-->
ಕತ್ರಿನಾ ಕೈಫ್​ - ನಟ ವಿಕ್ಕಿ ಕೌಶಲ್ ಡಿಸೆಂಬರ್ ನಲ್ಲಿ ಮದುವೆಯಾಗಲಿದ್ದಾರೆಯೇ?

ಕತ್ರಿನಾ ಕೈಫ್​ - ನಟ ವಿಕ್ಕಿ ಕೌಶಲ್ ಡಿಸೆಂಬರ್ ನಲ್ಲಿ ಮದುವೆಯಾಗಲಿದ್ದಾರೆಯೇ?

ಮುಂಬೈ: ಬಾಲಿವುಡ್​ ನಟಿ ಕತ್ರಿನಾ ಕೈಫ್​ ಹಾಗೂ ನಟ ವಿಕ್ಕಿ ಕೌಶಲ್​​ ಡೇಟಿಂಗ್ ನಲ್ಲಿದ್ದಾರೆ, ಅವರಿಬ್ಬರೂ ಮದುವೆಯಾಗಲಿದ್ದಾರೆ ಎಂಬ ಸುದ್ದಿಯು ಕೆಲವು ಸಮಯಗಳಿಂದ ಹರಿದಾಡುತ್ತಿತ್ತು. ಈ ನಡುವೆ ಅವರಿಬ್ಬರ ಮದುವೆ ನಿಶ್ಚಿತಾರ್ಥವು ದೀಪಾವಳಿ ಸಂದರ್ಭ ನಡೆದ ಗೌಪ್ಯವಾಗಿ ನಡೆದಿದೆ ಎಂಬ ಸುದ್ದಿಯೂ ಕೆಲವೇ ದಿನಗಳ ಹಿಂದೆ ಕೇಳಿ ಬಂದಿತ್ತು.

ಇದೀಗ ಡಿಸೆಂಬರ್​ ತಿಂಗಳಿನಲ್ಲಿ ಈ​ ಜೋಡಿಯ ವಿವಾಹವು ಎಲ್ಲಿ, ಯಾವಾಗ ನಡೆಯಲಿದೆ ಎಂಬ ಬಗೆಗಿನ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಒಂದಷ್ಟು ವಿಚಾರಗಳು ಹರಿದಾಡುತ್ತಿವೆ. 2019 ರಿಂದ ಈ ಹಾಟ್ ಜೋಡಿ ಡೇಟಿಂಗ್ ನಲ್ಲಿದೆ ಎನ್ನಲಾಗುತ್ತಿದೆ. ಇದೀಗ ಕತ್ರಿನಾ ಮತ್ತು ವಿಕ್ಕಿ ತಮ್ಮ ಆಪ್ತವರ್ಗಕ್ಕೆ ಡಿಸೆಂಬರ್​ ತಿಂಗಳಿನಲ್ಲಿ ಬಿಡುವು ಮಾಡಿಕೊಳ್ಳಿ ಎಂದು ಹೇಳಿದ್ದರೆಂಬ ವಿಚಾರ ಮುನ್ನೆಲೆಗೆ ಬಂದಿದೆ.

ಈ ಜೋಡಿ ರಾಜಸ್ಥಾನದ ಸವಾಯಿ ಮಾಧೋಪುರ್​ನ ಸಿಕ್ಸ್​ ಸೆನ್ಸಸ್​ ಐಷಾರಾಮಿ ಹೋಟೆಲ್​ನಲ್ಲಿ ಅದ್ಧೂರಿಯಾಗಿ ಮದುವೆಯಾಗಲಿದೆ. ಡಿ. 7 ರಿಂದ 9ರವರೆಗೆ ವಿವಾಹದ ಕಾರ್ಯಕ್ರಮಗಳು ನಡೆಯಲಿವೆ ಎಂದು ಇಂಡಿಯಾ ಟುಡೇಯ ವರದಿ ಹೇಳಿದೆ. ಈ ಅದ್ಧೂರಿ ವಿವಾಹ ಸಮಾರಂಭಕ್ಕೆ ಇಬ್ಬರ ಬಂಧುಬಳಗದೊಂದಿಗೆ ಚಿತ್ರರಂಗದ ಗಣ್ಯರನ್ನು ಆಮಂತ್ರಿಸಲಿದ್ದಾರೆ. 

ಆದ್ದರಿಂದ ಆ ಸಮಯಕ್ಕೆ ಸ್ಥಳೀಯ ಕಾರ್​ ರೆಂಟಲ್​ ಸೇವೆಗಳನ್ನು ಈಗಾಗಲೇ ಬುಕ್​ ಮಾಡಲಾಗಿದೆ. ಮದುವೆಗೆ ಆಗಮಿಸುವ ಅತಿಥಿಗಳಿಗೆ ವಿಮಾನ ನಿಲ್ದಾಣದಿಂದ ಹೋಟೆಲ್​ಗೆ ತಲುಪಲು ಹಾಗೂ ಮದುವೆಯ ಬೇರೆ ಬೇರೆ ಕಾರ್ಯಕ್ರಮಗಳ ಓಡಾಟಕ್ಕೆ ಅನುಕೂಲವಾಗುವಂತೆ ವಾಹನಗಳನ್ನು ಬುಕ್​ ಮಾಡಲಾಗಿದೆ ಎಂದು ವರದಿ ಹೇಳಿದೆ. 

ಆದರೆ ಈ ವಿಚಾರದ ಕತ್ರಿನಾ ಆಗಲಿ, ವಿಕ್ಕಿ ಕೌಶಲ್ ಆಗಲಿ ಚಕಾರ ಎತ್ತಿಲ್ಲ. ಅವರಿಬ್ಬರ ಕಡೆಯಿಂದ ಈವರೆಗೆ  ಯಾವುದೇ ಆಮಂತ್ರಣ ಪತ್ರವೂ ಹೊರಬಿದ್ದಿಲ್ಲ ಎನ್ನಲಾಗಿದೆ.

Ads on article

Advertise in articles 1

advertising articles 2

Advertise under the article