-->
ಈ ವೃದ್ಧ 800 ಮಕ್ಕಳ ತಂದೆಯಂತೆ: ಡಿಎನ್ಎ ತಪಾಸಣೆಯಿಂದ ಹಾಲು ಮಾರಾಟಗಾರನ ಅಸಲಿಯತ್ತು ಬಯಲು

ಈ ವೃದ್ಧ 800 ಮಕ್ಕಳ ತಂದೆಯಂತೆ: ಡಿಎನ್ಎ ತಪಾಸಣೆಯಿಂದ ಹಾಲು ಮಾರಾಟಗಾರನ ಅಸಲಿಯತ್ತು ಬಯಲು

ಕ್ಯಾಲಿಪೋರ್ನಿಯಾ: ಕ್ಯಾಲಿಫೋರ್ನಿಯಾದಲ್ಲಿ ಹಾಲು ಮಾರಾಟಗಾರನಾಗಿದ್ದ ರಾಂಡಲ್ ಸ್ಯಾನ್‌ ಡಿಗಿಯೋ​ ಎಂಬ ವೃದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿದ್ದಾರೆ. ಇದಕ್ಕೆ ಕಾರಣ, ಈತ 800 ಮಕ್ಕಳ ತಂದೆಯೆಂಬ ಭಯಾನಕ ಸತ್ಯವೀಗ ಹೊರಬಿದ್ದಿದೆ. ಡಿಎನ್‌ಎ ತಪಾಸಣೆಯಲ್ಲಿ ಈ ಸತ್ಯವೀಗ ಬಯಲಾಗಿದೆ.

ಪುರುಷರಿಗೆ ಮಕ್ಕಳಾಗುವ ಸಮಸ್ಯೆಯಿದ್ದಲ್ಲಿ ಬೇರೆಯವರ ವೀರ್ಯವನ್ನು ದಾನ ಪಡೆದು ಮಕ್ಕಳಾಗುವ ವ್ಯವಸ್ಥೆಯಿದೆ. ಅಂಥಹ ಸಂದರ್ಭ ಡಿಎನ್‌ಎ ಪರೀಕ್ಷೆ ಮಾಡಿದ್ದಲ್ಲಿ ಮಾತ್ರ ಅಸಲಿ ತಂದೆಯ ವಿಚಾರ ತಿಳಿಯುತ್ತದೆ. ಹೀಗೆ ಕೆಲವು ಪುರುಷರು ತಮ್ಮ ವೀರ್ಯವನ್ನು ಅನೇಕ ಮಂದಿಗೆ ದಾನ ಮಾಡಿ ‘ತಂದೆ’ ಆಗಿರುವುದು ಇದೆ. ಆದರೆ ಈ ಪ್ರಕರಣದಲ್ಲಿ ಹಾಗಲ್ಲ. ನಿಜಕ್ಕೂ ಈತನೇ ಮಹಿಳೆಯರ ಸಂಪರ್ಕ ಹೊಂದಿ ತಂದೆಯಾಗಿದ್ದಾನೆ.

ಅಷ್ಟಕ್ಕೂ ಆಗಿರುವುದೇನು ಗೊತ್ತೇ? ಈತನ ಹಿನ್ನೆಲೆ ತಿಳಿಯಬೇಕಿದ್ದರೆ 1950ಕ್ಕೆ ಹೋಗಬೇಕು. ಆಗ ಹಾಲು ಸುಲಭದಲ್ಲಿ ಬೀದಿಬದಿಗಳಲ್ಲಿ ಸಿಗುತ್ತಿರಲಿಲ್ಲ. ಆ ಸಮಯಕ್ಕೆ ರಾಂಡಲ್ ನೋಡಲು ಸ್ಫುರದ್ರೂಪಿಯಾಗಿದ್ದ. ಈತ ಮನೆಮನೆಗೆ ಹೋಗಿ ಹಾಲು ಮಾರಾಟ ಮಾಡುತ್ತಿದ್ದ. ಈತ ಹೆಚ್ಚಾಗಿ ಹಾಲು ಮಾರುತ್ತಿದ್ದುದು ಸೈನಿಕರ ಮನೆಗೆ. ಅಮೆರಿಕದಲ್ಲಿ ಸೈನಿಕರ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿತ್ತು. 

ಸಹಜವಾಗಿ ಸೈನಿಕರು ಮನೆಯಿಂದ ಹೊರಗೇ ಇರುತ್ತಿದ್ದರು. ಅವರ ಮನೆಗೆ ಹಾಲು ಕೊಡಲು ಹೋದ ಯುವಕ ರಾಂಡಲ್‌ ತನ್ನ ಸೌಂದರ್ಯದಿಂದ ಅಮೆರಿಕದಾ ಸ್ತ್ರೀಯರನ್ನು ಆಕರ್ಷಿಸುತ್ತಿದ್ದ. ಅವರು ಈತ ಬರುವುದನ್ನೇ ಕಾದು ಸಿಹಿ ತಿನಿಸುಗಳನ್ನು ನೀಡುತ್ತಿದ್ದಂತೆ. ಹಾಗೆಯೇ ಆ ಮಹಿಳೆಯರ ಜತೆ ಈತನ ಸಲುಗೆ ಬೆಳೆದು, ದೈಹಿಕ ಸಂಪರ್ಕದವರೆಗೂ ಹೋಗುತ್ತಿತ್ತಂತೆ. ಈ ಬಗ್ಗೆ ಖುದ್ದು ರಾಂಡಲ್‌ ಹೇಳಿಕೊಂಡಿದ್ದಾನೆ.

ಈ ವಿಚಾರ ಬಯಲಾದದ್ದು ಹೇಗೆಂದರೆ? ಮಹಿಳೆಯರಿಗೆ ಜನಿಸಿದ ಮಕ್ಕಳು ಬೇರೆ ಬೇರೆ ರೀತಿಯ ಮೈಬಣ್ಣ, ವಿಭಿನ್ನ ರೀತಿಯ ಕೂದಲಿನ ಹೋಲಿಕೆಯನ್ನು ಹೊಂದಿದ್ದರಂತೆ. ಇದರಿಂದ ಪತಿಯಂದಿಗೆ ಸಂದೇಹ ಉಂಟಾಗಿದೆ. ಮಾತ್ರವಲ್ಲದೇ ತಾವು ಇಲ್ಲದಿದ್ದರೂ ಪತ್ನಿಯಂದಿರು ಖುಷಿಯಾಗಿರುವುದನ್ನು ಅನುಮಾನ ಹುಟ್ಟಿದೆ. ಪತ್ನಿಯರು ಗರ್ಭ ಧರಿಸುವ ಸಮಯವನ್ನು ಲೆಕ್ಕ ಹಾಕಿದ ಪತಿಯಂದಿರು, ತಾವು ಆ ವೇಳೆ ದೈಹಿಕ ಸಂಪರ್ಕ ಹೊಂದಿರಲಿಲ್ಲ, ಮನೆಯಲ್ಲಿ ಇರಲಿಲ್ಲ ಎಂಬ ವಿಚಾರ ತಿಳಿದು ಇನ್ನಷ್ಟು ಯೋಚನೆಗೀಡು ಮಾಡಿದೆ.

ಪರಿಣಾಮ ಪತಿಯಂದಿರು ಮಕ್ಕಳ ಡಿಎನ್‌ಎ ಪರೀಕ್ಷೆಗೆ ಮುಂದಾಗಿದ್ದಾರೆ‌. ಆಗ ಆ ಮಗು ತಮ್ಮದಲ್ಲವೆಂದು ನಿಚ್ಚಳವಾಗಿದೆ. ಇದು ಭಾರಿ ವಿವಾದ ಸೃಷ್ಟಿಯಾಗಿದೆ. ಆ ಬಳಿಕ ತಮ್ಮ ಮಕ್ಕಳ ಬಗ್ಗೆ ಸಂಶಯ ಇರುವವರೆಲ್ಲರೂ ಪರೀಕ್ಷೆ ಮಾಡಿಸಿದರು. ನಂತರ ಕೆಲವು ಪತ್ನಿಯರು ಸತ್ಯಾಂಶ ಹೊರಗೆಡವಿದಾಗ, ಸಂದೇಹವಿದ್ದ ಮಕ್ಕಳ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಎಲ್ಲವೂ ರಾಂಡಲ್‌ ಡಿಎನ್‌ಎ ಹೋಲುವುದು ತಿಳಿದಿದೆ. ಹೀಗೆ ರಾಂಡಲ್ ಸುಮಾರು 800 ಮಕ್ಕಳ ತಂದೆ ಎನ್ನುವ ಸತ್ಯ ಬಹಿರಂಗಗೊಂಡಿದೆ

ಈ 800 ಮಕ್ಕಳ ತಂದೆ ರಾಂಡಲ್‌ಗೆ ಈಗ 97 ವರ್ಷ. ನಾನು ಹೆಂಡತಿ ಮಕ್ಕಳಿಲ್ಲದ ಒಂಟಿ ಜೀವ ಎಂದುಕೊಂಡಿದ್ದೆ. ಎಂತಹ ಆಶೀರ್ವಾದ ಸಿಕ್ಕಿದೆ. ನನಗೆ ತೃಪ್ತಿಯಾಗಿದೆ ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಎಲ್ಲ ಮಕ್ಕಳನ್ನು ಭೇಟಿಯಾಗಲು ಕಾಯುತ್ತಿದ್ದೇನೆ ಎಂದು ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article