-->
ಪ್ರೇಮಿಗಳ ದಿನದಂದೇ ಈ ಜೋಡಿ ವಿವಾಹವಾಗಲಿದೆ: ಈ ಮದುವೆಯಲ್ಲಿದೆ ಒಂದು ಸ್ಪೆಷಲ್

ಪ್ರೇಮಿಗಳ ದಿನದಂದೇ ಈ ಜೋಡಿ ವಿವಾಹವಾಗಲಿದೆ: ಈ ಮದುವೆಯಲ್ಲಿದೆ ಒಂದು ಸ್ಪೆಷಲ್


ತಿರುವನಂತಪುರ: ಈ ಜೋಡಿಯೊಂದು ಫೆ.14ರಂದು ಅಂದರೆ ಪ್ರೇಮಿಗಳ ದಿನದಂದು ಮದೆಯಾಗಲಿದ್ದಾರೆ. ಅದರಲ್ಲೇನು ವಿಶೇಷ ಸಾವಿರಾರು ಜೋಡಿಗಳು ಪ್ರೇಮಿಗಳ ದಿನದಂದು ಮದುವೆಯಾಗುತ್ತಾರೆ‌. ಈ ಜೋಡಿಯಲ್ಲಿ ಅದೇನು ವಿಶೇಷ ಏನು ಎನ್ನುತ್ತೀರಾ? ಅಸಲಿಗೆ ಈ ಜೋಡಿಯ ವಿವಾಹವೇ ಒಂದು ವಿಶೇಷ. 

ಈ ಚಿತ್ರದಲ್ಲಿ ಕಾಣಿಸುತ್ತಿರುವವರ ಹೆಸರು ಪ್ರಭಾ ಹಾಗೂ ಮನು ಕಾರ್ತಿಕಾ. ಇಲ್ಲಿ ಕಾಣಿಸುತ್ತಿರುವ ಪ್ರಭಾಳ ಮೂಲ ಹೆಸರು ಶ್ಯಾಮ್‌. ಶ್ಯಾಮ್‌ ಇದೀಗ ಪ್ರಭಾ ಆಗಿ ಪರಿವರ್ತನೆಗೊಂಡಿದ್ದಾರೆ. ಈ ಟ್ರಾನ್ಸ್‌ಜೆಂಡರ್‌ ಗಳ ವಿವಾಹವು ಪ್ರೇಮಿಗಳ ದಿನಂದು ನಡೆಯಲಿದೆ. ತಿರುವನಂತಪುರಂನಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. 

ಈ ಜೋಡಿ ವಿಶೇಷ ವಿವಾಹ ಕಾಯ್ದೆಯಡಿ ಕೇರಳ ಹೈಕೋರ್ಟ್​​ನಲ್ಲಿ ತಮ್ಮ ಮದುವೆ ನೋಂದಣಿ ಮಾಡಿಕೊಳ್ಳಲು ತಯಾರಿ ನಡೆಸಿದೆ. ಐಡಿ ಕಾರ್ಡ್​​ಗಳಲ್ಲಿ ಪುರುಷ ಹಾಗೂ ಮಹಿಳೆ ಎಂದು ಗುರುತು ಪಡೆದಿದೆ. ಅಲ್ಲದೆ ಮನು ಹಾಗೂ ಪ್ರಭಾ ತಮ್ಮ ಕುಟುಂಬದ ಆಶೀರ್ವಾದದೊಂದಿಗೆ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

ಅಂದ ಹಾಗೆ ಮನು ಹಾಗೂ ಪ್ರಭಾ 2017ರಿಂದ ಪರಿಚಿತರಾಗಿದ್ದರು. ಇಬ್ಬರೂ ಸರ್ಕಾರಿ ಉದ್ಯೋಗಿಗಳಾಗಿದ್ದು ಪರಸ್ಪರ ಪ್ರೀತಿಯ ಬಲೆಗೆ ಬಿದ್ದಿದ್ದರು. ಇದೀಗ ಕುಟುಂಬ, ಸ್ನೇಹಿತರ ಸಮ್ಮುಖದೊಂದಿಗೆ ಮದುವೆಯಾಗಲು ಹೊರಟಿದೆ.

Ads on article

Advertise in articles 1

advertising articles 2

Advertise under the article