-->
ಪತ್ನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುವಂತೆ ಸಹೋದರರಿಗೆ ಕುಮ್ಮಕ್ಕು ನೀಡಿದ ಪತಿ

ಪತ್ನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುವಂತೆ ಸಹೋದರರಿಗೆ ಕುಮ್ಮಕ್ಕು ನೀಡಿದ ಪತಿ

ಬೆಂಗಳೂರು: ವರದಕ್ಷಿಣೆಗಾಗಿ ತನ್ನ ಪತ್ನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಸಹೋದರರಿಬ್ಬರಿಗೆ ಕುಮ್ಮಕ್ಕು ನೀಡಿ ವಿಕೃತಿ ಮೆರೆದಿರುವ ಪತಿಯ ವಿರುದ್ಧ ಮಹಿಳೆಯೋರ್ವರು ಗೋವಿಂದಪುರ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಈಕೆ ತನ್ನ ಮೇಲಾಗಿರುವ ದೌರ್ಜನ್ಯ ಹಾಗೂ ಅನುಭವಿಸಿರುವ ಚಿತ್ರಹಿಂಸೆಯ ಬಗ್ಗೆ ದೂರಿನಲ್ಲಿ ಸಂಪೂರ್ಣವಾಗಿ ವಿವರಿಸಿದ್ದಾರೆ.
 
ದೇವರಜೀವನಹಳ್ಳಿಯ 30 ವರ್ಷದ ಸಂತ್ರಸ್ತ ಮಹಿಳೆ ನೀಡಿರುವ ದೂರಿನನ್ವಯ ಗೋವಿಂದಪುರ ಪೊಲೀಸರು ಆಕೆಯ ಪತಿ ಅಬ್ದುಲ್​ ನಬಿ ಹಾಗೂ ಇತರ 6 ಮಂದಿಯ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತೆ ಮಹಿಳೆಯನ್ನು ಆಕೆಯ ಪತಿ ಅಬ್ದುಲ್​ ನಬಿ ಎಂಬಾತ 2007ರಲ್ಲಿ ವಿವಾಹವಾಗಿದ್ದ. ದಂಪತಿಗೆ ಮೂವರು ಮಕ್ಕಳಿದ್ದಾರೆ. ಆರಂಭದಲ್ಲಿ ದಂಪತಿ ಅನ್ಯೋನ್ಯವಾಗಿಯೇ ಇದ್ದರು. 

2019ರಲ್ಲಿ ಸಂತ್ರಸ್ತೆಯ ತಂದೆ ಮೃತಪಟ್ಟಿದ್ದಾರೆ. ಇದಾದ ಬಳಿಕ ತವರು ಮನೆಯಿಂದ ವರದಕ್ಷಿಣೆ ತರುವಂತೆ ಸಂತ್ರಸ್ತೆಗೆ ಪತಿ ಕಿರುಕುಳ ನೀಡಲು ಆರಂಭಿಸಿದ್ದಾನೆ. ಅಲ್ಲದೆ ಮನೆಗೆ ಬರಬೇಕಾದರೆ 5 ಲಕ್ಷ ರೂ. ತರುವಂತೆ ಬೆದರಿಸಿದ್ದಾನೆ. ಹೀಗಾಗಿ ಸಂತ್ರಸ್ತೆ 2 ವರ್ಷಗಳಿಂದ ತವರು ಮನೆಯಲ್ಲೇ ವಾಸಿಸುತ್ತಿದ್ದಾಳೆ. 2 ತಿಂಗಳ ಹಿಂದೆ ಪತಿ ಅಬ್ದುಲ್ ನಬಿ ಪತ್ನಿಯ ಗಮನಕ್ಕೆ ಬಾರದಂತೆ ಬೇರೆ ಮದುವೆಯಾಗಿದ್ದಾನೆ. ಈ ವಿಚಾರ ಪತ್ನಿಗೆ ತಿಳಿದು, ಫೆ.3ರಂದು ರಾತ್ರಿ ಪತಿ ಮನೆಗೆ ಹೋಗಿ ವಿಚಾರಿಸಿದ್ದಾಳೆ. 

ಈ ವೇಳೆ ಪತ್ನಿಯನ್ನು ಕೋಣೆಯಲ್ಲಿ ಕೂಡಿ ಹಾಕಿರುವ ಪತಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಪತ್ನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುವಂತೆ  ಸಹೋದರರಿಗೆ ಸೂಚಿಸಿದ್ದಾನೆ. ಇಬ್ಬರು ಮೈದುನರು ಸಂತ್ರಸ್ತೆಗೆ ಹಲ್ಲೆ ನಡೆಸಿದ್ದಾರೆ. ಅಬ್ದುಲ್​ ನಬಿ ಸಹೋದರಿ, ಸಂತ್ರಸ್ತೆಯ ಬಟ್ಟೆ ಹರಿದು ಹಾಕಿ ಹಾಕಿದ್ದಳು. ಇದೋಗ ನೊಂದ ಸಂತ್ರಸ್ತೆ ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಗೋವಿಂದಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article