-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಪ್ರೇಮಿಗಳ ದಿನದ ಒಂದೇ ವಾರಕ್ಕೆ ಆ್ಯಂಟಿ ವ್ಯಾಲೆಂಟೈನ್ ಡೇ: ಈ ರೀತಿಯೂ ಬ್ರೇಕ್ ಅಪ್ ಮಾಡಿಕೊಳ್ಳಬಹುದಂತೆ!

ಪ್ರೇಮಿಗಳ ದಿನದ ಒಂದೇ ವಾರಕ್ಕೆ ಆ್ಯಂಟಿ ವ್ಯಾಲೆಂಟೈನ್ ಡೇ: ಈ ರೀತಿಯೂ ಬ್ರೇಕ್ ಅಪ್ ಮಾಡಿಕೊಳ್ಳಬಹುದಂತೆ!

ಬೆಂಗಳೂರು: ಫೆ.14 ಎಂದರೆ ಪ್ರೇಮಿಗಳ ದಿನವೆಂದು ಯಾರೂ ಬೇಕಾದರೂ ಹೇಳಬಲ್ಲರು.‌ ಅಷ್ಟೊಂದು ಪ್ರಸಿದ್ಧವಾಗಿದೆ ಈ ದಿನಾಂಕ. ಈ ಫೆ.14 ಅಂದರೆ ಪ್ರೇಮಿಗಳ ದಿನಕ್ಕೂ ಮೊದಲಿನ ಏಳು ದಿನಗಳನ್ನು ವ್ಯಾಲೆಂಟೈನ್​ ವೀಕ್​(ಪ್ರೇಮಿಗಳ ವಾರ) ಎಂಬುದಾಗಿ, ಒಂದೊಂದು ದಿನವನ್ನು ಒಂದೊಂದು ಡೇ ಎಂದು ಆಚರಿಸಲಾಗುತ್ತದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಅಂದರೆ ಆ್ಯಂಟಿ ವ್ಯಾಲೆಂಟೈನ್​ ವೀಕ್ ಎಂಬಂಥಹ ಒಂದು ದಿನ ಕೂಡ ಇದೆ ಎಂಬುದು ಹೆಚ್ವಿನವರಿಗೆ ಗೊತ್ತಿಲ್ಲ. 

ಹೌದು ಆ್ಯಂಟಿ ವ್ಯಾಲೆಂಟೈನ್ ಡೇ ಎಂಬ ದಿನವೂ ಇದೆ, ಹೇಗೆ ಪ್ರೇಮ ನಿವೇದನೆ ಮಾಡಲೊಂದು ದಿನ ಇರುವಂತೆ ಪ್ರೀತಿಯನ್ನು ಕಡಿದುಕೊಳ್ಳುವುದಕ್ಕೂ ಅರ್ಥಾತ್​ ಬ್ರೇಕಪ್ ಡೇ ಎಂದೊಂದು ದಿನ ಇದೆ. ಫೆ. 21ಅನ್ನು ಬ್ರೇಕಪ್ ಡೇ ಆಗಿ ಆಚರಣೆ ಮಾಡಲಾಗುತ್ತಿದೆ.

ಪ್ರೀತಿ-ಪ್ರೇಮದ ಸಂಬಂಧವಿರದವರು ಅಥವಾ ಪ್ರೇಮ ವೈಫಲ್ಯವಾದವರು ಈ ಆ್ಯಂಟಿ ವ್ಯಾಲೆಂಟೈನ್ ವೀಕ್ ಆಚರಿಸುತ್ತಾರೆ. ಅಂದ ಹಾಗೆ ಬ್ರೇಕಪ್ ಡೇ ಅಂದ ಮಾತ್ರಕ್ಕೆ ಅದು ಬರೀ ಪ್ರೀತಿಗೆ ಸಂಬಂಧಿಸಿದ್ದು ಮಾತ್ರ ಎಂದೇನೂ ಇಲ್ಲ. ಕೆಟ್ಟ ಅಥವಾ ಕೈಕೊಟ್ಟಿರುವ ಸಂಬಂಧವನ್ನು ಕಡಿದುಕೊಳ್ಳುವುದಕ್ಕಷ್ಟೇ ಮಾತ್ರ ಈ ಬ್ರೇಕಪ್ ಡೇಯನ್ನು ಆಚರಿಸೋದಲ್ಲ. ಕೆಟ್ಟದ್ದರಿಂದ ದೂರ ಇರುವುದಕ್ಕೂ, ಕೆಟ್ಟ ಅಭ್ಯಾಸವನ್ನು ಬಿಟ್ಟುಬಿಡುವುದಕ್ಕೂ ಇದೇ ದಿನವನ್ನು ಪಾಶ್ಚಾತ್ಯರು ಆಚರಣೆ ಮಾಡಿಕೊಳ್ಳುತ್ತಾರೆ. ಕೆಟ್ಟ ಅಭ್ಯಾಸವೇನಾದರೂ ಇದ್ದಲ್ಲಿ ಅದನ್ನು ಇಂದು ಈ ನೆಪದಲ್ಲೇ ಬಿಟ್ಟುಬಿಡಬಹುದು. ನಿಮ್ಮನ್ನು ಬ್ರೇಕ್​​ಡೌನ್​ ಮಾಡುವಂಥ ಯಾವುದೇ ಅಭ್ಯಾಸವಿದ್ದರೂ ಅದಕ್ಕೆ ಫೆ.21ರಂದೇ ಬ್ರೇಕಪ್​ ಹೇಳಿಬಿಡಬಹುದು.

Ads on article

Advertise in articles 1

advertising articles 2

Advertise under the article

ಸುರ