-->
ಲೆಹಂಗಾ ಬದಲಿಗೆ ಹರಿದ ಜೀನ್ಸ್ ಪ್ಯಾಂಟ್ ತೊಟ್ಟು ಮದುವೆ ಮಂಟಪಕ್ಕೆ ಹೊರಟು ನಿಂತ ಮದುವಣಗಿತ್ತಿ: ವೀಡಿಯೋ ವೈರಲ್ Video

ಲೆಹಂಗಾ ಬದಲಿಗೆ ಹರಿದ ಜೀನ್ಸ್ ಪ್ಯಾಂಟ್ ತೊಟ್ಟು ಮದುವೆ ಮಂಟಪಕ್ಕೆ ಹೊರಟು ನಿಂತ ಮದುವಣಗಿತ್ತಿ: ವೀಡಿಯೋ ವೈರಲ್ Video

ಬೆಂಗಳೂರು: ವಿವಾಹವೆಂದರೆ ವಧು-ವರರೂ ಪಾರಂಪರಿಕ ವಸ್ತ್ರಗಳನ್ನು ಧರಿಸಿಕೊಂಡು ಸಂಭ್ರಮ ಮೆರೆಯುವಂತದ್ದು, ಸಾಧಾರಣ ಚಿತ್ರಣವಾಗಿರುತ್ತದೆ. ಅದರಲ್ಲೂ ಉತ್ತರ ಭಾರತದ ಕಡೆಯ ವಧುವಾಗಿದ್ದರೆ ಭಾರೀ ಒಡವೆಗಳನ್ನು ತೊಟ್ಟುಕೊಂಡು, ಕೆಂಪು ಬಣ್ಣದ ಎಂಬ್ರಾಯ್ಡರಿ ಲೆಹೆಂಗಾ ಚೋಲಿಯಲ್ಲಿ ಝಗಮಗಿಸುತ್ತಿರುತ್ತಾರೆ. ಆದರೆ, ಇಲ್ಲೊಬ್ಬಳು ವಧು, ಲೆಹೆಂಗಾ ಬದಲಿಗೆ ತೂತುಗಳಿರುವ ಜೀನ್ಸ್​ ಪ್ಯಾಂಟು ತೊಟ್ಟು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದಾಳೆ. 

ವಿಟ್ಟಿ ವೆಡ್ಡಿಂಗ್​ ಎಂಬ ಸಂಸ್ಥೆಯು ತನ್ನ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಮುದ್ರಾ ಎಂಬ ವಧುವಿನ ಮದುವೆ ಸಂದರ್ಭದ ದೃಶ್ಯವೊಂದನ್ನು ಪೋಸ್ಟ್​ ಮಾಡಿದ್ದಾರೆ. ಸಾತ್​ ಫೇರೆಗೆ ಹೋಗಲೆಂದು ಕಾದಿರುವ ತನ್ನ ಬಂಧು - ಮಿತ್ರರೊಂದಿಗೆ ಒಡನಾಡುತ್ತಿದ್ದ ವಧು ಮುದ್ರಾ ಭಾರೀ ಡಿಸೈನಿನ ಚೋಲಿ, ದುಪಟ್ಟಾ, ಒಡವೆಗಳನ್ನೂ ಧರಿಸಿದ್ದರು. ಆದರೆ ಲೆಹೆಂಗಾ ಬದಲಿಗೆ ಜೀನ್ಸ್​ ಪ್ಯಾಂಟ್​, ಅದರಲ್ಲೂ ಹರಿದ ಡಿಸೈನಿನ ಜೀನ್ಸ್​ ಪ್ಯಾಂಟನ್ನು ತೊಟ್ಟಿದ್ದಾರೆ.

ಅಲ್ಲದೆ ಮುದ್ರಾ ತಮಾಷೆಯಾಗಿ, “ನನಗೆ ಲೆಹೆಂಗಾ ಹಾಕಿಕೊಳ್ಳಲು ಇಷ್ಟವಿಲ್ಲ. ಹೀಗೆ ಹೋಗುತ್ತೇನೆ” ಎಂದಿದ್ದಾರೆ. ಆಗ ಅವರ ಸಂಬಂಧಿಯೋ, ಮಿತ್ರರೋ ಒಬ್ಬರು ಮುದ್ರಾ ಕೈಹಿಡಿದು 'ನಡಿ ಹಾಗಾದಲ್ಲಿ' ಎಂದು ಕೆಳಅಂತಸ್ತಿನಲ್ಲಿರುವ ಮಂಟಪಕ್ಕೆ ಕರೆದೊಯ್ಯಲು ಮುಂದಾಗುವಂತೆ ನಟಿಸಿದ್ದಾರೆ. ಆಗ ಎಲ್ಲರೂ ನಗುತ್ತಿರುವುದು ಈ ವೀಡಿಯೋದಲ್ಲಿ ಸೆರೆಯಾಗಿದೆ

ಇದೀಗ ಈ ಫ್ಯೂಶನ್​ ಸ್ಟೈಲ್​ಫ್ಯಾಷನ್​​ ತೋರಿಸುತ್ತಿರುವ ವಧುವನ್ನು ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಈ ವೀಡಿಯೋ ತುಣುಕು ಮೂರೇ ದಿನಗಳಲ್ಲಿ ಸುಮಾರು 50 ಸಾವಿರ ವೀಕ್ಷಣೆಗಳನ್ನು ಪಡೆದಿದೆ.

Ads on article

Advertise in articles 1

advertising articles 2

Advertise under the article