-->
ಮದ್ಯದ ಮತ್ತಲ್ಲಿ ಅಪಘಾತ ಮಾಡಿದ್ದಲ್ಲದೆ, ಪೊಲೀಸ್ ಕೊರಳ ಪಟ್ಟಿ ಹಿಡಿದ ಆರೋಪ: ನಟಿ ಕಾವ್ಯಾ ತಾಪರ್ ಬಂಧನ

ಮದ್ಯದ ಮತ್ತಲ್ಲಿ ಅಪಘಾತ ಮಾಡಿದ್ದಲ್ಲದೆ, ಪೊಲೀಸ್ ಕೊರಳ ಪಟ್ಟಿ ಹಿಡಿದ ಆರೋಪ: ನಟಿ ಕಾವ್ಯಾ ತಾಪರ್ ಬಂಧನ

ಮುಂಬೈ: ಟಾಲಿವುಡ್ ಹಾಗೂ ಕಾಲಿವುಡ್‌ನಲ್ಲಿ ನಟಿಸಿ ಭಾರೀ ಖ್ಯಾತಿ ಹೊಂದಿ ತನ್ನದೇ ಅಭಿಮಾನಿ ಬಳಗವನ್ನು ಸೃಷ್ಟಿಸಿರುವ ನಟಿ ಕಾವ್ಯಾ ತಾಪರ್ ಅವರನ್ನು ಫೆ.18 ರಂದು ರಾತ್ರಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ನಟಿ ಕಾವ್ಯಾ ತಾಪರ್ ಮದ್ಯದ ನಶೆಯಲ್ಲಿ ಕಾರು ಚಲಾಯಿಸಿ ಜುಹು ಏರಿಯಾದಲ್ಲಿ ಒಂದು ಕಾರಿಗೆ ಗುದ್ದಿದ್ದಲ್ಲದೇ ಒಬ್ಬ ಪಾದಾಚಾರಿಯನ್ನು ಗಾಯಗೊಳಿಸಿದ್ದರು‌. ಅಲ್ಲದೆ ಈ ಸಂದರ್ಭ ಸ್ಥಳದಲ್ಲಿದ್ದ ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಸ್ಥಳೀಯರ ದೂರಿನನ್ವರ ಕಾವ್ಯಾ ತಾಪರ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಕುಡಿದ ಮತ್ತಿನಲ್ಲಿ ನಟಿ ಕಾವ್ಯಾ ತಾಪರ್ ಮಹಿಳಾ ಪೊಲೀಸ್ ಓರ್ವರ ಕೊರಳ ಪಟ್ಟಿ ಹಿಡಿದು ಜಗಳ ಮಾಡಿ ಜತೆಗೆ ಹಲ್ಲೆಗೆ ಸಹ ಯತ್ನಿಸಿದ್ದಾರೆ ಎನ್ನಲಾಗಿದೆ. ಈ ಕಾರಣ ನಟಿಯನ್ನು ಪೊಲೀಸರು ಬಂಧಿಸಿದ್ದು, ಸೆಕ್ಷನ್ 353 , 504 , 427 ಗಳನ್ನು ಕಾವ್ಯಾ ತಾಪರ್ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿರುವ, ಅಪಘಾತ ಎಸಗಿರುವ, ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ, ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಪ್ರಕರಣವನ್ನು ಅವರ ಮೇಲೆ ದಾಖಲಿಸಲಾಗಿದೆ. ಹೀಗೆ ಹಲವು ದೂರುಗಳನ್ನು ಬೇರೆ ಬೇರೆ ಸೆಕ್ಷನ್‌ಗಳ ಅಡಿ ಕಾವ್ಯಾ ತಾಪರ್ ಅವರ ವಿರುದ್ಧ ದಾಖಲಿಸಲಾಗಿದೆ. 

ಮುಂಬೈಯವರಾಗಿರುವ ಕಾವ್ಯಾ ತಾಪರ್ ನಟಿಸಿರುವುದು ಮಾತ್ರ ತೆಲುಗು, ತಮಿಳು ಚಿತ್ರಗಳಲ್ಲಿ ಮಾತ್ರ. ತೆಲುಗಿನಲ್ಲಿ 'ಒಕ ಮಿನಿ ಕಥಾ' , 'ಈ ಮಾಯ ಪೇರೇಮಿಟೊ' ಹಾಗೂ ತಮಿಳಿನಲ್ಲಿ 'ಮಾರ್ಕೆಟ್ ರಾಜ ಎಂಬಿಬಿಎಸ್' ಎಂಬ ಸಿನಿಮಾಗಳ ಮೂಲಕ ಹೆಸರು ಮಾಡಿದ್ದಾರೆ. ಈಗ , ಮತ್ತೊಂದು ತೆಲುಗು ಮತ್ತು ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Ads on article

Advertise in articles 1

advertising articles 2

Advertise under the article