-->
'ಮಿಸ್ ಯೂನಿವರ್ಸ್' ಪಟ್ಟ ಗೆದ್ದ ಹರ್ನಾಜ್ ಸಂಧು ಧರಿಸಿರುವ ಕಿರೀಟದ ಬೆಲೆ ಎಷ್ಟು ಗೊತ್ತಾ?: ಎಲ್ಲರೂ ನಿಜಕ್ಕೂ ಶಾಕ್ ಆಗುವುದಂತೂ ಗ್ಯಾರಂಟಿ

'ಮಿಸ್ ಯೂನಿವರ್ಸ್' ಪಟ್ಟ ಗೆದ್ದ ಹರ್ನಾಜ್ ಸಂಧು ಧರಿಸಿರುವ ಕಿರೀಟದ ಬೆಲೆ ಎಷ್ಟು ಗೊತ್ತಾ?: ಎಲ್ಲರೂ ನಿಜಕ್ಕೂ ಶಾಕ್ ಆಗುವುದಂತೂ ಗ್ಯಾರಂಟಿ

ಇಸ್ರೇಲ್: ಬರೋಬ್ಬರಿ 21 ವರ್ಷಗಳ ಬಳಿಕ ಭಾರತಕ್ಕೆ 'ಮಿಸ್ ಯೂನಿವರ್ಸ್' ಪಟ್ಟ ದೊರಕಿದೆ. ಚಂಡೀಗಢ ಮೂಲದ ಹರ್ನಾಜ್ ಸಂಧು 'ಮಿಸ್ ಯೂನಿವರ್ಸ್ 2021'ರ ಕಿರೀಟವನ್ನು ಮುಡಿಗೇರಿಸಿದ್ದಾರೆ . ಸೋಮವಾರ ಇಸ್ರೇಲ್‌ನ ಐಲಾಟ್‌ನಲ್ಲಿ ನಡೆದ 70ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಹರ್ನಾಜ್‌ ಸಂಧು ಭಾರತವನ್ನು ಪ್ರತಿನಿಧಿಸಿದ್ದರು. 21 ವರ್ಷದ ಮಾಡೆಲ್ ಭಾರತದ ಹರ್ನಾಜ್ ಸಂಧು 21 ವರ್ಷಗಳ ನಂತರ ಈ ಕಿರೀಟವನ್ನು ಭಾರತಕ್ಕೆ ತಂದಿದ್ದಾರೆ.‌ 

ಇಷ್ಟು ದಿನ ಹರ್ನಾಜ್ ಸಂಧು  'ಮಿಸ್ ಯೂನಿವರ್ಸ್ 2021' ಸ್ಪರ್ಧೆಯಲ್ಲಿ ಗೆದ್ದಿದ್ದು ಹಾಗೂ ಆಕೆ ಸ್ಪರ್ಧೆಯ ಕೊನೆಯ ಪ್ರಶ್ನೆಗೆ ಕೊಟ್ಟ ಉತ್ತರಗಳು ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು.  ಆದರೆ ಈಗ ಹರ್ನಾಜ್ ಸಂಧು ಮಿಸ್ ಯೂನಿವರ್ಸ್ ಆದ ಬಳಿಕ ಧರಿಸಿರುವ ಕಿರೀಟದ ಮೇಲೆಯೇ ಎಲ್ಲರ ಕಣ್ಣು ನೆಟ್ಟಿದೆ. ಅಂದಹಾಗೆ ಇದರ ಬೆಲೆ ಎಷ್ಟು ಎಂಬ ಕೇಳಿದರೆ ಎಲ್ಲರೂ ನಿಜಕ್ಕೂ ಶಾಕ್ ಆಗುವುದಂತೂ ಗ್ಯಾರಂಟಿ.


ಹೌದು, ಈ ಮಿಸ್ ಯೂನಿವರ್ಸ್ ಕಿರೀಟದ ಬೆಲೆ ಬರೋಬ್ಬರಿ ಯುಎಸ್ ಡಾಲರ್ 5 ಮಿಲಿಯನ್.  ಅಂದರೆ ಬರೋಬ್ಬರಿ 37 ಕೋಟಿ ರೂ. ಹಾಗಾದರೆ ಇದರ ವಿಶೇಷತೆ ಏನು ಗೊತ್ತೇ?

1. ಈ ಕಿರೀಟವನ್ನು ಮೌವಾದ್ ವಿನ್ಯಾಸಕರು ತಯಾರಿಸಿದ್ದಾರೆ.

2. ಇದು ಪ್ರಪಂಚದ ಅತ್ಯಂತ ದುಬಾರಿ ಸೌಂದರ್ಯ ಸ್ಪರ್ಧೆಯ ಕಿರೀಟವಾಗಿದೆ.

3. ಈ ಕಿರೀಟವು ಮಹತ್ವಾಕಾಂಕ್ಷೆ, ವೈವಿಧ್ಯತೆ, ಸಮುದಾಯ ಹಾಗೂ ಸೌಂದರ್ಯ ಎಂಬ ಅಂಶಗಳನ್ನು ಸಂಕೇತಿಸುತ್ತದೆ.

 4. ಪ್ರಕೃತಿ, ಶಕ್ತಿ, ಸೌಂದರ್ಯ, ಸ್ತ್ರೀತ್ವ ಹಾಗೂ ಏಕತೆ ಎಂಬ ಆಂಶಗಳಿಂದ ಸ್ಫೂರ್ತಿ ಪಡೆದ ಈ ಕಿರೀಟವು 1,725 ಬಿಳಿ ವಜ್ರಗಳು ಮತ್ತು 3 ಗೋಲ್ಡನ್ ಕ್ಯಾನರಿ ವಜ್ರಗಳನ್ನು ಒಳಗೊಂಡಿದೆ.

5. ಮಿಸ್ ಯೂನಿವರ್ಸ್ ಕಿರೀಟದಲ್ಲಿ ಹೆಣೆದ ಎಲೆಗಳು, ದಳಗಳು ಮತ್ತು ಬಳ್ಳಿಗಳು ಏಳು ಖಂಡಗಳ ಸಮುದಾಯಗಳನ್ನು ಪ್ರತಿನಿಧಿಸುತ್ತವೆ. 

6. ಕಿರೀಟದ ಕೇಂದ್ರಭಾಗದಲ್ಲಿ 62.83 ಕ್ಯಾರೆಟ್ ತೂಕದ ಭವ್ಯವಾದ ಮಿಶ್ರ ಕಟ್ ಗೋಲ್ಡನ್ ಕ್ಯಾನರಿ ವಜ್ರವನ್ನು ಹೊಂದಿದೆ . 


ಇನ್ನು ಈ ಕಿರೀಟದ ಬಳಿಕ ಅತ್ಯಂತ ದುಬಾರಿಯಾದ ಕಿರೀಟ ಎಂದೆನಿಸಿಕೊಳ್ಳುವುದು 5 ಕೋಟಿ ರೂ. ಬೆಲೆ ಬಾಳುವ ವಿಶ್ವ ಸುಂದರಿ ಕಿರೀಟ. ಸದ್ಯ, 2019 ರಲ್ಲಿ ಮಿಸ್ ಸೌತ್ ಆಫ್ರಿಕಾ ಝೂಜಿಬಿನಿ ತುಂಜಿ ಮತ್ತು 2020 ರಲ್ಲಿ ಮಿಸ್ ಮೆಕ್ಸಿಕೋ ಆಂಡ್ರಿಯಾ ಮೆಜಾ ಅವರು ಈ ವಿಶ್ವದ ಅತ್ಯಂತ ದುಬಾರಿ ಕಿರೀಟವನ್ನು ಧರಿಸಿದ್ದರು . ಇದೀಗ, ಅದನ್ನು ಮಿಸ್ ಇಂಡಿಯಾ ಹರ್ನಾಜ್ ಸಂಧು ಧರಿಸಿದ್ದಾರೆ. 2021 ರಲ್ಲಿ ಹರ್ನಾಜ್ ಸಂಧು ಅವರು 1994 ರಲ್ಲಿ ನಟಿ ಸುಶ್ಮಿತಾ ಸೇನ್ ಮತ್ತು 2000 ರಲ್ಲಿ ನಟಿ ಲಾರಾ ದತ್ತಾ ನಂತರ ಮಿಸ್ ಯೂನಿವರ್ಸ್ ಪ್ರಶಸ್ತಿಯನ್ನು ಗೆದ್ದ ಮೂರನೇ ಭಾರತೀಯ ಯುವತಿಯಾಗಿದ್ದಾರೆ.

Ads on article

Advertise in articles 1

advertising articles 2

Advertise under the article