-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
21 ವರ್ಷಗಳ ಬಳಿಕ ಭಾರತಕ್ಕೆ ಮಿಸ್ ಯುನಿವರ್ಸ್ ಪಟ್ಟ: ಕಿರೀಟ ತೊಟ್ಟ 21 ವರ್ಷದ ಹರ್ನಾಝ್ ಸಂಧು

21 ವರ್ಷಗಳ ಬಳಿಕ ಭಾರತಕ್ಕೆ ಮಿಸ್ ಯುನಿವರ್ಸ್ ಪಟ್ಟ: ಕಿರೀಟ ತೊಟ್ಟ 21 ವರ್ಷದ ಹರ್ನಾಝ್ ಸಂಧು

ಇಸ್ರೇಲ್‌: ಇಸ್ರೇಲ್‌ನಲ್ಲಿ ನಡೆದಿರುವ 70ನೇ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತದ ಹರ್ನಾಜ್ ಸಂಧು ಮಿಸ್ ಯುನಿವರ್ಸ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಹರ್ನಾಜ್‌ ಗೆಲುವಿನಿಂದ ಎರಡು ದಶಕಗಳ ಬಳಿಕ ಭಾರತಕ್ಕೆ ಈ ಕಿರೀಟ ಮುಡಿಗೇರಿದಂತಾಗಿದೆ.

ಇಸ್ರೇಲ್‌ನ ದಕ್ಷಿಣ ನಗರವಾದ ಇಲಾಟ್‌ನಲ್ಲಿ ನಡೆದ ಈ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಅಂತಿಮ ಸುತ್ತಿನಲ್ಲಿ ಹರ್ನಾಝ್ ಸಂಧು ಜಯ ಸಾಧಿಸಿದ ಜೊತೆಗೆ ವಿಶ್ವ ಸುಂದರಿ ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ. ಚಂಡೀಗಢ ಮೂಲದ ಮಾಡೆಲ್‌ ಆಗಿದ್ದ ಲಾರಾ ದತ್ತ 2000ನೇ ಸಾಲಿನಲ್ಲಿ ಭುವನ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡ ಬಳಿಕ ಭಾರತದ ಪಾಲಿಗೆ ಈ ಕಿರೀಟ ನನಸಾಗಿಯೇ ಉಳಿದಿತ್ತು. ಲಾರಾ ಅವರಿಗೂ ಮುನ್ನ 1994ರಲ್ಲಿ ಸುಷ್ಮಿತಾ ಸೇನ್‌ ಭುವನ ಸುಂದಿಯ ಪಟ್ಟ ಏರಿದ್ದರು.

‘ನೀವು ಹೇಗೆ ವ್ಯವಹರಿಸಬೇಕು ಎಂಬುದನ್ನು ವೀಕ್ಷಿಸುವ ಯುವತಿಯರಿಗೆ ನೀವು ಏನು ಸಲಹೆ ನೀಡುತ್ತೀರಿ. ಅವರು ಇಂದು ಎದುರಿಸುತ್ತಿರುವ ಒತ್ತಡಗಳು ಏನು?, ಎಂದು ಅಂತಿಮ ಸುತ್ತಿನಲ್ಲಿ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಹರ್ನಾಜ್‌, 'ಇಂದಿನ ಯುವಜನತೆ ಎದುರಿಸುತ್ತಿರುವ ಬಹುದೊಡ್ಡ ಸವಾಲೆಂದರೆ, ತಮ್ಮನ್ನು ತಾವು ನಂಬುವುದು. ನಿಮ್ಮನ್ನು ನೀವು ಅನನ್ಯರು ಎಂದು ತಿಳಿದುಕೊಳ್ಳುವುದು‌. ಅದು ನಿಮ್ಮನ್ನು ಸುಂದರವಾಗಿಸುತ್ತದೆ. ನಿಮ್ಮನ್ನು ಇತರರೊಂದಿಗೆ ಹೋಲಿಸುವುದನ್ನು ನಿಲ್ಲಿಸಿ ಮತ್ತು ಪ್ರಪಂಚದಾದ್ಯಂತ ನಡೆಯುತ್ತಿರುವ ಹೆಚ್ಚು ಮುಖ್ಯವಾದ ವಿಷಯಗಳ ಬಗ್ಗೆ ಮಾತನಾಡಿ’ ಎಂದು ಉತ್ತರಿಸಿದ್ದರು. ಈ ಉತ್ತರ ಅವರನ್ನು ಭುವನ ಸುಂದರಿ ಪಟ್ಟಕ್ಕೇರಿಸಿದೆ.

ಭಾರತದ 21 ವರ್ಷದ ಕುವರಿಯಾಗಿರುವ ಹರ್ನಾಜ್ ಸಂಧು ಇದೀಗ ವಿಶ್ವ ಸುಂದರಿ ಪಟ್ಟವನ್ನು ಏರಿ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. 'ಲಿವಾ ಮಿಸ್ ದಿವಾ ಯೂನಿವರ್ಸ್ 2021' ಆದ ಹರ್ನಾಜ್ ಸಂಧು , ಭಾರತವನ್ನು ಪ್ರತಿನಿಧಿಸುತ್ತಿರುವ ನೂತನ ಮಿಸ್ ಯೂನಿವರ್ಸ್. ಈಕೆ, 80 ದೇಶಗಳ ಸ್ಪರ್ಧಿಗಳನ್ನು ಹಿಂದಿಕ್ಕಿ 'ಮಿಸ್ ಯೂನಿವರ್ಸ್ 2021'ರ ಕಿರೀಟವನ್ನು ಮುಡಿಗೇರಿಸಿಕೊಂಡಿರುವ ಮಾಡೆಲ್. ಈ ಮೂಲಕ, ಹರ್ನಾಜ್ ಸಂಧು ಭಾರತಕ್ಕೆ ಹೆಮ್ಮೆ ತಂದಿದ್ದಾತೆ ಎಂದರೆ ತಪ್ಪಲ್ಲ . 

Ads on article

Advertise in articles 1

advertising articles 2

Advertise under the article