-->
ಭೂವಿವಾದಕ್ಕೆ ಸಂಬಂಧಿಸಿದಂತೆ ಮನೆಯನ್ನು ನೆಲಸಮ ಮಾಡಲು ಬಂದು ಬೆಂಕಿ ಹಚ್ಚಿ ಇಬ್ಬರನ್ನು ಕೊಂದ 9 ಆರೋಪಿಗಳ ಬಂಧನ

ಭೂವಿವಾದಕ್ಕೆ ಸಂಬಂಧಿಸಿದಂತೆ ಮನೆಯನ್ನು ನೆಲಸಮ ಮಾಡಲು ಬಂದು ಬೆಂಕಿ ಹಚ್ಚಿ ಇಬ್ಬರನ್ನು ಕೊಂದ 9 ಆರೋಪಿಗಳ ಬಂಧನ

ಬಿಹಾರ: ಬಿಹಾರದ ದರ್ಭಂಗ ಜಿಲ್ಲೆಯಲ್ಲಿ ಭೂವಿವಾದವೊಂದಕ್ಕೆ ಸಂಬಂಧಿಸಿದಂತೆ ಮನೆ ನೆಲಸಮ ಮಾಡಲು ಬಂದವರಿಗೆ ಅಡ್ಡ ನಿಂತಿದ್ದ ಮನೆಯವರನ್ನೇ ಸುಟ್ಟುಕೊಂದಿದ್ದ ಪ್ರಕರಣದಲ್ಲಿ ಪೊಲೀಸರು 9 ಮಂದಿಯನ್ನು ಬಂಧಿಸಿದ್ದಾರೆ. 

ಈ ಪ್ರಕರಣದಲ್ಲಿ ಇಬ್ಬರು ಸಾವಿಗೀಡಾಗಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಫೆ.10ರಂದು ಶಿವಕುಮಾರ್ ಝಾ ಎಂಬಾತನ ನೇತೃತ್ವದಲ್ಲಿ ಬಿಹಾರದ ದರ್ಭಂಗ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿತ್ತು. ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿದ್ದ ಪಿಂಕಿ ಝಾ ಮತ್ತು ಸಂಜಯ್​ ಝಾ ಫೆ.15ರಂದು ಮೃತಪಟ್ಟಿದ್ದರು. 

ಭೂವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಮನೆಯನ್ನು ನೆಲಸಮ ಮಾಡಲು ಬಂದಿದ್ದಕ್ಕೆ ಆ ಮನೆಯ ಮೂವರು ಆಕ್ಷೇಪವೊಡ್ಡಿ ಅಡ್ಡ ನಿಂತಿದ್ದರು. ಆದರೆ ಅದನ್ನು ಲೆಕ್ಕಿಸದೆ ಮುಂದುವರಿದ ವಿರೋಧಿಗಳು ಆ ಮನೆಯ ಮೂವರಿಗೆ ಬೆಂಕಿ ಹಚ್ಚಿದ್ದಾರೆ. ಈ ಪ್ರಕರಣದಲ್ಲಿ 32 ವರ್ಷದ ಗರ್ಭಿಣಿ ಪಿಂಕಿ ಝಾ, ಆಕೆಯ ಸಹೋದರ ಸಂಜಯ್ ಝಾ (30) ಮತ್ತು ಸಹೋದರಿ ನಿಕ್ಕಿಗೆ ಬೆಂಕಿ ಹಚ್ಚಲಾಗಿತ್ತು. 

ಇದೀಗ ನಿಕ್ಕಿ ಝಾ ನೀಡಿರುವ ದೂರು ಹಾಗೂ ವೀಡಿಯೋ ತುಣುಕಿನ ಆಧಾರದ ಮೇಲೆ ಪೊಲೀಸರು ಇದುವರೆಗೆ ಒಟ್ಟು 9 ಮಂದಿಯ ಬಂಧಿಸಿದ್ದಾರೆ. 

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article