ವಿವಾಹಕ್ಕೆಂದು ತಯಾರಿಸಿದ್ದ ಕೇಕ್ ಕತ್ತರಿಸೋ ಮೊದಲೇ ಬಿದ್ದು ಚಲ್ಲಾಪಿಲ್ಲಿ: ನಿಜವಾಗಿ ಸಪ್ಲಾಯರ್ ನಿಂದ ಆದದ್ದೇನು?

ನ್ಯೂಯಾರ್ಕ್‌: ಕ್ರೈಸ್ತ ಸಮುದಾಯದ ಎಲ್ಲಾ ಸಮಾರಂಭಗಳಲ್ಲಿಯೂ ಕೇಕ್‌ ಕಟ್ ಮಾಡೋದು ಕಡ್ಡಾಯ. ಅದರಲ್ಲಿಯೂ ವಿವಾಹದ ದಿನ  ಇದನ್ನೊಂದು ಧಾರ್ಮಿಕ ಕಾರ್ಯಕ್ರಮದಂತೆ ವಧೂ -ಚಬ ವರರಿಂದ ಕೇಕ್ ಕತ್ತರಿಸಲಾಗುತ್ತದೆ. ಆದ್ದರಿಂದಲೇ ಮದುಮಕ್ಕಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಈ ಕೇಕ್‌ ಗಳನ್ನು ಶೃಂಗಾರಗೊಳಿಸುತ್ತಾರೆ. ತನ್ನ ಅಂತಸ್ತಿಗೆ ತಕ್ಕಂತೆ ದುಬಾರಿ ಬೆಲೆ ಬಾಳುವ ಕೇಕ್‌ ತಯಾರು ಮಾಡುತ್ತಾರೆ. 

ಅದರಂತೆಯೇ ಅಮೆರಿಕಾದ ಕ್ರೈಸ್ತ ಜೋಡಿಯೊಂದು ತಮ್ಮ ವಿವಾಹ ಸಮಾರಂಭಕ್ಕೆ ಕಟ್ ಮಾಡಲೆಂದು ತಯಾರು ಮಾಡಿಟ್ಟ ಕೇಕ್‌ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದೆ. ಇದಕ್ಕೆ ಕಾರಣ, ಅದೇನು ದುಬಾರಿ ಅಥವಾ ಸ್ಪಷಲ್ ಕೇಕ್‌ ಎಂದೇನು ಅಲ್ಲ. ಬದಲಿಗೆ ಅಲ್ಲಿ ಆಗಿರುವ ಘಟನೆಯಿಂದ ಈ ಕೇಕ್ ಭಾರೀ ಸುದ್ದಿಯಾಗುತ್ತಿದೆ.


ಅಷ್ಟಕ್ಕೂ ಆಗಿದ್ದೇನೆಂದರೆ, ವಧು-ವರರು ತಮ್ಮ ಮದುವೆ ಸಮಾರಂಭದಲ್ಲಿ ಕಟ್ ಮಾಡಲೆಂದು ಭಾರಿ ಗಾತ್ರದ ಕೇಕ್‌ ರೆಡಿ ಮಾಡಿಸಿದ್ದಾರೆ. ಅದ್ಧೂರಿಯಾಗಿ ಶೃಂಗಾರಗೊಂಡಿರುವ ಸಭೆಯಲ್ಲಿ ನೆಂಟರಿಷ್ಟರೆಲ್ಲಾ ಸೇರಿದ್ದಾರೆ. ಆಗ ಕೇಕ್‌ ಅನ್ನು ಕಟ್‌ ಮಾಡುವುದಕ್ಕಾಗಿ ಸಪ್ಲೈಯರ್ ವಧು-ವರರ ಬಳಿ ಅದನ್ನು ತರುತ್ತಿದ್ದನು‌. ಆದರೆ ಅಷ್ಟರಲ್ಲಿಯೇ ಕೇಕ್ ಜಾರಿ ಪೂರ್ತಿ ನೆಲದ ಮೇಲೆ ಬಿದ್ದು ಚೆಲ್ಲಾಪಿಲ್ಲಿಯಾಗುತ್ತದೆ. ಇದನ್ನು ಕಂಡು ಅಲ್ಲಿದ್ದವರೆಲ್ಲಾ ಶಾಕ್‌ ಆಗುತ್ತಾರೆ. 

ಆದರೆ ಸಪ್ಲೈಯರ್‌ ಮಾತ್ರ ನಗುತ್ತಿರುತ್ತಾನೆ. ಏಕೆಂದರೆ ಆತ ಇದನ್ನು ಮಾಡಿದ್ದು ತಮಾಷೆಗಾಗಿ. ಅಸಲಿಗೆ ಇದು ನಕಲಿ ಕೇಕ್‌, ಅಸಲಿ ಕೇಕ್‌ ಹಿಂದುಗಡೆಯಿಂದ ಮತ್ತೊಬ್ಬ ಸಪ್ಲೈಯರ್‌ ತಂದಾಗ ಎಲ್ಲರ ಮೊಗದಲ್ಲಿಯೂ ನಗುವಿನ ಅಲೆ ಮೂಡುತ್ತದೆ. ಈ ವಿಡಿಯೋ ಇನ್ಸ್‌ಟಾಗ್ರಾಮ್‌ನಲ್ಲಿ ಶೇರ್‌ ಆಗಿದ್ದು ಜನರು ಥಹರೇವಾರಿ ಕಮೆಂಟ್‌ ನೀಡುತ್ತಿದ್ದಾರೆ.