-->
ಉಳ್ಳಾಲ ಉರೂಸ್ ನಲ್ಲಿ ಜಾಯಿಂಟ್ ವ್ಹೀಲ್ ಮುರಿದು ಮಕ್ಕಳಿಗೆ ಗಾಯ

ಉಳ್ಳಾಲ ಉರೂಸ್ ನಲ್ಲಿ ಜಾಯಿಂಟ್ ವ್ಹೀಲ್ ಮುರಿದು ಮಕ್ಕಳಿಗೆ ಗಾಯ

ಮಂಗಳೂರು: ಉಳ್ಳಾಲ ದರ್ಗಾದಲ್ಲಿ ನಡೆಯುತ್ತಿರುವ ಪಂಚವಾರ್ಷಿಕ ಉರೂಸ್ ಕಾರ್ಯಕ್ರಮದಲ್ಲಿ ಜಾಯಿಂಟ್ ವ್ಹೀಲ್ ಮುರಿದು ನಾಲ್ವರು ಮಕ್ಕಳು ಗಾಯಗೊಂಡ ಘಟನೆ ಕಳೆದ ರಾತ್ರಿ ನಡೆದಿದೆ.ಉರೂಸ್ ಪ್ರಯುಕ್ತ ಉಳ್ಳಾಲ ದರ್ಗಾಕ್ಕೆ ಬಂದಿದ್ದ ಕೇರಳ ಮೂಲದ ನಾಲ್ವರು ಮಕ್ಕಳು ಸಂತೆಯಲ್ಲಿದ್ದ ಜಾಯಿಂಟ್ ವ್ಹೀಲ್​ನಲ್ಲಿ ಆಟವಾಡುತ್ತಿದ್ದರು. ಈ ಸಂದರ್ಭ ಏಕಾಏಕಿ ಜಾಯಿಂಟ್ ವೀಲ್ ಕೊಂಡಿ ಕಳಚಿ ಮುರಿದು ಬಿದ್ದಿದೆ. ಪರಿಣಾಮ ಜಾಯಿಂಟ್ ವ್ಹೀಲ್ ನಲ್ಲಿದ್ದ ಮಕ್ಕಳು ಕೆಳಕ್ಕೆ ಬಿದ್ದಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 


ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಉಳ್ಳಾಲ ಠಾಣಾ ಪೊಲೀಸರು ಪರಿಶೀಲನೆ ನಡೆಸಿ, ಪರಿಸ್ಥಿತಿಯನ್ನು ತಹಬದಿಗೆ ತಂದಿದ್ದಾರೆ.
Ads on article

Advertise in articles 1

advertising articles 2

Advertise under the article