-->
ಹನಿಮೂನ್ ಗೆಂದು ಮಾಲ್ಡೀವ್ಸ್ ಗೆ ಹಾರಿದ ರತ್ನನ್ ಪ್ರಪಂಚದ ಬೆಡಗಿ: ಪತಿಯೊಂದಿಗಿದ್ದ ರೆಬಾ ಬೋಲ್ಡ್​ ಲುಕ್ ಫೋಟೋಗಳಿಗೆ ಅಭಿಮಾನಿಗಳು ಫಿದಾ

ಹನಿಮೂನ್ ಗೆಂದು ಮಾಲ್ಡೀವ್ಸ್ ಗೆ ಹಾರಿದ ರತ್ನನ್ ಪ್ರಪಂಚದ ಬೆಡಗಿ: ಪತಿಯೊಂದಿಗಿದ್ದ ರೆಬಾ ಬೋಲ್ಡ್​ ಲುಕ್ ಫೋಟೋಗಳಿಗೆ ಅಭಿಮಾನಿಗಳು ಫಿದಾ

ಬೆಂಗಳೂರು: ನಟ ಡಾಲಿ ಧನಂಜಯ್​ರೊಂದಿಗೆ “ರತ್ನನ್​ ಪ್ರಪಂಚ” ಸಿನಿಮಾದಲ್ಲಿ ಮಿಂಚಿದ ಬೆಡಗಿ ರೆಬಾ ಮೊನಿಕಾ ಜಾನ್​ ಇತ್ತೀಚೆಗಷ್ಟೇ ತಮ್ಮ ಬಾಯ್​ಫ್ರೆಂಡ್ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಇದೀಗ ಹನಿಮೂನ್​ ಗೆ ಮಾಲ್ಡೀವ್ಸ್ ಗೆ ಅವರು ಹಾರಿದ್ದು, ಅಲ್ಲಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.  


ರೆಬಾ ಮೊನಿಕಾ ಜಾನ್​ ತಮ್ಮ ಬಾಯ್​ಫ್ರೆಂಡ್​ ಜೊಮನ್​ ಜೋಸೆಫ್​ರೊಂದಿಗೆ ಹೊಸ ಬಾಳಿನ ಪ್ರಯಾಣ ಆರಂಭಿಸಿದ್ದಾರೆ. ಸದ್ಯ ರೆಬಾ ಮೊನಿಕಾ ಜಾನ್ ಹನಿಮೂನ್​ಗಾಗಿ ಮಾಲ್ಡೀವ್ಸ್​ನಲ್ಲಿ ಬೀಡು ಬಿಟ್ಟಿದ್ದಾರೆ. ಇದೀಗ ಅವರು ಪತಿ ಜೋಸೆಫ್​ ಜತೆಗಿರುವ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡಿದ್ದಾರೆ. 


ಅಲ್ಲಿ ತೆಗೆಸಿರುವ ರೆಬಾ ಬೋಲ್ಡ್​ ಲುಕ್ ಫೋಟೋಗಳನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.  ರೆಬಾ ಹಾಗೂ ಜೋಸೆಫ್​ ವಿವಾಹ ಕ್ರಿಶ್ಚಿಯನ್​ ಸಂಪ್ರದಾಯದಂತೆ ಕುಟುಂಬ, ಸ್ನೇಹಿತರು ಹಾಗೂ ಬಂಧುಬಳಗದವರ ಸಮ್ಮುಖದಲ್ಲಿ ಬೆಂಗಳೂರಿನ ಚರ್ಚ್​ ನಲ್ಲಿ ಕಳೆದ ಜನವರಿ ಸಂದರ್ಭ ಸರಳವಾಗಿ ನೆರವೇರಿತ್ತು. ತಾನು ಜೋಮನ್​ ಜೋಸೆಫ್​ ಪ್ರೀತಿಯ ಬಲೆಯಲ್ಲಿ ಬಿದ್ದಿರುವ ವಿಚಾರವನ್ನು ರೆಬಾ ಕಳೆದ ವರ್ಷ ಘೋಷಿಸಿದ್ದರು. ಸುಮಾರು ಒಂದು ವರ್ಷ ಡೇಟಿಂಗ್​​ ನಲ್ಲಿದ್ದ ಈ ಜೋಡಿ, ಇದೀಗ ವಿವಾಹವಾಗೊ ಜೀವನದ ಹೊಸ ಇನ್ನಿಂಗ್ಸ್​ ಅನ್ನು ಪ್ರಾರಂಭಿಸಿದೆ.  


ಸಿನಿಮಾ ವಿಚಾರಕ್ಕೆ ಬಂದರೆ, ರೆಬಾ ನಿವಿನ್​ ಪೌಲಿ ಅಭಿನಯದ “ಜಾಕೊಬಿಂಟೆ ಸ್ವರ್ಗರಾಜ್ಯಂ” ಸಿನಿಮಾದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಆ ಬಳಿಕ ಅವರು ಸೂಪರ್​ ಸ್ಟಾರ್​ ವಿಜಯ್​ ಅಭಿನಯದ ಬಿಗಿಲ್​ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಸಾಕಷ್ಟು ಖ್ಯಾತಿ ಪಡೆದುಕೊಂಡರು. ಕೊನೆಯದಾಗಿ ಥೊವಿನೋ ಅಭಿನಯದ ಫಾರೆನ್ಸಿಕ್​ ಮತ್ತು ಧನಂಜಯ್​ ಅಭಿನಯದ ರತ್ನನ್​ ಪ್ರಪಂಚ ಚಿತ್ರದಲ್ಲಿ ರೆಬಾ ಕಾಣಿಸಿಕೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article