-->

ತಗ್ಗಿನಲ್ಲಿ ಹಾರಾಟ ನಡೆಸಿದ ಹೆಲಿಕಾಫ್ಟರ್​ನಿಂದ ಮನೆಗೆ ಹಾನಿ: ಕ್ಯಾನ್ಸರ್ ರೋಗಿಯಿಂದ 25 ಸಾವಿರ ರೂ. ನಷ್ಟಗೊಂಡಿರುವ ದೂರು

ತಗ್ಗಿನಲ್ಲಿ ಹಾರಾಟ ನಡೆಸಿದ ಹೆಲಿಕಾಫ್ಟರ್​ನಿಂದ ಮನೆಗೆ ಹಾನಿ: ಕ್ಯಾನ್ಸರ್ ರೋಗಿಯಿಂದ 25 ಸಾವಿರ ರೂ. ನಷ್ಟಗೊಂಡಿರುವ ದೂರು

ಎತ್ತುಮನೂರು: ಹೆಲಿಕಾಫ್ಟರ್​ವೊಂದು ತಗ್ಗಿನಲ್ಲಿ ಹಾರಾಟ ನಡೆಸಿರುವ ಪರಿಣಾಮ ಕೇರಳದ ಕೊಟ್ಟಾಯಂನಲ್ಲಿರುವ ಕಟ್ಟಡವೊಂದರ ಮೇಲ್ಛಾವಣಿಗೆ ಹಾನಿಯಾಗಿದೆ. ಇದರಿಂದ 25 ಸಾವಿರ ರೂ. ನಷ್ಟವಾಗಿದೆ ಎನ್ನಲಾಗಿದೆ. ಈ ಘಟನೆ ಬುಧವಾರ ಬೆಳಗ್ಗೆ 10.45ರ ಸುಮಾರಿಗೆ ಎತ್ತುಮನೂರಿನ ವಲ್ಲಿಕಾಡುವಿನಲ್ಲಿರುವ ಕುರಿಶುಮಲ ಏರಿಯಾದಲ್ಲಿ ನಡೆದಿದೆ.

ಕಟ್ಟಡದ ಮಾಲಕ ಕ್ಯಾನ್ಸರ್​ ರೋಗಿ ಎಂಬುದು ತಿಳಿದುಬಂದಿದೆ. ಈ  ಹೆಲಿಕಾಫ್ಟರ್​ನಿಂದ ಬಂದ ಜೋರು ಗಾಳಿಯು ಕ್ಯಾನ್ಸರ್​ ರೋಗಿ ಎಂ.ಡಿ. ಕುಂಜಿಮೊನ್ ಅವರ ಕಟ್ಟಡದ ಪಕ್ಕದಲ್ಲಿ ವಾಹನಗಳ ಪೇಂಟಿಂಗ್​ ವರ್ಕ್​ಶಾಪ್ ಅನ್ನು ಹಾನಿಗೊಳಿಸಿದೆ. ವರ್ಕ್​ಶಾಪ್​ನ ಮೇಲ್ಛಾವಣಿಗೆ ದುಬಾರಿ ಟಾರ್ಪಲಿನ್​ ಅನ್ನು ಬಳಸಲಾಗಿತ್ತು. ಆದರೆ, ಗಾಳಿಯ ರಭಸಕ್ಕೆ ಟಾರ್ಪಲಿನ್​ ಕಿತ್ತುಹೋಗಿದೆ. ಅಲ್ಲದೆ, ಆ ಸ್ಥಳವು ಧೂಳಿನಿಂದ ಕೂಡಿ ಹೋಗಿತ್ತು. ನೆಲದ ಮೇಲಿದ್ದ ಕಲ್ಲುಗಳು ಮತ್ತು ವಸ್ತುಗಳು ಸಹ ಗಾಳಿಯ ರಭಸಕ್ಕೆ ಚಲ್ಲಾಪಿಲ್ಲಿಯಾಗಿ ಎಸೆಯಲ್ಪಟ್ಟಿದೆ. ಗಾಳಿಯ ರಭಸವನ್ನು ನೋಡಿ ವರ್ಕ್​ಶಾಪ್​ ಕೆಲಸಗಾರರು ಹೊರಗೆ ಓಡಿಬಂದಿದ್ದಾರೆ.

ಆದರೆ, ಕ್ಯಾನ್ಸರ್​ ರೋಗಿಯಾಗಿದ್ದ ಕುಂಜಿಮೊನ್​ ಹೊರಗೆಬರಲು ಸಾಧ್ಯವಾಗಲಿಲ್ಲ. ಆರಂಭದಲ್ಲಿ ಅಲ್ಲಿ ಏನು ನಡೆಯುತ್ತಿದೆ ಎಂಬುದು ಸಹ ಯಾರಿಗೂ ತಿಳಿಯಲಿಲ್ಲ. ಇದಾದ ಬಳಿಕ ಹೆಲಿಕಾಫ್ಟರ್​ನಿಂದ ಉಂಟಾದ ಅವ್ಯವಸ್ಥೆ ಎಂದು ತಿಳಿದುಬಂದಿದೆ. ಕುಂಜಿಮೋನ್ ಅವರ ಅಡುಗೆ ಮನೆಯಲ್ಲಿ ಹಾಕಲಾಗಿದ್ದ ಕಲ್ನಾರಿನ ಹಾಳೆಗಳೂ ನಾಶವಾಗಿವೆ. ಸ್ಥಳೀಯರ ಪ್ರಕಾರ, ಅದೇ ಹೆಲಿಕಾಫ್ಟರ್ ಅದೇ ವಾರ್ಡ್‌ನ ಮತ್ತೊಂದು ಪ್ರದೇಶದಲ್ಲಿ ಕೆಳಮಟ್ಟದಲ್ಲಿ ಹಾರುತ್ತಿರುವುದು ಕಂಡುಬಂದಿದೆ. ಹೆಲಿಕಾಪ್ಟರ್ ನೌಕಾಪಡೆಯದ್ದು ಎಂದು ಶಂಕಿಸಲಾಗಿದೆ.

ಕೀಮೋ ಚಿಕಿತ್ಸೆಗೆ ಒಳಗಾಗಿರುವ ಕುಂಜಿಮೋನ್ ತನಗೆ 25 ರೂ. ನಷ್ಟವಾಗಿದೆ ಎಂದು ಹೇಳಿಕೊಂಡಿದ್ದಾರೆ. ಕುರವಿಲಂಗಾಡ್ ಮತ್ತು ಎತ್ತುಮನೂರು ಪೊಲೀಸ್ ಠಾಣೆಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಬಗ್ಗೆ ಗ್ರಾಪಂಗೂ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ, ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಪಂಚಾಯತ್ ತಿಳಿಸಿದೆ. ತಡರಾತ್ರಿಯ ವೇಳೆಗೆ, ಕೊಟ್ಟಾಯಂ ಹೆಚ್ಚುವರಿ ಎಸ್ಪಿ ಈ ಬಗ್ಗೆ ತನಿಖೆ ನಡೆಸುವಂತೆ ಎತ್ತುಮನೂರು ಪೊಲೀಸರಿಗೆ ಸೂಚಿಸಿದರು.

Ads on article

Advertise in articles 1

advertising articles 2

Advertise under the article