-->
KSISF SI Recruitment 2022: ಪೊಲೀಸ್ ಇಲಾಖೆಯಲ್ಲಿ 63 ಸಬ್‌ ಇನ್‌ಸ್ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ

KSISF SI Recruitment 2022: ಪೊಲೀಸ್ ಇಲಾಖೆಯಲ್ಲಿ 63 ಸಬ್‌ ಇನ್‌ಸ್ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ

KSISF SI Recruitment 2022: ಪೊಲೀಸ್ ಇಲಾಖೆಯಲ್ಲಿ 63 ಸಬ್‌ ಇನ್‌ಸ್ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ


ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (KSISF)ನಲ್ಲಿ ಖಾಲಿ ಇರುವ 63 ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.ಆಸಕ್ತ ಪುರುಷ, ಮಹಿಳಾ ಹಾಗೂ ತೃತೀಯ ಲಿಂಗಿ ಅಭ್ಯರ್ಥಿಗಳು, ಸೇವಾನಿರತರನ್ನೊಳಗೊಂಡ ಅಭ್ಯರ್ಥಿಗಳ ಜೊತೆಗೆ ಅರ್ಜಿ ಸಲ್ಲಿಸಬಹುದು.


ವಿದ್ಯಾರ್ಹತೆ : KSISF ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು UGC ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಪದವಿ ಅಥವಾ ತತ್ಸಮಾನ ಪದವಿ ಪಡೆದಿರಬೇಕು.ಖಾಲಿ ಹುದ್ದೆಗಳ ವಿವರ :

1) ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (KSISF) (ಪುರುಷ) - 40 ಹುದ್ದೆಗಳು

2) ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (KSISF) (ಮಹಿಳಾ) - 12 ಹುದ್ದೆಗಳು

3) ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (KSISF) (ಪುರುಷ) ಸೇವೆಯಲ್ಲಿರುವವರಿಗೆ - 7 ಹುದ್ದೆಗಳು

4) ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (KSISF) (ಮಹಿಳಾ) ಸೇವೆಯಲ್ಲಿರುವವರಿಗೆ - 2 ಹುದ್ದೆಗಳು

5) ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (KSISF) (ತೃತೀಯ ಲಿಂಗ) - 2 ಹುದ್ದೆಗಳು

ಒಟ್ಟು 63 ಹುದ್ದೆಗಳುವಯೋಮಿತಿ : ಕನಿಷ್ಟ 21 ರಿಂದ ಗರಿಷ್ಟ 26 ವರ್ಷ ವಯೋಮಿತಿ.. ನಿಯಮಾನುಸಾರ ಸಡಿಲಿಕೆ ಇದೆ.ವೇತನ : ತಿಂಗಳಿಗೆ 37,900/- ರಿಂದ 70,850/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.  


ಆಯ್ಕೆ ಪ್ರಕ್ರಿಯೆ : ದೇಹದಾರ್ಢ್ಯ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ, ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.


ಅರ್ಜಿ ಶುಲ್ಕ : ಸಾಮಾನ್ಯ ವರ್ಗ, ಪ್ರವರ್ಗ-2ಎ, ಪ್ರವರ್ಗ-2ಬಿ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳು 500/-ರೂ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳು 250/-ರೂ ಅರ್ಜಿ ಶುಲ್ಕವನ್ನು ನಗದು/ಆನ್‌ಲೈನ್ ರೂಪದಲ್ಲಿ ಸ್ಥಳೀಯ ಅಂಚೆ ಕಛೇರಿಗಳಲ್ಲಿ ಅಥವಾ ಹೆಚ್‌ಡಿಎಫ್‌ಸಿ ಬ್ಯಾಂಕಿನ ಅಧಿಕೃತ ಶಾಖೆಗಳಲ್ಲಿ ಪಾವತಿಸಬಹುದು.

ಅರ್ಜಿ ಶುಲ್ಕ ಪಾವತಿಗೆ ಮಾರ್ಚ್ 5,2022 ಕೊನೆಯ ದಿನವಾಗಿರುತ್ತದೆ.


ಅರ್ಜಿ ಸಲ್ಲಿಕೆ : ಆನ್‌ಲೈನ್‌ ನಲ್ಲಿ ಅಧಿಕೃತ ವೆಬ್‌ಸೈಟ್ http://ksisfsi21.ksponline.co.in/ ಗೆ ಭೇಟಿ ನೀಡಿ. ಅಂತರ್ಜಾಲದಲ್ಲಿ ಕೇಳಿದ ಮಾಹಿತಿ ಭರ್ತಿ ಮಾಡಿ ಅಗತ್ಯ ದಾಖಲೆಗಳ ಜೊತೆ ಅರ್ಜಿ ಸಲ್ಲಿಸಬೇಕು.


ಅರ್ಜಿ ಸಲ್ಲಿಸಲು ಆರಂಭದ ದಿನ: ಫೆಬ್ರವರಿ 10,2022


ಅರ್ಜಿ ಸಲ್ಲಿಸಲು ಕೊನೆ ದಿನ: ಮಾರ್ಚ್ 3, 2022


ಅರ್ಜಿಗಳನ್ನು ಖುದ್ದಾಗಿ ಯಾ ಅಂಚೆ/ಕೊರಿಯರ್ ಮೂಲಕ ಸಲ್ಲಿಸಲು ಅವಕಾಶ ಇರುವುದಿಲ್ಲ.


ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.

http://ksisfsi21.ksponline.co.in/

Ads on article

Advertise in articles 1

advertising articles 2

Advertise under the article