-->
ಟೈಲರ್ ಪತಿ ತನಗೆ ಬೇಕಾದಂತೆ ಬ್ಲೌಸ್ ಹೊಲಿದಿಲ್ಲವೆಂದು ಪತ್ನಿ ಆತ್ಮಹತ್ಯೆ: ಮಕ್ಕಳು ಮನೆಗೆ ಬಂದ ಬಳಿಕ ವಿಚಾರ ಬಹಿರಂಗ!

ಟೈಲರ್ ಪತಿ ತನಗೆ ಬೇಕಾದಂತೆ ಬ್ಲೌಸ್ ಹೊಲಿದಿಲ್ಲವೆಂದು ಪತ್ನಿ ಆತ್ಮಹತ್ಯೆ: ಮಕ್ಕಳು ಮನೆಗೆ ಬಂದ ಬಳಿಕ ವಿಚಾರ ಬಹಿರಂಗ!

ಹೈದರಾಬಾದ್: ಟೈಲರ್ ಆಗಿದ್ದ ಪತಿ, ತಾನು ಹೇಳಿದಂತೆ ಬ್ಲೌಸ್‌ ಹೊಲಿಯಲಿಲ್ಲವೆಂದು ಬೇಸರಗೊಂಡಿರುವ ಪತ್ನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಹೈದರಾಬಾದ್‌ನ ಅಂಬರಪೇಟ್‌ ನಿವಾಸಿ ವಿಜಯಲಕ್ಷ್ಮಿ (36) ಎಂಬಾಕೆ ಆತ್ಮಹತ್ಯೆ ಮಾಡಿದವರು. 

ವಿಜಯಲಕ್ಷ್ಮಿಯವರು ಇಷ್ಟಪಟ್ಟು ಸೀರೆಯೊಂದನ್ನು ಖರೀದಿ ಮಾಡಿದ್ದರು‌. ಈ ಸೀರೆಗೆ ಬ್ಲೌಸ್ ಹೊಲಿಯಲು ಟೈಲರ್‌ ಆಗಿರುವ ಪತಿ ಶ್ರೀನಿವಾಸ್‌ ರಲ್ಲಿ ನೀಡಿದ್ದಾರೆ. ಅಲ್ಲದೆ ಅವರು ತಮಗೆ ಯಾವ ರೀತಿಯ ಬ್ಲೌಸ್‌ ಬೇಕು ಎಂಬುದನ್ನು ಪತಿಗೆ ತಿಳಿಸಿದ್ದಾರೆ.

ಸ್ವಲ್ಪ ದಿನಗಳಲ್ಲಿ ಶ್ರೀನಿವಾಸ್ ಬ್ಲೌಸ್ ಹೊಲಿದು ಪತ್ನಿಗೆ ಕೊಟ್ಟಿದ್ದಾರೆ. ಆದರೆ ಆ ಬ್ಲೌಸ್ ತಾನು ಹೇಳಿದಂತೆ ಆಗಲಿಲ್ಲವೆಂದು ವಿಜಯಲಕ್ಷ್ಮಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿಯೇ ದಂಪತಿ ನಡುವೆ ಜಗಳವಾಗಿದೆ. ಪರಿಣಾಮ ಮನನೊಂದ ವಿಜಯಲಕ್ಷ್ಮಿ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ.

ಪತ್ನಿ ಸಿಟ್ಟಿನಿಂದ ಕೋಣೆಯೊಳಗೆ ಹೋಗಿರಬಹುದೆಂದು ಶ್ರೀನಿವಾಸ್ ಅಂದುಕೊಂಡಿದ್ದಾರೆ. ಆದರೆ ಮಧ್ಯಾಹ್ನ ಮಕ್ಕಳು ಶಾಲೆಯಿಂದ ಮನೆಗೆ ಬಂದು ಬಾಗಿಲು ಬಡಿದರೂ ಆಕೆ ಪ್ರತಿಕ್ರಿಯಿಸಲಿಲ್ಲ. ಇದರಿಂದ ಸಂದೇಹಗೊಂಡ ಶ್ರೀನಿವಾಸ್ ಬಾಗಿಲು ಒಡೆದು ಒಳ ಹೋಗಿದ್ದಾರೆ. ಈ ವೇಳೆ ವಿಜಯಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಅವರೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸದ್ಯ ತನಿಖೆ ನಡೆಯುತ್ತಿದೆ. 

Ads on article

Advertise in articles 1

advertising articles 2

Advertise under the article