ಅಪರಿಚಿತನ ಕಾಟಕ್ಕೆ ತಡರಾತ್ರಿ ಬೆದರಿದ ಕುಟುಂಬ: ಕಾರು ಚೇಸ್ ಮಾಡಿ ತೊಂದರೆ ನೀಡಿದ ವ್ಯಕ್ತಿಯ ವಿರುದ್ಧ ದೂರು ನೀಡಿದ ಮಹಿಳೆ

ಮಂಗಳೂರು: ತಡರಾತ್ರಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಕ್ಕಳೊಂದಿಗೆ ಕಾರಿನಲ್ಲಿ ಮರಳಿ ಮನೆಗೆ ಬರುತ್ತಿದ್ದ ವೇಳೆ ಅಪರಿಚಿತನೋರ್ವ ಕಾರಿನಲ್ಲಿ ಬಂದು ಅಸಭ್ಯವಾಗಿ ವರ್ತಿಸಿರುವ ಘಟನೆ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆದರಿದ ಮಹಿಳೆ ಕಾರು ಚಲಾಯಿಸುತ್ತಲೇ ಹೊಯ್ಸಳ ಪೊಲೀಸರಿಗೆ ಕರೆ ಮಾಡಿರುವ ವೀಡಿಯೋ ವೈರಲ್ ಆಗಿದೆ.

ಮಕ್ಕಳ ಜೊತೆಗೆ ಕಾರಿನಲ್ಲಿ ಹೋಗುತ್ತಿದ್ದ ದೀಪಾ ಶ್ರೀಕುಮಾರ್ ರನ್ನು ಇನ್ನೊಂದು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ಅಪರಿಚಿತ ವ್ಯಕ್ತಿ ಅಸಭ್ಯವಾಗಿ ವರ್ತಿಸಿದ್ದಾನೆ. ದೀಪಾ ತಮ್ಮ ಪುತ್ರಿ ಹಾಗೂ ಪುತ್ರನೊಂದಿಗೆ ಹೊಸಕೋಟೆಯ ಸಂಬಂಧಿಕರ ಮನೆಗೆ ಹೋಗಿ ಬೆಂಗಳೂರಿಗೆ ತಡರಾತ್ರಿ 2 ಗಂಟೆಗೆ ಬರುತ್ತಿದ್ದರು.

ಆದರೆ ಮಾರ್ಗ ಮಧ್ಯೆ ಹೆಬ್ಬಾಳ ಬಳಿ ಅವರ ಕಾರು ಟೈರ್ ಪಂಕ್ಚರ್ ಆಗಿತ್ತು. ಈ ಸಂದರ್ಭ ಟೈರ್ ಬದಲಿಸುತ್ತಿದ್ದಾಗ ಅಪರಿಚಿತ ಕಾರೊಂದು ಇವರ ಪಕ್ಕ ಬಂದು ನಿಂತಿದ್ದು, ಕಾರಿನಲ್ಲಿದ್ದ ವ್ಯಕ್ತಿ ದೀಪಾ ಪುತ್ರಿಯೊಂದಿಗೆ ಅಸಭ್ಯವಾಗಿ ಮಾತನಾಡಿದ್ದಾಬೆ. ಆಗ ದೀಪಾ ಆತನಿಗೆ ಬೈದು ಬಳಿಕ ಕಾರು ಹತ್ತಿ ಹೊರಟಿದ್ದಾರೆ. 

ಆದರೆ ಆ ಅಪರಿಚಿತ ಇವರನ್ನು ಗೊರಗುಂಟೆಪಾಳ್ಯದವರೆಗೂ ಹಿಂಬಾಲಿಸಿಕೊಂಡು ಬಂದು ಅಸಭ್ಯವಾಗಿ ವರ್ತಿಸಿದ್ದಾನೆ. ಪರಿಣಾಮ ಹೆದರಿದ ದೀಪಾ ಕಾರೊಳಗಿಂದಲೇ ಪೊಲೀಸರಿಗೆ ಮಾಡಿದ್ದಾರೆ. ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಬರುತ್ತಿದ್ದಂತೆ ಅಪರಿಚಿತ ವ್ಯಕ್ತಿ ಪರಾರಿಯಾಗಿದ್ದಾನೆ. ದೀಪಾ ಆತನ ಕಾರಿನ ನಂಬರನ್ನು ಪೊಲೀಸರಿಗೆ ನೀಡಿದ್ದು, ಆತನನ್ನು ಪೊಲೀಸರು ಹುಡುಕುತ್ತಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu