-->
ಈಕೆ ಲೇಸ್ ಪ್ಯಾಕೇಟ್ ನಿಂದಲೇ ಮಾಡಿದ ಸೀರೆಯುಟ್ಟು ಮಿಂಚಿದ 'ಲೇಸ್' ನಾರಿ

ಈಕೆ ಲೇಸ್ ಪ್ಯಾಕೇಟ್ ನಿಂದಲೇ ಮಾಡಿದ ಸೀರೆಯುಟ್ಟು ಮಿಂಚಿದ 'ಲೇಸ್' ನಾರಿ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ತಾವು ಪ್ರಸಿದ್ಧಿಗೆ ಬರಬೇಕೆಂದು ಏನೇನೋ ವೀಡಿಯೋಗಳನ್ನು ಚಿತ್ರೀಕರಣ ‌ಮಾಡಿ ಅವುಗಳನ್ನು ಜಾಲತಾಣಗಳಲ್ಲಿ ಹರಿಬಿಡುವುದೆಂದರೆ ಹಲವರಿಗೆ ಇನ್ನಿಲ್ಲದ ಸಂತೋಷ. ಅಂದರೆ ತಾವು ಜಾಲತಾಣಗಳಲ್ಲಿ ಮಿಂಚಬೇಕು, ಪ್ರಸಿದ್ಧಿ ಪಡೆಯಬೇಕೆಂಬುದು ಕೆಲವರ ಖಯ್ಯಾಲಿಯೂ ಹೌದಯ. ಅದಕ್ಕಾಗಿ ಚಿತ್ರವಿಚಿತ್ರವೆನಿಸುವ ರೀತಿಯಲ್ಲಿ ಕೆಲವೊಮ್ಮೆ ಕಾಣಿಸಿಕೊಳ್ಳುತ್ತಾರೆ.

ಅಂಥಹದ್ದೇ ವೀಡಿಯೋವೊಂದು ಇದೀಗ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ. ಅದೇನೆಂದರೆ ಯುವತಿಯೋರ್ವಳು ಲೇಸ್‌ ಚಿಪ್ಸ್‌ ಪ್ಯಾಕೇಟ್‌ನಿಂದಲೇ ಸೀರೆಯನ್ನು ಮಾಡಿಕೊಂಡು ಅದನ್ನೇ ಉಟ್ಟುಕೊಂಡು ವೀಡಿಯೋ ಮಾಡಿ ವೈರಲ್ ಮಾಡಿದ್ದಾಳೆ. ಚಿಪ್ಸ್‌ ಎಂದರೆ ಬಹಳಷ್ಟು ಮಂದಿಗೆ ಅಚ್ಚುಮೆಚ್ಚು. ಈಗ ಅದೇ ಚಿಪ್ಸ್‌ ಲಕೋಟೆಯಿಂದಲೇ ಸೀರೆ ತೊಟ್ಟ ನಾರಿ ಭಾರಿ ಹೊಗಳಿಕೆ ಗಳಿಸಿಕೊಳ್ಳುತ್ತಿದ್ದಾಳೆ. ಈಕೆಯ ಈ ನೂತನ ಆವಿಷ್ಕಾರಕ್ಕೆ ವಿವಿಧ ರೀತಿಯ ಕಮೆಂಟ್ಸ್ ಗಳು ಬರುತ್ತಿವೆ. 

ಲೇಸ್‌ ಕಂಪೆನಿ ಚಿಪ್ಸ್‌ ಪ್ಯಾಕೆಟ್‍ ಅನ್ನು ಕೈಯಲ್ಲಿ ಹಿಡಿದುಕೊಂಡಿರುವ ಯುವತಿ ಬೆಳ್ಳಿ ಬಣ್ಣದ ಸೀರೆಯನ್ನು ಉಟ್ಟಿದ್ದಾಳೆ. ಈಕೆಯ ಕೈಯಲ್ಲೊಂದು ಚಿಪ್ಸ್ ಪ್ಯಾಕೇಟ್‌ ಇದೆ. ಸೀರೆಗೆ ಮ್ಯಾಚಿಂಗ್‌ ಎನಿಸುವ ಬಳೆ, ಕಿವಿ ಒಲೆಯನ್ನು ಧರಿಸಿದ್ದು, ಸೀರೆಯ ತುಂಬ ಚಿಪ್ಸ್‌ ಪ್ಯಾಕೆಟ್‌ ಇರುವುದನ್ನು ವೀಡಿಯೋದಲ್ಲಿ ನೋಡಬಹುದು.

Ads on article

Advertise in articles 1

advertising articles 2

Advertise under the article