-->
ಅಡಕೆ ಸೇವನೆ ನಿಷೇಧಿಸಲು ಬಿಜೆಪಿ ಸಂಸದ ಆಗ್ರಹ

ಅಡಕೆ ಸೇವನೆ ನಿಷೇಧಿಸಲು ಬಿಜೆಪಿ ಸಂಸದ ಆಗ್ರಹ

 ರಾಂಚಿ : ಅಡಕೆ ಸೇವನೆ ಆರೋಗ್ಯಕ್ಕೆ ಹಾನಿಕರ ವಲ್ಲ ಎಂದು ಹಲವು ಸಂಶೋಧನೆಗಳು ಸಾಬೀತುಪಡಿಸಿದ್ದರೂ , “ ಜನ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುವುದನ್ನು ತಡೆಯಲು ಅಡಕೆ ಸೇವನೆ ನಿಷೇಧಿಸಬೇಕು , ' ' ಎಂದು ಜಾರ್ಖಂಡ್  ಬಿಜೆಪಿ ಸಂಸದರೊಬ್ಬರು ಪ್ರಧಾನಿ ನರೇಂದ್ರ ಮೋದಿ ಗೆ ಮನವಿ ಮಾಡಿದ್ದಾರೆ . 

ಅಡಕೆ ನಿಷೇಧ ಕುರಿತು ಮೋದಿ ಅವರಿಗೆ ಗೊಡ್ಡ ಕ್ಷೇತ್ರದ ಸಂಸದ ನಿಶಾಂಕ್ ದುಬೆ ಪತ್ರ ಬರೆದಿದ್ದು , “ ಜಾರ್ಖಂಡ್‌ನಲ್ಲಿ ಜನ ಅಡಕೆ ಸೇವಿಸಿ ಕ್ಯಾನ್ಸರ್ ಸೇರಿ ಹಲವು ಮಾರಣಾಂತಿಕ ಕಾಯಿಲೆಗಳಿಗೆ  ತುತ್ತಾ ಗುವುದನ್ನು ವೈಯಕ್ತಿಕವಾಗಿ ಗಮನಿಸಿದ್ದೇನೆ . ಪಾನ್‌ಗಳಲ್ಲಿ ಅಡಕೆ ಪ್ರಮುಖವಾಗಿ ಬಳಸಲಾಗುತ್ತಿದೆ . ಧಾರ್ಮಿಕ ಕಾರ್ಯಕ್ರಮ ಗಳಲ್ಲೂ ಅಡಕೆ ಹೆಚ್ಚಾಗಿ ತಿನ್ನುತ್ತಾರೆ . ಆದರೆ , ಅಡಕೆಯಿಂದ ಅಪಾಯವಿರುವುದರಿಂದ ಅದನ್ನು ನಿಷೇಧಿಸಬೇಕು , ' ' ಎಂದು ಅವರು ಕೋರಿದ್ದಾರೆ .

Ads on article

Advertise in articles 1

advertising articles 2

Advertise under the article