-->

ಸಾಮಾಜಿಕ ಜಾಲತಾಲದಲ್ಲಿ ಪತ್ನಿಯ ಅಶ್ಲೀಲ ವೀಡಿಯೋ ನೋಡಿದ ಪತಿ: ತಾನೂ ಆತ್ಮಹತ್ಯೆಗೆ ಯತ್ನಿಸಿ ಮಕ್ಕಳಿಗೆ ವಿಷವುಣಿಸಿದ ತಂದೆ!

ಸಾಮಾಜಿಕ ಜಾಲತಾಲದಲ್ಲಿ ಪತ್ನಿಯ ಅಶ್ಲೀಲ ವೀಡಿಯೋ ನೋಡಿದ ಪತಿ: ತಾನೂ ಆತ್ಮಹತ್ಯೆಗೆ ಯತ್ನಿಸಿ ಮಕ್ಕಳಿಗೆ ವಿಷವುಣಿಸಿದ ತಂದೆ!

ಪೂರ್ವ ಗೋದಾವರಿ: ಪತ್ನಿಯ ಅಶ್ಲೀಲ ವೀಡಿಯೋವನ್ನು ನೋಡಿದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಲ್ಲದೇ ತನ್ನ ಮಕ್ಕಳಿಗೂ ವಿಷ ಉಣಿಸಲು ಯತ್ನಿಸಿದ ಘಟನೆ ಜಿಲ್ಲೆಯ ವಂಗಲಪುಡಿ ಗ್ರಾಮದಲ್ಲಿ ನಡೆದಿದೆ. 

ವಂಗಲಪುಡಿ ಮೂಲದ 30 ವರ್ಷದ ವಿವಾಹಿತ ಮಹಿಳೆ ಕುವೈತ್‌ನಲ್ಲಿ ಉದ್ಯೋಗದಲ್ಲಿದ್ದರು. ಪತಿಯು ತನ್ನ ಊರಾದ ಗೋಕಾವರಂನಲ್ಲಿದ್ದರೆ ಇಬ್ಬರು ಗಂಡು ಮಕ್ಕಳು (13, 10 ವರ್ಷ) ಮತ್ತೋರ್ವ ಮಗಳು (12) ಅಜ್ಜಿಯ ಮನೆಯಲ್ಲಿ ವಾಸವಾಗಿದ್ದರು. ತಂದೆ ಆಗಾಗ ಅಲ್ಲಿಗೆ ಹೋಗಿ ಮಕ್ಕಳನ್ನು ನೋಡಿಕೊಂಡು ಬರುತ್ತಿದ್ದ.

ಶನಿವಾರ ಸಂಜೆ ವಂಗಲಪುಡಿಗೆ ಬಂದ ತಂದೆ ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿಂದ ಅವರನ್ನು ತೋಟಕ್ಕೆ ಕರೆದೊಯ್ದು ಮೊದಲು ಇಲಿಗೆ ಹಾಕುವ ವಿಷವನ್ನು ತಾನು ಸೇವಿಸಿದ್ದಾನೆ. ಬಳಿಕ ತನ್ನ ಮೂವರು ಮಕ್ಕಳಿಗೆ ವಿಷ ನೀಡಲು ಯತ್ನಿಸಿದ್ದಾನೆ. ಅದರಲ್ಲಿ ಹತ್ತು ವರ್ಷದ ಮಗ ವಿಷ ಸೇವಿಸಿದ್ದಾನೆ. ಆದರೆ ಇನ್ನಿಬ್ಬರು ಮಕ್ಕಳು ವಿಷ ಸೇವಿಸಲಿಲ್ಲ. ಅಷ್ಟರಲ್ಲಿ ತಂದೆ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾನೆ‌. 

ಇದರಿಂದ ಹೆದರಿದ ಮಕ್ಕಳಿಬ್ಬರು ಸ್ಥಳದಿಂದ ಹೋಗಿದ್ದಾರೆ. ಇವರನ್ನು ಗಮನಿಸಿದ ಕೆಲ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಅಸ್ವಸ್ಥಗೊಂಡಿದ್ದ ತಂದೆ ಮನವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ ಹೆಚ್ಚಿನ ಚಿಕಿತ್ಸೆಗಾಗಿ ರಾಜಾಜಿನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಇಬ್ಬರು ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. 

ಈ ಬಗ್ಗೆ ಪೊಲೀಸ್ ವಿಚಾರಣೆಯಲ್ಲಿ ಆತ 'ನನಗೆ ಹತ್ತಿರದ ಸಂಬಂಧಿಯಿಂದ ಸಾಮಾಜಿಕ ಜಾಲತಾಣದಲ್ಲಿ ಪತ್ನಿ ಬೇರೆಯವರೊಂದಿಗಿದ್ದ ಅಶ್ಲೀಲ ವೀಡಿಯೋವೊಂದು ದೊರಕಿದೆ. ಅದನ್ನು ನೋಡಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದೇನೆ ಎಂದು ಸಂತ್ರಸ್ತ ಹೇಳಿದ್ದಾರೆ. ಆದರೆ, ಆತ ಹೇಳುತ್ತಿದ್ದ ವೀಡಿಯೋಗಳನ್ನು ಪರಿಶೀಲಿಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಟೋ ಓಡಿಸುತ್ತಿದ್ದ ಈತನ ವಿರುದ್ಧ ಗೋಕಾವರಂನಲ್ಲಿ ಕಳ್ಳತನ ಮಾಡಿರುವ ಕೇಸ್‌ಗಳಿವೆ . ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಎಸ್‌ಐ ಸುಭಾಶೇಖರ್ ಹೇಳಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸ್​ ತನಿಖೆಯಿಂದ ಸತ್ಯಾಸತ್ಯತೆ ಬಹಿರಂಗವಾಗಬೇಕಿದೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article