-->
ನವಜಾತ ಶಿಶು ಅಪಹರಣ: ಸುಳಿವು ಪತ್ತೆ ಮಾಡಿಕೊಟ್ಟವರಿಗೆ 25 ಸಾವಿರ ರೂ. ಬಹುಮಾನ ಘೋಷಣೆ

ನವಜಾತ ಶಿಶು ಅಪಹರಣ: ಸುಳಿವು ಪತ್ತೆ ಮಾಡಿಕೊಟ್ಟವರಿಗೆ 25 ಸಾವಿರ ರೂ. ಬಹುಮಾನ ಘೋಷಣೆ

ದಾವಣಗೆರೆ: ನವಜಾತ ಶಿಶು ಅಪಹರಣಕ್ಕೆ ಸಂಬಂಧಿಸಿದಂತೆ,  ಪತ್ತೆ ಮಾಡಿಕೊಟ್ಟವರಿಗೆ 25 ಸಾವಿರ ರೂ. ನಗದು ಬಹುಮಾನ ನೀಡುವುದಾಗಿ ಪೊಲೀಸರು ಘೋಷಣೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. 

ದಾವಣಗೆರೆ ಚಾಮರಾಜಪೇಟೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಇಸ್ಮಾಯಿಲ್ ಜಬೀವುಲ್ಲಾ-ಉಮ್ಮೇಸಲ್ಮಾ ದಂಪತಿಯ ನವಜಾತ ಶಿಶು ಅಪಹರಣವಾಗಿತ್ತು. ಮಾ.16ರಂದು ಯಾರೋ ಈ ದಂಪತಿಯ ನವಜಾತ ಶಿಶುವನ್ನು ಕದ್ದೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆದರೆ ಇದುವರೆಗೂ ಶಿಶು ಹಾಗೂ ಆರೋಪಿಯ ಸುಳಿವು ಕೂಡ ಪತ್ತೆಯಾಗಿಲ್ಲ. 

ಈ ಕುರಿತು ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿಶು ಹಾಗೂ ಆರೋಪಿಯ ಸುಳಿವು ಪತ್ತೆ ಮಾಡಿ ಕೊಟ್ಟವರಿಗೆ 25 ಸಾವಿರ ರೂ. ನಗದು ಬಹುಮಾನ ನೀಡುವುದಾಗಿ ದಾವಣಗೆರೆ ಎಸ್​​ಪಿ ಘೋಷಣೆ ಮಾಡಿದ್ದಾರೆ. 

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article