ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಆರೋಪ: ಯುವಕನನ್ನು ಥಳಿಸಿ ಬೆತ್ತಲಾಗಿ ಎಳೆದೊಯ್ದ ಸಾರ್ವಜನಿಕರು

ಹಾಸನ: ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಆರೋಪದ ಮೇಲೆ ಸಾರ್ವಜನಿಕರು ಯುವಕನೊಬ್ಬನ ಬಟ್ಟೆಯನ್ನು ಬಿಚ್ಚಿಸಿ ಹಲ್ಲೆ ಮಾಡಿದ್ದಲ್ಲದೆ, ಆತನನ್ನು ಬೆತ್ತಲೆ ಮಾಡಿ ರಸ್ತೆಯಲ್ಲಿ ಎಳೆದೊಯ್ದ ಘಟನೆ ಹಾಸನದಲ್ಲಿ ನಡೆದಿದೆ. 

ಹಾಸನದ ಹೇಮಾವತಿ ಪ್ರತಿಮೆ ಸಮೀಪದ ಮಹಾರಾಜ ಪಾರ್ಕ್​ನಲ್ಲಿ ಯುವತಿಯೊಬ್ಬಳನ್ನು ಈತ ಎಳೆದಾಡಿದ್ದಾನೆಂದು ಆರೋಪಿಸಿ ಯುವಕರ ಗುಂಪೊಂದು ಹಲ್ಲೆ ನಡೆಸಿದೆ. ಜೊತೆಗೆ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದನೆಂದು ಸ್ಥಳಿಯರು ಆತನ ಬಟ್ಟೆ ಬಿಚ್ಚಿಸಿ ಸಾರ್ವಜನಿಕವಾಗಿ ಎಳೆದೊಯ್ದಿದೆ. ಆತ ಕೈ ಮುಗಿದು ಬೇಡಿಕೊಂಡರೂ ಜನರು ಆತನನ್ನು ಬಿಡದೆ ಬೆತ್ತಲಾಗಿಸಿ ಥಳಿಸಿದ್ದಾರೆ. 

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದು ಆತನನ್ನು ಜನರಿಂದ ರಕ್ಷಿಸಿದ್ದಾರೆ‌. ಬಳಿಕ ಆತನಿಗೆ ತೊಡಲು ಬಟ್ಟೆ ಕೊಟ್ಟು, ವಶಕ್ಕೆ ಪಡೆದಿದ್ದಾರೆ. ಥಳಿಸಿದ ಗುಂಪಿನ ಜನರನ್ನು ಚದುರಿಸಿ ಕಳುಹಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu