-->
"ಸಂಯಾಮಿ" ಅವಳಿ ಸಹೋದರರೆಂದೇ ಪ್ರಖ್ಯಾತರಾಗಿದ್ದ ಛತ್ತೀಸ್​ಗಢದ ಶಿವನಾಥ್-ಶಿವರಾಂ ಜೋಡಿ ಇನ್ನಿಲ್ಲ

"ಸಂಯಾಮಿ" ಅವಳಿ ಸಹೋದರರೆಂದೇ ಪ್ರಖ್ಯಾತರಾಗಿದ್ದ ಛತ್ತೀಸ್​ಗಢದ ಶಿವನಾಥ್-ಶಿವರಾಂ ಜೋಡಿ ಇನ್ನಿಲ್ಲ

ಬಲೋದಬಜಾರ್ (ಛತ್ತೀಸ್​ಗಢ): ಸಂಯಾಮಿ ಅವಳಿಗಳೆಂದು ಎಲ್ಲರ ಕುತೂಹಲಕ್ಕೆ ಕಾರಣರಾದ ಶಿವನಾಥ್ ಹಾಗೂ ಶಿವರಾಂ, ಈ ಸಯಾಮಿ ಅವಳಿ ಸಹೋದರರು ತಮ್ಮ 20ನೇ ವಯಸ್ಸಿಗೆ ಕಾಅಲವಾಗಿದ್ದು, ಇದೀಗ ಬಾರದ ಲೋಕಕ್ಕೆ ಪ್ರಯಾಣಿಸಿದ್ದಾರೆ.

ಒಂದೇ ದೇಹಕ್ಕೆ ಅಂಟಿಕೊಂಡ ಎರಡು ದೇಹಗಳಿದ್ದ ಈ ಜೋಡಿಯು ಎರಡು ತಲೆ, ನಾಲ್ಕು ಕೈ ಮತ್ತು ಎರಡು ಕಾಲುಗಳೊಂದಿಗೆ ಜನಿಸಿದ್ದರು. 2001ರಲ್ಲಿ ಛತ್ತೀಸ್​ಗಢದ ಬಲೋದಬಜಾರ್ ಜಿಲ್ಲೆಯ ಖಂಡಾ ಎಂಬ ಗ್ರಾಮದಲ್ಲಿ ಜನಿಸಿದ್ದ ಈ ಸಹೋದರರನ್ನು ದೇವರ ಅದ್ಭುತ ಸೃಷ್ಟಿ ಎಂದು ಕೆಲವರು ಪೂಜಿಸಿದ್ದೂ ಉಂಟು. ಎರಡು ತಲೆ, ನಾಲ್ಕು ಕೈ ಮತ್ತು ಎರಡು ಕಾಲು ಹೊಂದಿರುವ ಇವರು ಏಷ್ಯಾದಲ್ಲೇ ಏಕೈಕ ಸಂಯಾಮಿ ಅವಳಿ ವ್ಯಕ್ತಿಗಳಾಗಿದ್ದರು. ಶಸ್ತ್ರಚಿಕಿತ್ಸೆ ಮೂಲಕ ಇಬ್ಬರನ್ನು ಬೇರ್ಪಡಿಸಿದ್ದಲ್ಲಿ ಪ್ರಾಣಕ್ಕೆ ಅಪಾಯವಿದೆ ಎಂಬ ಕಾರಣಕ್ಕೆ ಇವರಿಬ್ಬರನ್ನೂ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದರು.

ಹುಟ್ಟಿದಂದಿನಿಂದಲೇ ಈ ಸಂಯಾಮಿ ಅವಳಿ ಸಹೋದರರು ಖ್ಯಾತಿ ಗಳಿಸುತ್ತಾ ಬಂದಿದ್ದಾರೆ‌. ಇವರನ್ನು ನೋಡಬೇಕೆಂದು ವಿದೇಶಗಳಿಂದ ಜನರು ಬರುತ್ತಿದ್ದರಂತೆ. ವಿದ್ಯಾಭ್ಯಾಸದಲ್ಲೂ ನಿಪುಣರಾಗಿದ್ದ ಇವರ ಪ್ರತೀ ಕಾರ್ಯದಲ್ಲೂ ಹೊಂದಾಣಿಕೆಯಿತ್ತು. ಇವರು ವಿಶೇಷಚೇತನರಿಗೆಂದೇ ವಿಶೇಷವಾಗಿ ಮಾಡಲ್ಪಟ್ಟ ಸೈಕಲ್‌ನಲ್ಲಿಯೇ ಶಾಲೆಗೆ ಹೋಗುತ್ತಿದ್ದರು. ಇತ್ತೀಚೆಗಷ್ಟೇ ಈ ರೀತಿಯ ದ್ವಿಚಕ್ರ ವಾಹನವನ್ನೂ ಖರೀದಿಸಿದ್ದರು. 

2018ರಲ್ಲಿ ಇವರ ಕುರಿತ ವೀಡಿಯೋವೊಂದನ್ನು ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್​ ತಮ್ಮ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದರು. ಆದರೆ ಇದೀಗ ಇವರ ಸಾವಿನ ಸುದ್ದಿ ಕೇಳಿ ಎಲ್ಲರೂ ಶಾಕ್​ ಗೆ ಒಳಗಾಗಿದ್ದಾರೆ.‌ ಈ ಸಂಯಾಮಿ ಅವಳಿ ಸಹೋದರರ ಸಾವಿನ ಸುತ್ತ ಅನೇಕ ಅನುಮಾನಗಳು ಮೂಡಲು‌ ಆರಂಭಿಸಿದೆ. ಅವರದ್ದೇ ಮನೆಯಲ್ಲಿ ಇಬ್ಬರೂ ಮೃತದೇಹವಾಗಿ ಪತ್ತೆಯಾಗಿದ್ದಾರೆ. ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೆಲವರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ಶಿವನಾಥ್ ಮತ್ತು ಶಿವರಾಂ ತೀವ್ರ ಜ್ವರದಿಂದ ಬಳಲುತ್ತಿದ್ದು, ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಅವರ ತಾಯಿ ಹೇಳಿಕೆ ನೀಡಿದ್ದಾರೆ. ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

Ads on article

Advertise in articles 1

advertising articles 2

Advertise under the article