-->
ಗಂಡನಿಗೆ ಬೆ*ತ್ತಲೆ ವಿಡಿಯೋ ನೋಡುವ ಚಟ- ಪತ್ನಿಯಿಂದ ದೂರು

ಗಂಡನಿಗೆ ಬೆ*ತ್ತಲೆ ವಿಡಿಯೋ ನೋಡುವ ಚಟ- ಪತ್ನಿಯಿಂದ ದೂರು


ಬೆಂಗಳೂರು: ಪತಿಗೆ ಅಶ್ಲೀಲ ವೆಬ್ ಸೈಟ್ ನೋಡುವ ಚಟವಿದ್ದು ಇದನ್ನು   ಪ್ರಶ್ನಿಸಿದ್ದಕ್ಕೆ ಕಿರುಕುಳ ನೀಡುತ್ತಿದ್ದಾನೆ ಎಂದು  ಮಹಿಳೆಯೊಬ್ಬರು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಈ ಬಗ್ಗೆ  ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಮಹಿಳೆಯ ಪತಿಯ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.

ಬೆಂಗಳೂರಿನ ಜಯನಗರದ 36 ವರ್ಷದ ಮಹಿಳೆಯೊಬ್ಬರು ತನ್ನ ಪತಿ ಅಶ್ಲೀಲ ಸೈಟ್ ನೋಡುವ ಹಾಗೂ ವೇಶ್ಯೆಯರೊಂದಿಗೆ ಮೊಬೈಲ್ ಚಾಟ್ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದು ಇದನ್ನು ಪ್ರಶ್ನಿಸಿದ್ದಕ್ಕೆ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದರು. 

ಪತಿಯ  ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಆದೇಶಿಸಬೇಕು ಎಂದು ಕೋರಿ ಮಹಿಳೆ ಪಿಸಿಆರ್ ದಾಖಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನಗರದ 1ನೇ ಹೆಚ್ಚುವರಿ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ನ್ಯಾಯಾಲಯ, ಪತಿಯ ವಿರುದ್ಧ ದೂರು ದಾಖಲಿಸಿ ತನಿಖೆ ನಡೆಸುವಂತೆ ಬಸವನಗುಡಿ ಮಹಿಳಾ ಠಾಣೆ ಪೊಲೀಸರಿಗೆ ನಿರ್ದೇಶನ ನೀಡಿದೆ.ಮಹಿಳೆಯ  ದೂರಿನ ಪ್ರಕಾರ, ಈಕೆ 2019ರ ನವೆಂಬರ್ 11ರಂದು  2 ಲಕ್ಷ ಹಣ ಹಾಗೂ 1 ಲಕ್ಷ ಮೌಲ್ಯದ ಒಡವೆಗಳನ್ನು ವರದಕ್ಷಿಣೆಯಾಗಿ ನೀಡಿ ಮದುವೆಯಾಗಿದ್ದರು. ವಿವಾಹವಾದ ಕೆಲ ಸಮಯದಲ್ಲಿ ಪತಿ ಅಶ್ಲೀಲ ವಿಡಿಯೋಗಳ ಚಟಕ್ಕೆ ಬಿದ್ದಿರುವುದು ಈಕೆಯ ಗಮನಕ್ಕೆ ಬಂದಿತ್ತು. 


ಈ ಕುರಿತು ಮಹಿಳೆಯು ಪತಿಯ ಪೋಷಕರಿಗೆ ದೂರು ಹೇಳಿದಾಗ  ಆತನ ಪೋಷಕರು ತಪ್ಪು ತಿದ್ದಿಕೊಳ್ಳಲು ಒಂದು ಅವಕಾಶ ನೀಡುವಂತೆ ತಿಳಿಸಿ, ಮಗನಿಗೆ ಬುದ್ಧಿವಾದ ಹೇಳಿದ್ದರು.

ಆ ಬಳಿಕವು ಈಕೆ ಯ  ಪತಿ ತನ್ನ ದುರಭ್ಯಾಸ ತ್ಯಜಿಸದೆ ಅಶ್ಲೀಲ ವೆಬ್ ಸೈಟ್​​ಗಳಿಗೆ ಹಣ ಕಟ್ಟಿ ಸಬ್ ಸ್ಕ್ರಿಪ್ಶನ್ ತೆಗೆದುಕೊಂಡು ವೇಶ್ಯೆಯರೊಂದಿಗೆ ತಡರಾತ್ರಿವರೆಗೂ ಚಾಟಿಂಗ್  ಮಾಡುತ್ತಿದ್ದನು. ಅಲ್ಲದೇ, ಅವರೊಂದಿಗೆ ಸಂಬಂಧವಿರಿಸಿಕೊಂಡು ಹಣವನ್ನು ಹೇರಳವಾಗಿ ಖರ್ಚು ಮಾಡುತ್ತಿದ್ದನು.

 ಇದನ್ನು  ಪ್ರಶ್ನಿಸಿದ್ದಕ್ಕೆ ಈತ ಮಹಿಳೆಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ.  ಈಕೆಗೆ ಹಳಸಿದ ಊಟ ಕೊಡುತ್ತಿದ್ದನು. ಈತ ತಾನು ವಿಚ್ಛೇದಿತ ಎಂದು ಹೇಳಿಕೊಂಡು ವಿವಾಹ ವೆಬ್ ಸೈಟ್​​ನಲ್ಲಿ ತನ್ನ ಪ್ರೊಫೈಲ್ ಹಾಕಿಕೊಂಡಿದ್ದಾನೆ.  ಈ ಮೂಲಕ  ಕಿರುಕುಳ ನೀಡುತ್ತಿದ್ದಾನೆ  ಎಂದು ಮಹಿಳೆ  ದೂರಿದ್ದರು.

ನ್ಯಾಯಾಲಯದ ನಿರ್ದೇಶನದಂತೆ ಬಸವನಗುಡಿ ಮಹಿಳಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ

Ads on article

Advertise in articles 1

advertising articles 2

Advertise under the article