ಮಹಿಳೆಯನ್ನು ಪುಸಲಾಯಿಸಿ ಬಲವಂತದ ಸಂಭೋಗಕ್ಕೆ ಯತ್ನಿಸಿದ ವಕೀಲ ಅರೆಸ್ಟ್

ಚಿಕ್ಕೋಡಿ: ಮಹಿಳೆಯೋರ್ವನ್ನು ಬಲವಂತದ ಸಂಭೋಗಕ್ಕೆ ಆಹ್ವಾನಿಸಿರುವ ಆರೋಪದಲ್ಲಿ ವಕೀಲನೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಚಿಕ್ಕೋಡಿ ತಾಲೂಕಿನ ಕಬ್ಬೂರು ಗ್ರಾಮದಲ್ಲಿ ನಡೆದಿದೆ.

ಪತಿಯ ಸಾರಾಯಿ ಚಟ ಬಿಡಿಸಬೇಕೆಂದು ಔಷಧಿ ಪಡೆಯಲೆಂದು ಸಂತ್ರಸ್ತ ಮಹಿಳೆ ಬಂದಿದ್ದಳು. ಔಷಧಿಯನ್ನು ತಮ್ಮ ಪರಿಚಯಸ್ಥರಿಂದಲೇ ಕೊಡಿಸುತ್ತೇನೆ ಎಂದು ನಂಬಿಸಿ ವಕೀಲ ಸಂಜು ವಡ್ರಗಾಂವಿ ಮಹಿಳೆಯನ್ನು ತನ್ನ ಮನೆಗೆ ಕರೆದೊಯ್ದಿದ್ದ. ಅದರ ಬೆನ್ನಲ್ಲೇ ಮಹಿಳೆಯ ಚೀರಾಟ ಕೇಳಿ ವಕೀಲನ ಮನೆ ಮುಂದೆ ಸ್ಥಳೀಯರು ಜಮಾಯಿಸಿದ್ದಾರೆ. ವಕೀಲ ಎಸಗಿರುವ ಕೃತ್ಯ ಬಯಲಾದ ಬೆನ್ನಲ್ಲೇ ಸ್ಥಳದಲ್ಲಿದ್ದ ಜನರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದೀಗ ವಕೀಲನಿಂದ ಮಹಿಳೆಯನ್ನು  ಪೊಲೀಸರು ರಕ್ಷಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿ ಆರೋಪಿ ವಕೀಲನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu