-->
ಬೆಳ್ಳಂಬೆಳಗ್ಗೆ ಕಲಬುರಗಿಯಲ್ಲಿ ಭೀಕರ ಹತ್ಯೆ: ಪೊಲೀಸ್ ಪೇದೆಯ ಪುತ್ರನ ಮೇಲೆಯೇ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ದುಷ್ಕರ್ಮಿಗಳ ತಂಡ

ಬೆಳ್ಳಂಬೆಳಗ್ಗೆ ಕಲಬುರಗಿಯಲ್ಲಿ ಭೀಕರ ಹತ್ಯೆ: ಪೊಲೀಸ್ ಪೇದೆಯ ಪುತ್ರನ ಮೇಲೆಯೇ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ದುಷ್ಕರ್ಮಿಗಳ ತಂಡ

ಕಲಬುರಗಿ: ಪೊಲೀಸ್ ಪೇದೆಯ ಪುತ್ರನನ್ನು ಗುರುವಾರ ಬೆಳ್ಳಂಬೆಳಗ್ಗೆ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದ ಘಟನೆ ಕಲಬುರಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ. 

ಕಲಬುರಗಿಯ ವಿದ್ಯಾನಗರ ನಿವಾಸಿ, ಅಭಿಷೇಕ್(27) ಕೊಲೆಯಾದ ದುರ್ದೈವಿ.‌ 

ಅಭಿಷೇಕ್ ತಂದೆ ಚಂದ್ರಕಾಂತ ಪೊಲೀಸ್ ಪೇದೆಯಾಗಿದ್ದಾರೆ. ಅಭಿಷೇಕ್ ಎಂದಿನಂತೆ ಇಂದು ಬೆಳಗ್ಗೆ ಜಿಮ್ ಗೆ ಹೋಗುವುದಾಗಿ ಮನೆಯಿಂದ ಬೈಕ್ ನಲ್ಲಿ ಹೊರಟು ಬಂದಿದ್ದಾರೆ. ಈ ವೇಳೆ ಏಳೆಂಟು ಜನರಿದ್ದ ದುಷ್ಕರ್ಮಿಗಳ ತಂಡವೊಂದು ಆತನನ್ನು ಬೆನ್ನಟ್ಟಿದೆ. ಇದನ್ನು ಅಭಿಷೇಕ್ ಗಮನಿಸಿದ್ದಾರೆ. ಅವರ ಬೈಕನ್ನು ದುಷ್ಕರ್ಮಿಗಳ ತಂಡ ಮುಖ್ಯರಸ್ತೆಯಿಂದಲೇ  ಬೆನ್ನಟ್ಟಿದೆ. ಆದ್ದರಿಂದ ಅಭಿಷೇಕ್ ಪ್ರಾಣಭಯದಿಂದ ಬಸ್ ನಿಲ್ದಾಣದೊಳಗೆ ಓಡಿ ಬಂದಿದ್ದಾರೆ. 

ಆದರೂ ಸಹ ಬಿಡದೆಮ ದುಷ್ಕರ್ಮಿಗಳ ತಂಡ ಬಸ್ ನಿಲ್ದಾಣದ ಆವರಣದೊಳಗೆ ಸಾರ್ವಜನಿಕ ಮುಂಭಾಗ ಮಾರಕಾಸ್ತ್ರಗಳಿಂದ ಅಭಿಷೇಕ್ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೆ ಮಾರಕಾಯುಧಗಳಿಂದ ಕೊಚ್ಚಿ, ಕೊಲೆ ಮಾಡಿ ಹಂತಕರು ಪರಾರಿಯಾಗಿದ್ದಾರೆ. 

ಈ ಭೀಕರ ದೃಶ್ಯ ಕಂಡು ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ನಗರ ಉಪ ಪೊಲೀಸ್ ಆಯುಕ್ತ ಎ.ಶ್ರೀನಿವಾಸಲು, ಇನ್ ಸ್ಪೆಕ್ಟರ್ ಪಂಡಿತ ಸಗರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌. ಈ ಬಗ್ಗೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Ads on article

Advertise in articles 1

advertising articles 2

Advertise under the article