ದುಬೈನಲ್ಲಿ ರಾತ್ರೋರಾತ್ರಿ ಶ್ರೀಮಂತೆಯಾದ ಕೇರಳದ ಯುವತಿ: ಈಕೆ ಬಿಗ್ ಟಿಕೆಟ್ ನಿಂದ ಗೆದ್ದಿದ್ದು ಬರೋಬ್ಬರಿ 44 ಕೋಟಿ ರೂ.

ದುಬೈ: ಕರ್ನಾಟಕ ರಾಜ್ಯ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಲಾಟರಿಯನ್ನು ನಿಷೇಧಿಸಲಾಗಿದೆ. ಆದರೆ ಕೆಲವು ರಾಜ್ಯಗಳಲ್ಲಿ ಇನ್ನೂ ಲಾಟರಿ ಮಾರಾಟ ಕಾನೂನುಬದ್ಧವಾಗಿ ನಡೆಯುತ್ತದೆ. ಮಾತ್ರವಲ್ಲದೇ ವಿದೇಶಗಳಲ್ಲಿಯೂ ಲಾಟರಿ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಅದೃಷ್ಟ ಖಲಾಯಿಸಿದರೆ ಕೆಲವರು ಜಾಕ್ ಪಾಟ್ ಹೊಡೆದು ರಾತ್ರೋರಾತ್ರಿ ಶ್ರೀಮಂತರಾಗುತ್ತಾರೆ. 

ಇದೀ್ ಕೇರಳ ರಾಜ್ಯದ ಯುವತಿಯೊಬ್ಬರಿಗೆ ದುಬೈನಲ್ಲಿ ಬಂಪರ್‌ ಬಹುಮಾನ ಹೊಡೆದಿದ್ದಾರೆ. ದುಬೈನಲ್ಲಿ ಲಾಟರಿ ಟಿಕೆಟ್‌ ಪಡೆದಿದ್ದ ಲೀನಾ ಜಲಾಲ್ ಇದೀಗ 22 ಮಿಲಿಯನ್ ದಿರಂ ಗೆದ್ದಿದ್ದಾರೆ. ಅಂದರೆ ಬರೋಬ್ಬರಿ 44.75 ಕೋಟಿ ರೂ.ಗಳನ್ನು ಗೆದ್ದಿದ್ದಾರೆ.

ದುಬೈನಲ್ಲಿ ವಾಸಿಸುತ್ತಿರುವ ಕೇರಳದ ಲೀನಾ ಜಲಾಲ್ ಅಬುದಾಭಿಯಲ್ಲಿ‌ ಪ್ರತಿವಾರ ಡ್ರಾ ಆಗುವ ಬಿಗ್ ಟಿಕೆಟ್‌ನಲ್ಲಿ ಹಣ ಗೆದ್ದಿದ್ದಾರೆ. ಇವರು ಅಬುದಾಭಿಯಲ್ಲಿ ಕಂಪೆನಿಯೊಂದರಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮಗೆ ಬಂದಿರುವ ಹಣದಲ್ಲಿ ಸ್ವಲ್ಪ ಹಣವನ್ನು ಸಾಮಾಜಿಕ ಸೇವೆಗಾಗಿ ಮೀಸಲು ಇಡುವುದಾಗಿ ಅವರು ಸ್ಥಳೀಯ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ವಿವರಿಸಿದ್ದಾರೆ. ‌

ಇವರಷ್ಟೇ ಅಲ್ಲದೇ, ಸೂರೈಫ್‌ ಸೂರು ಎಂಬ ಇನ್ನೊಬ್ಬ ಕೇರಳ ಮಲಪ್ಪುರಂನ ವ್ಯಕ್ತಿಯಳರ್ವರಿಗೆ 1 ಮಿಲಿಯನ್ ದಿರಂ ಮೊತ್ತ ಲಭಿಸಿದೆ. ಇವರು ತಾವು ಗಳಿಸಿರುವ ಹಣದಲ್ಲಿ ಸ್ವಲ್ಪ ಹಣವನ್ನು ಪಾಲಕರಿಗೆ ನೀಡುತ್ತೇನೆ. ಉಳಿದಂತೆ ನನ್ನ ಪತ್ನಿ ಹಾಗೂ ಮಗಳ ಭವಿಷ್ಯದ ಭದ್ರತೆಗೆ ಹಣವನ್ನು ಬಳಸುತ್ತೇನೆ ಎಂದಿದ್ದಾರೆ. ಕಳೆದ ವರ್ಷ ದುಬೈನಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಕೇರಳದ ವ್ಯಕ್ತಿಗೆ 40 ಕೋಟಿ ರೂ. ಲಾಟರಿ ಹೊಡೆದಿತ್ತು.