-->
2 ಸಾವಿರ ರೂ. ಕೊಟ್ಟ ಗ್ರಾಹಕ: ಚಿಲ್ಲರೆಗೆ ಹೋದ ಅಂಗಡಿ ಮಾಲಕನಿಗೆ ಕಾದಿತ್ತು ಶಾಕ್

2 ಸಾವಿರ ರೂ. ಕೊಟ್ಟ ಗ್ರಾಹಕ: ಚಿಲ್ಲರೆಗೆ ಹೋದ ಅಂಗಡಿ ಮಾಲಕನಿಗೆ ಕಾದಿತ್ತು ಶಾಕ್

ಭುವನೇಶ್ವರ: ಗ್ರಾಹಕರು ಏನಾದರೂ ಖರೀದಿಸಿ 2 ಸಾವಿರ ರೂ. ಕೊಟ್ಟರೆ, ಚಿಲ್ಲರೆ ತರಲು ಹೊರಗಡೆ ಹೋಗುವ ಮುನ್ನ ಅಂಗಡಿಯ ಮಾಲಕರು ಗಲ್ಲಾಪೆಟ್ಟಿಗೆಯನ್ನು ಭದ್ರ ಮಾಡಿ ಹೋಗಬೇಕು. ಇಲ್ಲದಿದ್ದಲ್ಲಿ ಏನಾಗಬಹುದು ಎಂಬುದಕ್ಕೆ ಈ ಒಂದು ಘಟನೆಯೊಂದು ತಾಜಾ ಉದಾಹರಣೆಯಾಗಿದೆ. 

ಒಡಿಶಾ ರಾಜ್ಯದ ರಾಜಧಾನಿ ಭುವನೇಶ್ವರದಲ್ಲಿನ ದಿನಸಿ ಅಂಗಡಿಗೆ ದುಷ್ಕರ್ಮಿಯೊಬ್ಬ ಬಂದಿದ್ದಾನೆ.  ವಸ್ತುವೊಂದನ್ನು ಖರೀದಿಸಿ 2 ಸಾವಿರ ರೂ. ನೋಟು ನೀಡಿದ್ದಾನೆ. ಆದರೆ, ಅಂಗಡಿ ಮಾಲಕನ ಬಳಿ ಚಿಲ್ಲರೆ ಇರಲಿಲ್ಲ. ಇಲ್ಲೇ ನಿಂತಿರಿ ಈಹ ಚಿಲ್ಲರೆ ಪಡೆದು ಬರುತ್ತೇನೆಂದು ಹೇಳಿ ಮಾಲಕ ಹೊರ ಹೋಗಿದ್ದಾನೆ.

ಆತ ಚಿಲ್ಲರೆ ಪಡೆದು ಮರಳಿ ಬಂದರೆ ಅಂಗಡಿಯ ಮುಂದೆ 2 ಸಾವಿರ ರೂ. ನೋಟ್ ಕೊಟ್ಟಾತ ಇರಲಿಲ್ಲ. ಏನಾಗಿರಬಹುದೆಂದು ಅಂಗಡಿ ಒಳಗೆ ಬಂದು ನೋಡಿದಾಗ ಮಾಲಕನಿಗೆ ಬಹುದೊಡ್ಡ ಶಾಕ್ ಕಾದಿತ್ತು. 

ಮಾಲಕ ಚಿಲ್ಲರೆ ಪಡೆದು ಬರುವಷ್ಟರಲ್ಲಿ ಆ ದುಷ್ಕರ್ಮಿಯು ಗಲ್ಲಾಪೆಟ್ಟಿಗೆಯಲ್ಲಿದ್ದ ಹಣವನ್ನೆಲ್ಲ ಸುಲಿಗೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ರೀತಿಯ ಘಟನೆ ಭುವನೇಶ್ವರದ ಸತ್ಯನಗರ ಏರಿಯಾದಲ್ಲಿ ಎರಡನೇ ಬಾರಿಗೆ ಆಗುತ್ತಿದೆ ಎನ್ನಲಾಗಿದೆ.

ಘಟನೆಯ ಸಂಬಂಧ ಅಂಗಡಿ ಮಾಲಕ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Ads on article

Advertise in articles 1

advertising articles 2

Advertise under the article