-->
ಅಂದು ಫಿಲಂಫೇರ್ ನೋಡಲು ಬೇರೆಯವರ ಪಾಸ್ ‌ನಲ್ಲಿ ಹೋಗಿ ಕುರ್ಚಿ ಶೇರ್ ಮಾಡಿ ಕುಳಿತಾಕೆ ಇಂದು ಪ್ರಖ್ಯಾತ ನಟಿ!

ಅಂದು ಫಿಲಂಫೇರ್ ನೋಡಲು ಬೇರೆಯವರ ಪಾಸ್ ‌ನಲ್ಲಿ ಹೋಗಿ ಕುರ್ಚಿ ಶೇರ್ ಮಾಡಿ ಕುಳಿತಾಕೆ ಇಂದು ಪ್ರಖ್ಯಾತ ನಟಿ!

ಬೆಂಗಳೂರು: ಬಾಲ್ಯದಲ್ಲಿ ಫಿಲಂಫೇರ್ ನೋಡಲೆಂದು ಬೇರೆಯವರ ಪಾಸ್​ನಲ್ಲಿ ಹೋಗಿ ಮತ್ತೊಬ್ಬರೊಂದಿಗೆ ಕುರ್ಚಿಯನ್ನು ಶೇರ್ ಮಾಡಿ ಕುಳಿತಿದ್ದಾಕೆ ಇಂದು ಪ್ರಖ್ಯಾತ ನಟಿಯಾಗಿದ್ದಾರೆ. ಖಂಡಿತಾ ಇದು ಗಾಸಿಪ್​ ಅಲ್ಲ. ಈ ವಿಚಾರವನ್ನು ಸ್ವತಃ ಆ ನಟಿಯೇ ಹೇಳಿಕೊಂಡಿದ್ದಾರೆ. 

ಅಂದ ಹಾಗೆ, ಬಾಲ್ಯದ ತಮ್ಮ ಆ ಅನುಭವ ಹಂಚಿಕೊಂಡವರು ಬೇರಾರೂ ಅಲ್ಲ, ಕನ್ನಡತಿ, ತೆಲುಗಿನ ಪ್ರಖ್ಯಾತ ನಟಿ ಪೂಜಾ ಹೆಗ್ಡೆ. 'ತಾನು ಸಣ್ಣದಿರುವಾಗ ಫಿಲಂಫೇರ್​ ಪ್ರಶಸ್ತಿ ಪ್ರದಾನದ ಕಾರ್ಯಕ್ರಮ ನೋಡಲು ಉತ್ಸುಕಳಾಗಿದ್ದೆ. ಆದರೆ, ಸಭಾಂಗಣ ಪ್ರವೇಶಕ್ಕೆ ಪಾಸ್ ಸಿಕ್ಕಿರಲಿಲ್ಲ. ಬೇರೆಯವರ ಪಾಸ್‌ನಲ್ಲಿ ಹೋಗಿ ನೋಡಿದ್ದೆ ಎಂದು ಪೂಜಾ ಹೆಗ್ಡೆ ತಾವು ಫಿಲಂಫೇರ್​ ಕಾರ್ಯಕ್ರಮಕ್ಕೆ ಹೋಗಲು ಪಟ್ಟ ಕಷ್ಟವನ್ನು ಬಿಚ್ಚಿಟ್ಟರು. 

ಕೆಎಫ್ಎಫ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಸಣ್ಣ ವಯಸ್ಸಿನಿಂದಲೂ ಸಿನಿಮಾ ಎಂದರೆ ಬಹಳ ಇಷ್ಟ. ನಾನು ಸಣ್ಣವಳಿದ್ದಾಗ ಒಮ್ಮೆ ಫಿಲಂಫೇರ್​ ನಡೆಯುತ್ತಿತ್ತು. ಇದನ್ನು ನೋಡಬೇಕೆಂದು ನನಗೆ ಬಹಳ ಆಸೆಯಿದ್ದರೂ ನಮ್ಮ ಮನೆಯವರ ಬಳಿ ಪಾಸ್ ಇರಲಿಲ್ಲ. ಹೇಗೋ ಬೇರೆಯವರ ಪಾಸ್ ಪಡೆದು ಒಂದೇ ಸೀಟಿನಲ್ಲಿ ಇಬ್ಬರು ಕುಳಿತು ಫಿಲಂಫೇರ್​​ ನೋಡಿದ್ದೆ. ಇಂದು ನಾನು ಅದೇ ಸಿನಿಮಾ ಕ್ಷೇತ್ರದಲ್ಲಿರುವುದು ಖುಷಿ ತಂದಿದೆ ಎಂದರು.

Ads on article

Advertise in articles 1

advertising articles 2

Advertise under the article