ವಚನ ಸ್ವೀಕಾರ ದಿನ ನಡೆಯಿತೊಂದು ಭಾವನಾತ್ಮಕ ಕ್ಷಣ: 7ವರ್ಷಗಳಿಂದ ನಾಪತ್ತೆಯಾದ ಪುತ್ರ ಮತ್ತೆ ಹೆತ್ತವರನ್ನು ಸೇರಿಕೊಂಡ

ಖಟ್ಕರ್ ಕಲಾನ್‌ (ಪಂಜಾಬ್​): ಪಂಜಾಬ್​ನಲ್ಲಿ ಆಪ್​ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ. ಇದೀಗ ಭಗವಂತ್​​​ ಮಾನ್​​ ಸಿಂಗ್​​ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದು ಆಪ್​ ಅಭಿಮಾನಿಗಳಿಗೆ ಐತಿಹಾಸಿಕ ಕ್ಷಣವಾಗಿದ್ದರೂ, ಇನ್ನೊಂದು ಭಾವನಾತ್ಮಕ ಕ್ಷಣಕ್ಕೆ ಈ ದಿನ ಕಾರಣವಾಗಿದೆ. ಅದೇನೆಂದರೆ ಈ ಕಾರ್ಯಕ್ರಮದಿಂದಾಗಿಯೇ 7 ವರ್ಷಗಳಿಂದ ಕುಟುಂಬದಿಂದ ಬೇರ್ಪಟ್ಟ ಪುತ್ರನೊಬ್ಬ ಮನೆಯನ್ನು ಸೇರಿದ್ದಾನೆ.

ಏಳು ವರ್ಷಗಳ ಹಿಂದೆ ಫರೀದ್ಕೋಟ್​​ ಜಿಲ್ಲೆಯ ಶೇರ್​ ಸಿಂಗ್​ ವಾಲಾ ಗ್ರಾಮದ ನಿವಾಸಿ ಜಸ್ವಿಂದರ್​​ ಸಿಂಗ್ ಮಾನ್​ ಮನೆಯಿಂದ ನಾಪತ್ತೆಯಾಗಿದ್ದ. ಇದೀಗ ಸಿಎಂ ಭಗವಂತ್​​​ ಮಾನ್​​ ಸಿಂಗ್ ಸಿಎಂ ಪಟ್ಟಕ್ಕಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಿಂದಾಗಿ ತನ್ನ ಹೆತ್ತವರನ್ನು ಸೇರಿದ್ದಾನೆ. ಏಳು ವರ್ಷಗಳಿಂದ ಪುತ್ರನನ್ನು ಕಾಣದೆ ಕಂಗೆಟ್ಟಿದ್ದ ಹೆತ್ತವರ ಹರ್ಷವನ್ನು ಕಂಡು ಅಲ್ಲಿದ್ದವರೂ ಕಣ್ಣೀರಾಗಿದ್ದಾರೆ. 

ಸೇನಾ ನೇಮಕಾತಿ ತಯಾರಿಗೆಂದು 2015ರಲ್ಲಿ ಜಸ್ವಿಂದರ್​ ಮಾನ್ ಸಿಂಗ್ ಮನೆಯಿಂದ ಹೋಗಿದ್ದರು. ಆದರೆ ಆ ಬಳಿಕ ಅವರು ಮನೆಗೆ ವಾಪಸ್ ಬರಲೇ ಇಲ್ಲ. ನಿಗೂಢವಾಗಿ ನಾಪತ್ತೆಯಾಗಿದ್ದರು. ಪುತ್ರನಿಗಾಗಿ ಕುಟುಂಬಸ್ಥರು ಎಷ್ಟೇ ಹುಡುಕಾಟ ನಡೆಸಿದ್ದರೂ ಯಾವುದೇ ಫಲ ದೊರಕಿಲಿಲ್ಲ. ಇದೀಗ ಆತ ಭಗವಂತ್ ಮಾನ್​ ಸಿಂಗ್​ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಿದ್ಧತೆ ಸಮಯದಲ್ಲಿ ಜಸ್ವಿಂದರ್ ಸಿಂಗ್ ಪತ್ತೆಯಾಗಿದ್ದಾನೆ. 

ಆತ ಕುಟುಂಬವನ್ನು ಸೇರಿದ್ದೇ ರೋಚಕ. ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಜಸ್ವಿಂದರ್ ಸಿಂಗ್​​ ಟೆಂಟ್ ಕೆಲಸ ಮಾಡುತ್ತಿದ್ದ. ಈ ವೇಳೆ ಪೊಲೀಸರು ಆತನ ಗುರುತಿನ ಚೀಟಿ ಕೇಳಿದ್ದಾರೆ. ಆತನ ಬಳಿ ಗುರುತಿನ ಇರಲಿಲ್ಲ. ಇದರಿಂದ ಅನುಮಾನಗೊಂಡ ಪೊಲೀಸರು ಫರೀದ್ಕೋಟ್​ ಜಿಲ್ಲೆಯ ಸಾದಿಕ್ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ಮಾಡಿದ್ದಾರೆ. ಆಗ ಆಗಿರುವ ಘಟನೆಯನ್ನು ಈತ ಹೇಳಿದ್ದಾನೆ. ನನಗೆ ಪರಿಚಯವಿಲ್ಲ್ ವ್ಯಕ್ತಿಯೋರ್ವ ತನ್ನನ್ನು ಅಮೃತಸರಕ್ಕೆ ಕರೆದೊಯ್ದಿದ್ದಾರೆ.‌ ಅಲ್ಲಿ ಟೆಂಟ್ ಮಾಲೀಕರೊಬ್ಬರಿಗೆ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. 

ಆದರೆ, ಅವರು ನನಗೆ ಪೂರ್ಣವಾದ ಸಂಬಳ ನೀಡಿಲ್ಲ. ನನ್ನ ಜೊತೆ ಅನೇಕ ಯುವಕರು ಕೆಲಸ ಮಾಡುತ್ತಿದ್ದಾರೆ. ಮನೆಗೆ ಹೋಗಲೂ ನಮಗೆ ಅನುಮತಿಯಿಲ್ಲ ಎಂದು ಸಿಂಗ್​ ಹೇಳಿದ್ದಾನೆ. ಕೊನೆಗೆ ಆತನ ಬಳಿಯಿಂದ ಪಾಲಕರ ವಿಳಾಸ ಪಡೆದು ಅವರಿಗೆ ಮಾಹಿತಿ ನೀಡಲಾಗಿದೆ. ಇದೀಗ 7 ವರ್ಷಗಳ ಬಳಿಕ ಪುತ್ರನನ್ನು ಕಂಡ ಕುಟುಂಬಸ್ಥರು ಇದು ಕನಸೋ ನನಸೋ ಎಂದು ಊಹಿಸಿಕೊಳ್ಳಲಾಗದೇ ಮೂಕವಿಸ್ಮಿತರಾಗಿದ್ದಾರೆ.

Ads on article

Advertise in articles 1

advertising articles 2

Advertise under the article