-->
ಯುವಕರಿಬ್ಬರು ರೈಲು ಢಿಕ್ಕಿಯಾಗಿ ಸ್ಥಳದಲ್ಲಿಯೇ ಮೃತ್ಯು: ಪಬ್​ಜಿ ತಂದ ದುರಂತ

ಯುವಕರಿಬ್ಬರು ರೈಲು ಢಿಕ್ಕಿಯಾಗಿ ಸ್ಥಳದಲ್ಲಿಯೇ ಮೃತ್ಯು: ಪಬ್​ಜಿ ತಂದ ದುರಂತ

ಜೈಪುರ: ಯುವಕರಲ್ಲಿ ದಿನದಿಂದ ದಿನಕ್ಕೆ ಪಬ್​ಜಿ ಕ್ರೇಜ್​ ಹೆಚ್ಚಾಗುತ್ತಿದೆ. ಈಗಾಗಲೇ ಪಬ್​ಜಿಯಿಂದ ಅನೇಕ ಜೀವಗಳು ಬಲಿಯಾಗಿ, ಅವರ ಕುಟುಂಬಗಳು ನೋವು ಅನುಭವಿಸುತ್ತಲೇ ಇದೆ. ಸಾಕಷ್ಟು ಮಂದಿ ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ. ಕ್ರೌರ್ಯವೇ ತುಂಬಿರುವ ಪಬ್​ಜಿಯಿಂದ ಮತ್ತಿನ್ನೇನು ತಾನೇ ನಿರೀಕ್ಷಿಸಲು ಸಾಧ್ಯ.

ಇದೀಗ ಪಬ್​ಜಿಯಿಂದ ಮತ್ತೊಂದು ಭಾರೀ ದುರಂತವೊಂದು ಘಟನೆ ರಾಜಸ್ಥಾನದಲ್ಲಿ ನಡೆದಿದೆ. ರೈಲ್ವೇ ಹಳಿಯ ಮೇಲೆಯೇ ಕುಳಿತು ಪಬ್​ಜಿ ಆಡುತ್ತಿದ್ದ ಇಬ್ಬರು ಯುವಕರಿಗೆ ರೈಲು ಡಿಕ್ಕಿ ಹೊಡೆದು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ರಾಜಸ್ಥಾನದ ಅಲ್ವಾರ್​ ಜಿಲ್ಲೆಯಲ್ಲಿ ನಡೆದಿದೆ. 

ಲೋಕೇಶ್​ ಮೀನಾ (22) ಮತ್ತು ರಾಹುಲ್​ (19) ಮೃತ ದುರ್ದೈವಿ ಯುವಕರು.

ಲೋಕೇಶ್ ಮೀನಾ ಹಾಗೂ ರಾಹುಲ್​ ಪಬ್​ಜಿ ಗೇಮ್​ನ ಕ್ರೇಜಗ ಹೊಂದಿದ್ದರು. ಪಾಲಕರು ಎಷ್ಟು ಹೇಳಿದರು ಇಬ್ಬರೂ ಪಬ್​ಜಿ ಮೇಲಿನ ವ್ಯಾಮೋಹದಿಂದ ಹೊರ ಬಂದಿರಲಿಲ್ಲ. ಬದಲಾಗಿ ಸದಾ ಅದರಲ್ಲೇ ಮುಳುಗಿರುತ್ತಿದ್ದರು. ಇದೀಗ ಅದೇ ಪಬ್​ಜಿಯಿಂದಾಗಿ ಇಬ್ಬರು ದುರಂತ ಸಾವಿಗೀಡಾಗಿದ್ದಾರೆ. 

ವಿಚಾರ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಪೊಲೀಸರು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.

Ads on article

Advertise in articles 1

advertising articles 2

Advertise under the article