ಯುವತಿಯರ ಹಾಸ್ಟೆಲ್​ ಮುಂಭಾಗದಲ್ಲಿಯೇ ಬೈಕ್​ನಲ್ಲಿ ಕುಳಿತುಕೊಂಡು ಕಾಮುಕರಿಬ್ಬರಿಂದ ಹಸ್ತಮೈಥುನ..!

ಪತ್ತನಂತಿಟ್ಟ(ಕೇರಳ): ಯುವತಿಯರ ಹಾಸ್ಟೆಲ್​ ಮುಂಭಾಗ ಕಾಮುಕರಿಬ್ಬರು ಅಸಭ್ಯ ವರ್ತನೆಯಲ್ಲಿ ತೊಡಗಿದ್ದು, ಇವರ ಮಾನಗೇಡಿ ಕೃತ್ಯವನ್ನು ಹಾಸ್ಟೆಲ್​ ಯುವತಿಯರು ವೀಡಿಯೋ​ ಮಾಡಿ ಪೊಲೀಸರಿಗೆ ದೂರು ನೀಡಿರುವ ಘಟನೆ ಕೇರಳದ ಪತ್ತನಂತಿಟ್ಟ ನಗರದಲ್ಲಿ ನಡೆದಿದೆ.

ಈ ಕಾಮುಕರಿಬ್ಬರು ಯುವತಿಯರ ಹಾಸ್ಟೆಲ್​ ಮುಂಭಾಗ ಬೈಕ್​ನಲ್ಲಿ ಕುಳಿತುಕೊಂಡು ಯುವತಿಯರಿಗಾಗಿ ಕಾಯುತ್ತಿರುವುದು ಕಂಡುಬಂದಿದೆ. ಅಲ್ಲದೆ ಇಬ್ಬರೂ ಹಾಸ್ಟೆಲ್ ಅನ್ನು ನೋಡುತ್ತಾ ಹಸ್ತಮೈಥುನ ಮಾಡಿಕೊಳ್ಳುವುದು ವೀಡಿಯೋದಲ್ಲಿ ದಾಖಲಾಗಿದೆ.

ಈ ಹಾಸ್ಟೆಲ್‌ಗೆ ಆರು ಅಡಿ ಎತ್ತರದ ಕಾಂಪೌಂಡ್ ಗೋಡೆಯಿದೆ. ಹಾಸ್ಟೆಲ್‌ನ ಮೇಲಿನ ಮಹಡಿಯ ಯುವತಿಯರನ್ನು ಗುರಿಯಾಗಿಸಿಕೊಂಡು ಅಸಭ್ಯ ವರ್ತನೆಯಲ್ಲಿ ತೊಡಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ದುಷ್ಕರ್ಮಿಗಳು ಮಾಸ್ಕ್ ಹಾಗೂ ಹೆಲ್ಮೆಟ್ ಧರಿಸಿದ್ದರಿಂದ ಮುಖ ಸ್ಪಷ್ಟವಾಗಿಲ್ಲ. 

ವಾಹನಗಳ ಸಂಖ್ಯೆ ಕೂಡ ವೀಡಿಯೋದಲ್ಲಿ ದಾಖಲಾಗಿಲ್ಲ. ಇಬ್ಬರೂ ಲುಂಗಿ ಮತ್ತು ಶರ್ಟ್ ಧರಿಸಿರುವುದು ದೃಶ್ಯದಲ್ಲಿ ಕಾಣುತ್ತಿದೆ. ಹಾಸ್ಟೆಲ್ ಯುವತಿಯರು ಈ ವಿಡಿಯೋ ಕ್ಲಿಪ್‌ಗಳನ್ನು ವಾರ್ಡನ್‌ಗೆ  ತೋರಿಸಿದ್ದಾರೆ. ಅವರ ಅನುಮತಿಯೊಂದಿಗೆ ಆ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ‌.  ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಮುಕರ ಪತ್ತೆಗೆ ಬಲೆ ಬೀಸಿದ್ದಾರೆ.