-->
ತಂಗಿಯ ಸಂಸಾರ ಸರಿಪಡಿಸಲೆಂದು ಹೋದ ಅಣ್ಣನ ದುರಂತ ಸಾವು: ಭಾವನೇ ಹಂತಕ!

ತಂಗಿಯ ಸಂಸಾರ ಸರಿಪಡಿಸಲೆಂದು ಹೋದ ಅಣ್ಣನ ದುರಂತ ಸಾವು: ಭಾವನೇ ಹಂತಕ!

ಕೋಲಾರ: ತಂಗಿಯ ಸಂಸಾರವನ್ನು ಸರಿ ಮಾಡಲೆಂದು ಹೋದ ಅಣ್ಣ, ಭಾವನಿಂದಲೇ ಹತ್ಯೆಯಾದ ದುರಂತವೊಂದು ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಗೌತಮನಗರದಲ್ಲಿ ಸಂಭವಿಸಿದೆ.

ತಂಗಿಯ ಪತಿ ಬಾಬು ಕೊಲೆಗೈದಿರುವ ಆರೋಪಿ. ಸುರೇಶ್​ (36) ಹತ್ಯೆಯಾದ ದುರ್ದೈವಿ. ಘಟನೆಯಲ್ಲಿ ಇವರ ಸಹೋದರ ಹರೀಶ್ (33) ಕೂಡಾ ಗಾಯಗೊಂಡಿದ್ದಾರೆ. 

ಹತ್ಯೆಯಾದ ಸುರೇಶ್ ಅವರ ತಂಗಿಯನ್ನು ಬಾಬು ವಿವಾಹವಾಗಿದ್ದ. ಪತಿ-ಪತ್ನಿ ನಡುವೆ ಹಲವಾರು ದಿನಗಳಿಂದ ಜಗಳ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ತಂಗಿಯ ಸಂಸಾರ ಸರಿಪಡಿಸಲೆಂದು ಸಹೋದರರಾದ ಸುರೇಶ್​ ಹಾಗೂ ಹರೀಶ್​ ತಂಗಿಯ ಪತಿ ಬಾಬು ಮನೆಗೆ ಬಂದಿದ್ದರು. 

ಈ ಸಂದರ್ಭ ಪತಿ - ಪತ್ನಿಯ ಜಗಳದ ವಿಚಾರವಾಗಿ ಸಹೋದರರು ಹಾಗೂ ಭಾವನ ನಡುವೆ ವಾಗ್ವಾದ ಉಂಟಾಗಿದೆ. ಮಾತಿಗೆ ಮಾತು ಬೆಳೆದ ಹಿನ್ನೆಲೆ ಮಾರಾಮಾರಿ ನಡೆದು ಸುರೇಶ್ ದುರಂತವಾಗಿ ಹತ್ಯೆಯಾಗಿದ್ದಾರೆ. ಘಟನೆಯಲ್ಲಿ ಹರೀಶ್ ಹಾಗೂ ಬಾಬು ಕೂಡ ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಈ ಬಗ್ಗೆ ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

  

  

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100