-->
MLC Bhandary Condemn the attack on ST youth- ಕೊರಗ ಸಮುದಾಯದ ಯುವಕನಿಗೆ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಸಾಂತ್ವನ

MLC Bhandary Condemn the attack on ST youth- ಕೊರಗ ಸಮುದಾಯದ ಯುವಕನಿಗೆ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಸಾಂತ್ವನ

ಕೊರಗ ಸಮುದಾಯದ ಯುವಕನಿಗೆ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಸಾಂತ್ವನ

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೋಟ ಎನ್ನುವ ಗ್ರಾಮದಲ್ಲಿ ಕೊರಗ (ಪರಿಶಿಷ್ಟ ಪಂಗಡ) ಸಮುದಾಯಕ್ಕೆ ಸೇರಿದ ರಾಜೇಶ್ ಎನ್ನುವ ಯುವಕನ ಮದುವೆ (ಮೆಹಂದಿ) ಸಂಭ್ರಮದಲ್ಲಿ ಡಿ.ಜೆ ಹಾಕಿದ್ದರು ಎನ್ನುವ ಕಾರಣಕ್ಕೆ ನಡೆದ ಕೃತ್ಯ ಖಂಡನೀಯ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಹೇಳಿದ್ದಾರೆ.


ಈ ಘಟನೆಯಿಂದ ನೊಂದ ಕೊರಗ ಪರಿವಾರದ ಮನೆಗೆ ವಿಧಾನ ಪರಿಷತ್ತಿ ಗೆ ನೂತನ ಸದಸ್ಯರಾಗಿ ಆಯ್ಕೆಯಾದ ಶ್ರೀ ಮಂಜುನಾಥ್ ಭಂಡಾರಿಯವರು ಭೇಟಿ ನೀಡಿ ಸಾಂತ್ವಾನದ ಮಾತುಗಳನ್ನಾಡಿದರು.


ಅಲ್ಲದೆ, ಘಟನೆಯಿಂದ ನೊಂದ ಪರಿವಾರಕ್ಕೆ ನ್ಯಾಯ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು.


ನಂತರ ಶಾಸಕ ಭಂಡಾರಿಯವರು ಉಡುಪಿ ಜಿಲ್ಲಾ ಪೋಲಿಸ್ ಕಚೇರಿಗೆ ಭೇಟಿ ನೀಡಿ ಘಟನೆಯ ಬಗ್ಗೆ ಸರಿಯಾಗಿ ಪರಿಶೀಲಿಸಿ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕಾಗಿ ಪೋಲಿಸ್ ಆಯುಕ್ತರಲ್ಲಿ ವಿನಂತಿಸಿದರು.


ಈ ಸಮಯದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕೊಡವೂರು ಮತ್ತಿತರರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100